ಲವ್‌ ಜಿಹಾದ್‌ ಹೆಸರಿನಲ್ಲಿ ವಿದೇಶಕ್ಕೆ ಯುವತಿಯರ ಮಾರಾಟ: ಸಂಸದೆ ಶೋಭಾ ಆರೋಪ

0 10

ಬೆಂಗಳೂರು : ಪ್ರೀತಿಯ ನಾಟಕವಾಡಿ ಲವ್‌ ಜೆಹಾದ್‌’ ಹೆಸರಿನಲ್ಲಿ ವಿದೇಶಗಳಿಗೆ ಯುವತಿಯರ ಮಾರಾಟ ನಡೆಯುತ್ತಿದೆ , ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಕರ್ನಾಟಕ ಪತ್ರಕರ್ತೆಯರ ಸಂಘ ಆಯೋಜಿಸಿದ್ದ “ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸುವ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಮಾಲೋಚನೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ರಾಜ್ಯದ ಹೆಣ್ಣು ಮಕ್ಕಳನ್ನು ಹೈದರಾಬಾದ್‌, ಮುಂಬೈಗೆ ಬಲವಂತವಾಗಿ ಕರೆದುಕೊಂಡು ಹೋಗಿ ವೇಶ್ಯಾವಾಟಿಕೆಯಂತಹ ಕೂಪಕ್ಕೆ ತಳ್ಳಲಾಗುತ್ತಿದೆ.

ಮೈಸೂರು ಜಿಲ್ಲೆಯ ಗುಂಡ್ಲುಪೇಟೆ, ಎಚ್‌.ಡಿ.ಕೋಟೆ ಭಾಗದ ಮಕ್ಕಳು ನಾಪತ್ತೆ ಆಗುತ್ತಲೇ ಇದ್ದು ಇದರ ಹಿಂದಿರುವ ಶಕ್ತಿಗಳನ್ನು ಮಟ್ಟಹಾಕಬೇಕಾಗಿದೆ ಎಂದರು.

ಅತ್ಯಾಚಾರ ಸಂಬಂಧಿಸಿದಂತೆ ನ್ಯಾಯಾಲಯದ ಮೊರೆ ಹೋದ ತತ್‌ಕ್ಷಣ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿಲ್ಲ .ವಿಚಾರಣೆ, ಸಾಕ್ಷಿಗಳ ಮೇಲೆ ಪ್ರಭಾವ ಹೀಗೆ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಯತ್ನ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿಯೇ ಹೈದರಾಬಾದ್‌ ಘಟನೆಯ ಅತ್ಯಾಚಾರಿಗಳನ್ನು ಎನ್‌ಕೌಂಟರ್‌ ಆದಾಗ ಹೆಣ್ಣು ಮಕ್ಕಳು ಸಂಭ್ರಮಿಸಿದ್ದರು ಎಂದರು.

Leave A Reply