ಸರಣಿ ಅತ್ಯಾಚಾರ ಯತ್ನಕ್ಕೆ ಇನ್ನೊಂದು ಸೇರ್ಪಡೆ । ಮುಂಡೂರಿನ ಮಹಮ್ಮದ್ ಇಲ್ಯಾಸ್ ಪೋಕ್ಸೋ ಹಿಡಿತದಲ್ಲಿ

ಪುತ್ತೂರು : ಸಾಲು ಸಾಲು ಅತ್ಯಾಚಾರ-ಯತ್ನಗಳನ್ನು ಕೇಳಿ ಬೇಸತ್ತಿರುವ ಜನರಿಗೆ ಮತ್ತೊಂದು ಅಂತಹ ಸುದ್ದಿ ಕೊಡಬೇಕಾಗಿದೆ. ಪುತ್ತೂರು ತಾಲೂಕು ಸಂಪ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆಯೋರ್ವರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ.


Ad Widget

Ad Widget

ಆರೋಪಿ ಮಹಮ್ಮದ್ ಇಲ್ಯಾಸ್ (26 ವ) ನನ್ನು ಸಂಪ್ಯ ಪೊಲೀಸರು ಇಂದು, ಫೆ.26 ರಂದು ಬಂಧಿಸಿದ್ದಾರೆ.


Ad Widget

ಮೂಲತಃ ಪುತ್ತೂರಿನ ಮುಂಡೂರು ನಿವಾಸಿಯಾದ ಮಹಮ್ಮದ್ ಇಲ್ಯಾಸ್ ವೃತ್ತಿಯಲ್ಲಿ ಶಾಮಿಯಾನ ಮತ್ತು ಇಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದಾನೆ. ಮಹಮ್ಮದ್ ಇಲ್ಯಾಸ್ ನು ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಸಂಪ್ಯ‌ ಪೊಲೀಸ್ ಠಾಣೆಗೆ ದೂರು ಬಂದಿತ್ತು.

ಬಂದ ದೂರಿನ ಮೇರೆಗೆ, ಪ್ರಾಥಮಿಕ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಆತನ ಮೇಲೆ ಮಕ್ಕಳ ಮೇಲಿನ ಹಲ್ಲೆ ಮತ್ತು ಅತ್ಯಾಚಾರ ತಡೆ ಕಾನೂನು – ಪೋಕ್ಸೋ ( Protection of Children from Sexual Offences (POCSO) Act, 2012 ) ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

Ad Widget

Ad Widget

Ad Widget
error: Content is protected !!
Scroll to Top
%d bloggers like this: