Day: February 24, 2020

ಎದೆನೋವು ಕಾಣಿಸಿಕೊಂಡ ಮಹಿಳೆಯ ಆಸ್ಪತ್ರೆಗೆ ಸೇರಿಸಿದ ಮಹೇಶ್ ಬಸ್ ಸಿಬಂದಿ

ಮಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅನಾರೋಗ್ಯಕ್ಕೀಡಾದ ಮಹಿಳೆಗೆ ಕಾಳಜಿ ತೋರಿ ಆಕೆಯ ನೆರವಿಗೆ ನಿಂತು ಬಸ್ಸಿನ ಚಾಲಕ ಹಾಗೂ ನಿರ್ವಾಹಕ ಮಾನವೀಯತೆ ಮೆರೆದಿದ್ದಾರೆ. ತಲಪಾಡಿ ಕಿನ್ಯಾದಿಂದ ಮಂಗಳೂರಿಗೆ ಬರುತ್ತಿದ್ದ ಬಸ್ಸಿನಲ್ಲಿ ಮಹಿಳೆಯೊಬ್ಬರಿಗೆ ಎದೆ ನೋವು ಕಾಣಿಸಿಕೊಂಡ ತಕ್ಷಣ ಬಸ್ ಚಾಲಕರು ಜಾಗೃತರಾಗಿದ್ದಾರೆ. ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಬಸ್ ಚಾಲಕ ಹಾಗೂ ನಿರ್ವಾಹಕರು ಬಸ್ಸನ್ನು ಯಾವುದೇ ನಿಲ್ದಾಣಗಳಲ್ಲಿ ನಿಲ್ಲಿಸದೆ ನೇರವಾಗಿ ಖಾಸಗಿ ಆಸ್ಪತ್ರೆಗೆ ತಂದು ಮಹಿಳೆಗೆ ಜೀವದಾನ ನೀಡಿದ್ದಾರೆ. ಚಾಲಕ ಪ್ರಮೋದ್ ಹಾಗೂ ನಿರ್ವಾಹಕ ಅಶ್ವಿತ್ ಮಹಿಳೆಗೆ ಕಾಳಜಿ …

ಎದೆನೋವು ಕಾಣಿಸಿಕೊಂಡ ಮಹಿಳೆಯ ಆಸ್ಪತ್ರೆಗೆ ಸೇರಿಸಿದ ಮಹೇಶ್ ಬಸ್ ಸಿಬಂದಿ Read More »

ಬಂಟ್ವಾಳದ ಅಳಿಕೆ ಗ್ರಾಮದ ಕಾಂತಡ್ಕ ಎಂಬಲ್ಲಿ ಗಾಂಜಾ ವಶ : ಆರೋಪಿ ಹ್ಯಾರೀಸ್ ವಿಟ್ಲ ಪೊಲೀಸರ ಕೈ ವಶ

ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಕಾಂತಡ್ಕ ಎಂಬಲ್ಲಿ ವಿಟ್ಲ ಪೊಲೀಸರು ದಾಳಿ ನಡೆಸಿ ಮಾದಕ ವಸ್ತುವಾದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.  ಇಂದು ಬೆಳಿಗ್ಗೆ ಸುಮಾರು 9.30 ಗಂಟೆಗೆ  ಕೆಎಲ್ 11- ಡಬ್ಲ್ಯೂ- 3418 ನೊಂದಣಿ ಸಂಖ್ಯೆಯ ಟಿಪ್ಪರ್ ಲಾರಿಯಲ್ಲಿ  ಮಾದಕ ವಸ್ತುವಾದ ಗಾಂಜಾವನ್ನು ಅಕ್ರಮವಾಗಿ ಸಾಗಾಟ ನಡೆಸಲು ಉದ್ದೇಶಿಸಲಾಗಿತ್ತು. ಘಟನೆಯ ಜಾಡನ್ನು ಅರಿತ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ಧಾಳಿ ನಡೆಸಿದರು. ಆಗ 1.46 ಕೆಜಿ ಗಾಂಜಾವನ್ನು ಮತ್ತು ಮಾದಕ ವಸ್ತು ಸಾಗಾಟಕ್ಕೆ …

ಬಂಟ್ವಾಳದ ಅಳಿಕೆ ಗ್ರಾಮದ ಕಾಂತಡ್ಕ ಎಂಬಲ್ಲಿ ಗಾಂಜಾ ವಶ : ಆರೋಪಿ ಹ್ಯಾರೀಸ್ ವಿಟ್ಲ ಪೊಲೀಸರ ಕೈ ವಶ Read More »

“ಬಾಲವನಕ್ಕೆ ಹೆಜ್ಜೆ ಇಡೋಣ,ಕಾರಂತರ ಕನಸುಗಳಿಗೆ ಜೀವ ತುಂಬೋಣ ” ಸಾಂಸ್ಕತಿಕ ಜಾಥಾದ ಅಮತ್ರಂಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

ಡಾ. ಶಿವರಾಮ ಕಾರಂತ ಬಾಲವನ ಅಭಿವೃದ್ದಿ ಸಮಿತಿ ಪುತ್ತೂರು, ಸಹಾಯಕ ಆಯುಕ್ತರ ಕಛೇರಿ ಸಭಾಂಗಣದಲ್ಲಿ, ಉಪವಿಭಾಗ ಹಾಗೂ ಪುತ್ತೂರು ತಾಲೂಕು ಪತ್ರಕರ್ತರ ಸಂಘ ಇವರ ಆಶ್ರಯದಲ್ಲಿ ಬಾಲವನಕ್ಕೆ ಹೆಜ್ಜೆ ಇಡೋಣ-ಕಾರಂತರ ಕನಸುಗಳಿಗೆ ಜೀವ ತುಂಬೋಣ ಎಂಬ ಸಾಂಸ್ಕತಿಕ ಜಾಥಾದ ಅಮತ್ರಂಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ಪುತ್ತೂರಿನ ಬಸ್ಸು ನಿಲ್ದಾಣದ ಬಳಿ ನಡೆಯಿತು. ಅಮಂತ್ರಣ ಪತ್ರಿಕೆಯನ್ನು ಕರ್ನಾಟಕ ಯುವ ಸಂಘಗಳ ಒಕ್ಕೂಟದ ಫ್ರದಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಬಿಡುಗಡೆಗೋಳಿಸಿದರು. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅದ್ಯಕ್ಷ …

“ಬಾಲವನಕ್ಕೆ ಹೆಜ್ಜೆ ಇಡೋಣ,ಕಾರಂತರ ಕನಸುಗಳಿಗೆ ಜೀವ ತುಂಬೋಣ ” ಸಾಂಸ್ಕತಿಕ ಜಾಥಾದ ಅಮತ್ರಂಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ Read More »

ದಂತ ಜೋರ ನರಹಂತಕ ವೀರಪ್ಪನ್ ನ ಮಗಳು ವಿದ್ಯಾರಾಣಿ ಬಿಜೆಪಿಗೆ | ಮತ ಬೇಟೆ ಶುರು !

ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್ ಮತ್ತು ತಮಿಳುನಾಡಿನ ಮಾಜಿ ಕೇಂದ್ರ ಮಂತ್ರಿ ಪೊನ್ ರಾಮಕೃಷ್ಣನ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದಳು. ಸುಮಾರು 120 ಕ್ಕೂ ಹೆಚ್ಚು ಜನರ ಕೊಲೆಗೆ ಕಾರಣವಾಗಿದ್ದ ಇವನು ಪೋಲಿಸರ ಕಣ್ಣಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ, ಕರ್ನಾಟಕ ಕೇರಳ ತಮಿಳುನಾಡು ಕಾಡನ್ನು ಅಕ್ಷರಶ: ರಾಜನಂತೆ ಆಳಿದವನು ವೀರಪ್ಪನ್. ಈಗ ಆತನ ಮಗಳು ಬಿಜೆಪಿ ಸೇರಿ ರಾಜಕಾರಣಿಯಾಗಲು ಹೊರಟಿದ್ದಾಳೆ. ಅಪ್ಪನಿಗೆ ಸ್ವತಃ ರಾಜಕಾರಣಿಯಾಗಬೇಕೆಂಬ ತುಡಿತವಿತ್ತು. ಆದರೆ ಆತ ಕ್ರೌರ್ಯದ …

ದಂತ ಜೋರ ನರಹಂತಕ ವೀರಪ್ಪನ್ ನ ಮಗಳು ವಿದ್ಯಾರಾಣಿ ಬಿಜೆಪಿಗೆ | ಮತ ಬೇಟೆ ಶುರು ! Read More »

30 ವರ್ಷಗಳ ರಕ್ತಸಿಕ್ತ ಜೀವನಕ್ಕೆ ಒಂದು ಬಿಡುವು । ಭೂಗತ ಪಾತಕಿ ರವಿ ಪೂಜಾರಿ ಬೆಂಗಳೂರಿಗೆ

ಕಳೆದ  30 ವರ್ಷಗಳಿಂದಲೂ ಅಧಿಕ ಸಮಯದಿಂದ ಕರ್ನಾಟಕ ರಾಜ್ಯದ ಮತ್ತು ದೇಶದ ಪೊಲೀಸರಿಗೆ 60 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ವ್ಯಕ್ತಿಯನ್ನು ಕೊನೆಗೂ ಪೊಲೀಸರು ಕೈಗೆ ಕೋಳ ತೊಡಿಸಿಕೊಂಡು ಕರೆತಂದಿದ್ದಾರೆ. ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳಾದ ಎಡಿಜಿಪಿ ಅಮರ್ಕುಮಾರ್ ಪಾಂಡೆ ಮತ್ತು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ್ ನೇತೃತ್ವದ ತಂಡ ತಂಡ ದಕ್ಷಿಣ ಆಫ್ರಿಕಾದ ಸೆನೆಗಲ್ ನಲ್ಲಿ ಬಂಧಿತನಾಗಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ಇಂದು ಮುಂಜಾನೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಮೂಲತಹ ದಕ್ಷಿಣ …

30 ವರ್ಷಗಳ ರಕ್ತಸಿಕ್ತ ಜೀವನಕ್ಕೆ ಒಂದು ಬಿಡುವು । ಭೂಗತ ಪಾತಕಿ ರವಿ ಪೂಜಾರಿ ಬೆಂಗಳೂರಿಗೆ Read More »

ಅತುಲ ವೈಭವದ ಹಿರೇಬಂಡಾಡಿಯ ಉಳ್ಳತ್ತೋಡಿಯ ಬ್ರಹ್ಮಕಲಶೋತ್ಸವದ ಮೂರನೆಯ ದಿನ

ಹಿರೇಬಂಡಾಡಿಯ ಉಳ್ಳತ್ತೋಡಿಯ ವೈಭವದ ಬ್ರಹ್ಮಕಲಶೋತ್ಸವದ ಮೂರನೆಯ ದಿನವಾದ ನಿನ್ನೆ, ಭಾನುವಾರ, ನವೀಕರಣ-ಪುನಃ ಪ್ರತಿಷ್ಠಾಷ್ಟ ಬಂಧ ಬ್ರಹ್ಮಕಲಶೋತ್ಸವದ ನಿಮಿತ್ತ ವಿವಿಧ ತಾಂತ್ರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಜೆ ಕಾರ್ತಿಕೇಯ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಡಿಯೂರು ಮಹಾಸಂಸ್ಥಾನದ ಗುರುದೇವಾನಂದ ಸ್ವಾಮೀಜಿಯವರು, ಪುತ್ತೂರಿನ ಶಾಸಕರೂ, ಬ್ರಹ್ಮಕಲಶೋತ್ಸವದ ಅಧ್ಯಕ್ಷರೂ ಆದ ಸಂಜೀವ ಮಠ೦ದೂರು ಅವರು, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ। ಕರುಣಾಕರ ನಿಡಿಂಜಿ, ಬ್ರಹ್ಮಕಲಶೋತ್ಸವ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದೇವಪ್ಪ ಪಡ್ಪು, ಜೀರ್ಣೋದ್ಧಾರ ಸಮಿತಿಯ …

ಅತುಲ ವೈಭವದ ಹಿರೇಬಂಡಾಡಿಯ ಉಳ್ಳತ್ತೋಡಿಯ ಬ್ರಹ್ಮಕಲಶೋತ್ಸವದ ಮೂರನೆಯ ದಿನ Read More »

error: Content is protected !!
Scroll to Top