ಜಮ್ಮು ಕಾಶ್ಮೀರ: ಬೆಳ್ಳಂಬೆಳಗ್ಗೆ ಇಬ್ಬರು ಉಗ್ರರ ಮಟಾಷ್!

ಫೆ.21ರ ತಡರಾತ್ರಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕ ನಡುವೆ ಗುಂಡಿನ ಚಕಮಕಿ ನಡೆದು ಫೆ.22ರ ಮುಂಜಾನೆ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ.

ಜಮ್ಮು- ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಸಂಗಂ ಟೌನ್ ಬಳಿಯಿರುವ ಗುಂಡ್ ಬಾಬಾ ಖಲೀಲ್ ಪ್ರದೇಶದಲ್ಲಿ ಈ ಇಬ್ಬರು ಉಗ್ರರ ಹತ್ಯೆಯಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಜಮ್ಮು-ಕಾಶ್ಮೀರದ ಮುಂಜಾನೆಯ ಮೈ ಹೆಪ್ಪುಗಟ್ಟುವ ಚಳಿಯಲ್ಲಿ, ಭಾರತೀಯ ಸೈನಿಕರ ಕುದಿ ಕುದಿ ಬೆಂಕಿಯ ಗುಂಡು ನುಂಗಿಕೊಂಡು ಲಷ್ಕರ್ ಎ ತೋಯ್ಬಾದ ನವೀದ್ ಮತ್ತು ಯಾಸೀನ್ ಎಂಬಿಬ್ಬರು ಭಯೋತ್ಪಾದಕರು ಬಾಯಿ ಬಿಟ್ಟುಕೊಂಡು ಆಕಾಶ ನೋಡುತ್ತಾ ಮಲಗಿ ತಾವು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದಾರೆ.

ಪೊಲೀಸರು, ಸಿಆರ್ ಪಿಎಫ್ ಪಡೆಗಳು ಹಾಗೂ ಭಾರತೀಯ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಕಾರ್ಯ ಮಾಡಲಾಗಿದೆ. ಹತರಾದ ಉಗ್ರದ ಬಳಿಯಿದ್ದ AK-47, ಒಂದು ಪಿಸ್ತೂಲ್ , ಮದ್ದುಗುಂಡುಗಳು ಸೇರಿದಂತೆ ಹಲವು ಬಿತ್ತಿಪತ್ರ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಕಾಶ್ಮೀರ ವಲಯ ಪೊಲೀಸರು ಟ್ವಿಟ್ಟರ್ ನಲ್ಲಿ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಮಾಹಿತಿ ಬರೆದಿದ್ದಾರೆ.

error: Content is protected !!
Scroll to Top
%d bloggers like this: