ಇಚ್ಲಂಪಾಡಿ -ನೇರ್ಲ-ಕೈಪನಡ್ಕ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕಡಬ : ಜಿ.ಪಂ ಹಾಗೂ ಗ್ರಾ.ಪಂನ 5 ಲಕ್ಷ ಅನುದಾನದಲ್ಲಿ ಕಾಂಕ್ರೀಟಿಕರಣಗೊಂಡ ನೂಜಿಬಾಳ್ತಿಲ ಗ್ರಾ.ಪಂಗೊಳಪಟ್ಟ  ಇಚ್ಲಂಪಾಡಿ ನೇರ್ಲ- ಕೈಪನಡ್ಕ ರಸ್ತೆ ಯ ಉದ್ಘಾಟನೆ ನಡೆಯಿತು.


Ad Widget

Ad Widget

Ad Widget

Ad Widget

Ad Widget

Ad Widget

     ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್  ಉದ್ಘಾಟಿಸಿ ಮಾತನಾಡಿ ತನ್ನ ಜಿ.ಪಂ ವ್ಯಾಪ್ತಿಯಲ್ಲಿ ಹೆಚ್ಚಿನ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು ರಸ್ತೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿಗೆ ಶ್ರಮಿಸಲಾಗಿದೆ ಎಂದರು.

   ಗ್ರಾ.ಪಂ ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ಗ್ರಾ.ಪಂ ಸದಸ್ಯ ಪಿ.ಯು ಸ್ಕರಿಯ, ಸಿವಿಲ್ ಒಂಜಿನಿಯರ್ ಚಾಕೋ , ಗುತ್ತಿಗೆದಾರ ಉಸ್ಮಾನ್ ಕೊಲ್ಲೆಜಾಲ್ , ವಿದ್ಯುತ್ ಗುತ್ತಿಗೆದಾರ ಅಭಿಲಾಷ್ ಪಿ.ಕೆ, ಅಡೆಂಜ ಶಾಲಾ ಶಿಕ್ಷಕಿ ತಾರಾ, ಪ್ರಮುಖರಾದ ಅನಿಲ್ ಕೆ.ಟಿ , ತೋಮಸ್ ಇಡೆಯಾಳ, ಮೊದಲಾದವರು ಉಪಸ್ಥಿತರಿದ್ದರು. ನೂಜಿಬಾಳ್ತಿಲ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆನಂದ ಎ ಸ್ವಾಗತಿಸಿ ವಂದಿಸಿದರು.

error: Content is protected !!
Scroll to Top
%d bloggers like this: