Day: March 2, 2020

ದೇಯಿ ಬೈದ್ಯೇತಿ ಕೋಟಿ ಚೆನ್ನಯರ ಸಮಾಗಮ: ಮಗುವಿನ ಹೆಜ್ಜೆಗುರುತು ನಮ್ಮದೆಂದು ನುಡಿದರು.

ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತ್ಲ್‌ನಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸದ ಬಳಿಕ ಮೂಲಸ್ಥಾನ ಗರಡಿ ನೇಮ ನಡೆಯಿತು. ಮಾ. 1ರಂದು ರವಿವಾರ ಬೆಳಗ್ಗೆ ಭಜನ ಮಹೋತ್ಸವ, ಸಂಜೆ ಮೂಲಸ್ಥಾನ ಗರಡಿಯಲ್ಲಿ ಕಲಶ ಹೋಮ, ರಾತ್ರಿ ಮೂಲಸ್ಥಾನ ಗರಡಿಯಲ್ಲಿ ಕೋಟಿ- ಚೆನ್ನಯರ ದರ್ಶನ, ಬೆರ್ಮೆರ್‌ ಗುಂಡದಲ್ಲಿ ಫಲ ಸಮರ್ಪಣೆ ನಡೆಯಿತು. ವೀರಪಥದಲ್ಲಿ ಕೋಟಿ-ಚೆನ್ನಯರ ಆಗಮನ, ಸತ್ಯಧರ್ಮ ಚಾವಡಿಯಲ್ಲಿ ಮಾತೆ ದೇಯಿ ಬೈದ್ಯೆತಿ ದರ್ಶನ, ಮಾತೆ-ಮಕ್ಕಳ ಪುನೀತ ಸಮಾಗಮ, ಕೋಟಿ ಚೆನ್ನಯರ ಮೂಲಸ್ಥಾನ ನೇಮ, ದರ್ಶನ ಸೇವೆ …

ದೇಯಿ ಬೈದ್ಯೇತಿ ಕೋಟಿ ಚೆನ್ನಯರ ಸಮಾಗಮ: ಮಗುವಿನ ಹೆಜ್ಜೆಗುರುತು ನಮ್ಮದೆಂದು ನುಡಿದರು. Read More »

ಗ್ರಾಮಸ್ಥರ ಗೈರು- ಕಾಣಿಯೂರು ಗ್ರಾಮ ಸಭೆ ರದ್ದು

ಕಾಣಿಯೂರು: ಕಾಣಿಯೂರು ಗ್ರಾಮ ಸಭೆಯನ್ನು ಗ್ರಾಮಸ್ಥರ ಗೈರಿನ ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿದೆ. ಕಾಣಿಯೂರು ಗ್ರಾ.ಪಂ ವ್ಯಾಪ್ತಿಯ ಕಾಣಿಯೂರು, ಚಾರ್ವಾಕ, ದೋಳ್ಪಾಡಿ ಗ್ರಾಮಗಳ ಸಾಲಿನ 2019-20ನೇ ಸಾಲಿನ ದ್ವಿತೀಯ ಸುತ್ತಿನ ಕಾಣಿಯೂರು ಗ್ರಾಮ ಸಭೆಯು ಮಾ 2ರಂದು ಕಾಣಿಯೂರು ಸ.ಹಿ.ಪ್ರಾ.ಶಾಲೆಯಲ್ಲಿ ಗ್ರಾ.ಪಂ, ಅಧ್ಯಕ್ಷೆ ಮಾಧವಿ ಕೋಡಂದೂರು ಅವರ ಅಧ್ಯಕ್ಷತೆಯಲ್ಲಿ ನಡೆಯಬೇಕಾಗಿತ್ತು. ಜನಪ್ರತಿನಿಧಿಗಳು, ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಚರ್ಚಾನಿಯಂತ್ರಣಾಧಿಕಾರಿಗಳು, ಇಲಾಖಾಧಿಕಾರಿಗಳು ಗ್ರಾಮ ಸಭೆಯಲ್ಲಿ ಭಾಗವಹಿಸಿತ್ತಾದರೂ ಗ್ರಾಮಸ್ಥರ ಗೈರಿನಿಂದ ಗ್ರಾಮ ಸಭೆಯನ್ನು ರದ್ದುಗೊಳಿಸಿ, ಮುಂದೂಡಲಾಗಿದೆ ಎಂದು ವರದಿಯಾಗಿದೆ. 7 ಮಂದಿ ಭಾಗಿ: ಕಾಣಿಯೂರು …

ಗ್ರಾಮಸ್ಥರ ಗೈರು- ಕಾಣಿಯೂರು ಗ್ರಾಮ ಸಭೆ ರದ್ದು Read More »

ಮಾ.14 ರೊಳಗೆ ಆಶ್ರಯ ಮನೆ ಕಾಮಗಾರಿ ಆರಂಬಿಸದಿದ್ದರೆ ಫಲಾನುಭವಿ ಕಪ್ಪು ಪಟ್ಟಿಗೆ!

ಬೆಂಗಳೂರು: ಆಶ್ರಯ ಮನೆ ಯೋಜನೆಯಡಿ ಹಿಂದಿನ ಸರಕಾರದ ಅವಧಿಯಲ್ಲಿ ನಿಗದಿತ ಸಮಯದಲ್ಲಿ ನಿರ್ಮಾಣ ಮಾಡಿಕೊಳ್ಳಲಾಗದೆ ತಡೆಹಿಡಿಯಲ್ಪಟ್ಟ ಮನೆಗಳನ್ನು ಮರು ನಿರ್ಮಿಸಿಕೊಳ್ಳಲು “ಇನ್ನೊಂದು ಬಾರಿ’ಯ ಅವಕಾಶ ಕಲ್ಪಿಸಲು ಸರಕಾರ ನಿರ್ಧರಿಸಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಪ್ರತಿ ವರ್ಷ ಮೂರು ಲಕ್ಷದಂತೆ 15 ಲಕ್ಷ ಮನೆ ನಿರ್ಮಾಣದ ಗುರಿ ಹಾಕಿಕೊಳ್ಳಲಾಗಿತ್ತು. ಅವರ ಅವಧಿಯಲ್ಲಿ ಸುಮಾರು 13 ಲಕ್ಷ ಮನೆಗಳನ್ನು ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಆಗ ಆಯ್ಕೆಯಾದ 2.63 ಲಕ್ಷ ಮಂದಿ ಫ‌ಲಾನುಭವಿಗಳು ಸರ ಕಾರದ ನಿಯಮದ ಪ್ರಕಾರ ನಿಗದಿತ …

ಮಾ.14 ರೊಳಗೆ ಆಶ್ರಯ ಮನೆ ಕಾಮಗಾರಿ ಆರಂಬಿಸದಿದ್ದರೆ ಫಲಾನುಭವಿ ಕಪ್ಪು ಪಟ್ಟಿಗೆ! Read More »

ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ – ಉಡುಪಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವರ್ಷ ಧಾರೆ : ಹವಾಮಾನ ಇಲಾಖೆ

ಮಾರ್ಚ್ 2 : ಮುಂದಿನ ಎರಡು ದಿನಗಳ ಕಾಲ ಕರ್ನಾಟಕದಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಂದಿನ 24 ಗಂಟೆಯೊಳಗೆ ಕರ್ನಾಟಕದ ಕರಾವಳಿ ಪ್ರದೇಶ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಜೋರು ಮಳೆ ಬೀಳಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ; ಉತ್ತರ ಕನ್ನಡ, ಬೆಳಗಾವಿ, ಬೀದರ್, ಬಾಗಲಕೋಟೆ, ಕಲಬುರಗಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ನಗರ, ಚಾಮರಾಜನಗರ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾವೇರಿ, ಚಿತ್ರದುರ್ಗ, …

ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ – ಉಡುಪಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವರ್ಷ ಧಾರೆ : ಹವಾಮಾನ ಇಲಾಖೆ Read More »

ಪಡಿತರ ಚೀಟಿದಾರರಿಗೆ ಇನ್ಮುಂದೆ ಸಿಗಲಿದೆ ತೊಗರಿಬೇಳೆ, ಸಕ್ಕರೆ, ಗೋಧಿ

ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಅಕ್ಕಿ ಜೊತೆಗೆ ಸಕ್ಕರೆ, ಉಪ್ಪು, ಗೋಧಿ ವಿತರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು ಏಪ್ರಿಲ್ 1ರಿಂದ ಪರಿಷ್ಕೃತ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ. ಅನ್ನಭಾಗ್ಯ ಯೋಜನೆಯಡಿ 7 ಕೆಜಿ ಅಕ್ಕಿ ಉಚಿತವಾಗಿ ನೀಡುತ್ತಿದ್ದು ಅದನ್ನು ಒಂದು ಕೆಜಿಗೆ ಕಡಿತಗೊಳಿಸಿ ಒಂದು ಕೆಜಿ ತೊಗರಿಬೇಳೆ, ಒಂದು ಕೆಜಿ ಸಕ್ಕರೆ, 1 ಕೆಜಿ ಉಪ್ಪು, ಒಂದು ಲೀಟರ್ ಎಣ್ಣೆ ರಿಯಾಯಿತಿ ದರದಲ್ಲಿ ನೀಡಲು ಯೋಜನೆ ಸಿದ್ಧಪಡಿಸಲಾಗಿದೆ . ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುವ ಶೇಕಡ 20 …

ಪಡಿತರ ಚೀಟಿದಾರರಿಗೆ ಇನ್ಮುಂದೆ ಸಿಗಲಿದೆ ತೊಗರಿಬೇಳೆ, ಸಕ್ಕರೆ, ಗೋಧಿ Read More »

ಅಕ್ರಮ ಮರಳು ಸಾಗಾಟದ ಮೊದಲ ಚಿತ್ರಸಮೇತ ತನಿಖಾ ವರದಿ ನೀಡಿದ್ದೇ ಹೊಸಕನ್ನಡ : ಸ್ಪಂದಿಸಿದೆ ಪೊಲೀಸ್ ಇಲಾಖೆ !

ಮರಳು ಸಾಗಾಟ ಲಾರಿಗೆ ರಾಜಸ್ಥಾನ ಮೂಲದ ಕಾರ್ಮಿಕ ಮೇಘರಾಜ್ ಬಲಿಯಾದ ಸುದ್ದಿಯ ಹಿಂದಿನ ಸತ್ಯವನ್ನು ಬೆನ್ನಟ್ಟಿ ಹೋದ ಹೊಸಕನ್ನಡಕ್ಕೆ ಎಲ್ಲರಿಗಿಂತ ಮೊದಲು ಸಿಕ್ಕಿತ್ತು ಅಕ್ರಮ ಮರಳು ದಂಧೆಯ ವಾಸನೆ. ಘಟನೆಯ ಜಾಡನ್ನು ಬೆನ್ನು ಹಿಡಿದು ಹೋದ ನಾವು ” Big twist ಮರ್ದಾಳ ಅಪಘಾತ : ಮರಳು ಅಕ್ರಮ ಸಾಗಾಟ ಲಾರಿಗೆ ಬೈಕ್ ಸವಾರ ಬಲಿ “ ಎಂದು ನಿನ್ನೆ ರಾತ್ರಿ 8.30 ರ ಸುಮಾರಿಗೇ ಚಿತ್ರ ಸಮೇತವಾಗಿ ಪ್ರಕಟಿಸಿದ್ದೆವು. ನಾವು ನಿನ್ನೆ ರಾತ್ರಿ ಪ್ರಕಟಿಸಿದ ಸುದ್ದಿ …

ಅಕ್ರಮ ಮರಳು ಸಾಗಾಟದ ಮೊದಲ ಚಿತ್ರಸಮೇತ ತನಿಖಾ ವರದಿ ನೀಡಿದ್ದೇ ಹೊಸಕನ್ನಡ : ಸ್ಪಂದಿಸಿದೆ ಪೊಲೀಸ್ ಇಲಾಖೆ ! Read More »

ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಜೆಟ್ ಇಂಪ್ಲಿಕೇಷನ್ಸ್ ಮತ್ತು ಕನ್ಸರ್ನ್ಸ್ ಕಾರ್ಯಾಗಾರ

ಸವಣೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಬಜೆಟ್ ಇಂಪ್ಲಿಕೇಷನ್ಸ್ ಮತ್ತು ಕನ್ಸರ್ನ್ಸ್  ಎಂಬ ವಿಷಯದ ಬಗ್ಗೆ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು ಮಾತನಾಡಿ,ಒಂದು ದೇಶದ ಅಭಿವೃದ್ಧಿಯಲ್ಲಿ ಆ ದೇಶದ ಬಜೆಟ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಾವು ಸರ್ಕಾರಕ್ಕೆ ಸಲ್ಲಿಸುವ ತೆರಿಗೆ, ಸರ್ಕಾರ ಅದನ್ನು ವಿನಿಯೋಗಿಸುವ ರೀತಿ ಇವೆಲ್ಲವನ್ನೂ ಇಂದಿನ ವಿದ್ಯಾರ್ಥಿಗಳು ತಿಳಿದುಕೊಳ್ಳುವ ಅವಶ್ಯಕತೆಯಿದೆ ಎಂದರು.  ಸಂಪನ್ಮೂಲ ವ್ಯಕ್ತಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ …

ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಜೆಟ್ ಇಂಪ್ಲಿಕೇಷನ್ಸ್ ಮತ್ತು ಕನ್ಸರ್ನ್ಸ್ ಕಾರ್ಯಾಗಾರ Read More »

ಕಾವು ಮದ್ಲ : ಬಸ್ -ಬೈಕ್ ಡಿಕ್ಕಿ ಸವಾರ ಮೃತ್ಯು

ಪುತ್ತೂರು: ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕಾವು ಸಮೀಪದ ಮದ್ಲ ಎಂಬಲ್ಲಿ ಕೆಎಸ್‌ಅರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಮಾ.2 ರಂದು ನಡೆದಿದೆ. ಮೃತಪಟ್ಟ ಯುವಕನನ್ನು ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಚಂದ್ರ ಗೌಡ ಎಂಬವರ ಮಗ ಪ್ರಶಾಂತ್ ಎಂದು ಗುರುತಿಸಲಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ಗೆ ತರಲಾಗಿದೆ.

ಕಾಣಿಯೂರು ವಿಶ್ವಜ್ಞ ಯುವಕ ಮಂಡಲದಿಂದ ಕೇಂದ್ರ ಯೋಜನೆಗಳ ತರಬೇತಿ ಕಾರ್ಯಗಾರ

ಕಾಣಿಯೂರು: ಯುವ ಶಕ್ತಿಯೇ ನಮ್ಮ ದೇಶದ ಸಂಪತ್ತು. ಆ ಯುವ ಶಕ್ತಿಯ ಸದ್ಬಳಕೆವಾದಾಗ ನಮ್ಮ ದೇಶದ ಸಂಸ್ಕøತಿಯ ಜೊತೆಗೆ ಸಂಪತ್ತನ್ನು ಉಳಿಸಲು ಸಾಧ್ಯ. ನಮ್ಮ ಜೀವನ ರೂಪಿಸುವಾಗ ಸ್ವಾಮಿ ವಿವೇಕಾನಂದರ ಆದರ್ಶ ಗುಣಗಳು ಮಾದರಿಯಾಗಬೇಕು ಎಂದು ಬೆಳಂದೂರು ಜಿ.ಪಂ, ಕ್ಷೇತ್ರದ ಸದಸ್ಯೆ ಪ್ರಮೀಳಾ ಜನಾರ್ದನ ಹೇಳಿದರು. ಅವರು ಭಾರತ ಸರಕಾರ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕøತ ವಿಶ್ವಜ್ಞ ಯುವಕ ಮಂಡಲ ಕಾಣಿಯೂರು ಇದರ ಸಂಯುಕ್ತ ಆಶ್ರಯದಲ್ಲಿ …

ಕಾಣಿಯೂರು ವಿಶ್ವಜ್ಞ ಯುವಕ ಮಂಡಲದಿಂದ ಕೇಂದ್ರ ಯೋಜನೆಗಳ ತರಬೇತಿ ಕಾರ್ಯಗಾರ Read More »

ಕುದ್ಮಾರು ಬರೆಪ್ಪಾಡಿ: ಓಮ್ನಿ ಪಲ್ಟಿ

ಪುತ್ತೂರು: ಕಾಣಿಯೂರು -ಸುಬ್ರಹ್ಮಣ್ಯ ರಸ್ತೆಯ ಸವಣೂರು ಕುದ್ಮಾರು ನಡುವಿನ ಚಾಪಲ್ಲ ಸಮೀಪ ಓಮ್ನಿ ಪಲ್ಟಿಯಾಗಿ ಪಕ್ಕದ ಚರಂಡಿಗೆ ಬಿದ್ದು ಗುಡ್ಡಕ್ಕೆ ಮುಖಮಾಡಿ ಅಡ್ಡ ಬಿದ್ದಿದೆ. ಘಟನೆಯು ಬರೆಪ್ಪಾಡಿಯ ಹತ್ತನೆ ಕಲ್ಲು ಎಂಬಲ್ಲಿ ಜರುಗಿದೆ. ಘಟನೆಯಲ್ಲಿ ಚಾಲಕನಿಗೆ ಅಲ್ಪ ಸ್ವಲ್ಪ ಗಾಯವಾಗಿದೆ.

error: Content is protected !!
Scroll to Top