ಉಪ್ಪಿನಂಗಡಿ ಸೇತುವೆಯಿಂದ ಲಾರಿ ಕೆಳಗೆ ಬೀಳುವ ಹಂತದಲ್ಲಿ ಬಚಾವ್ : ಚಾಲಕನ ಅದೃಷ್ಟ ಗಟ್ಟಿಯಾಗಿತ್ತು !

ಉಪ್ಪಿನಂಗಡಿಯ ಕೂಟೇಲು ಸೇತುವೆಯ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ವಿದ್ಯುತ್ ಕಂಬಕ್ಕೆ ಹಾನಿ ಮಾಡಿ ನಿಂತಿದೆ.

ಘಟನೆಯು ಫೆ.20 ರಂದು ಮಧ್ಯರಾತ್ರಿ ನಡೆದಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಬೆಂಗಳೂರಿನಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ  ಲಾರಿ ಸೇತುವೆಯಿಂದ ಕೆಳಕ್ಕೆ ಬೀಳುವ ಹಂತದ ಸ್ಥಿಯಲ್ಲಿದ್ದು, ಘಟನೆ ನಡೆದ ಪಕ್ಕದಲ್ಲೇ ಇದ್ದ ಹೈ ಟೆನ್ಷನ್ ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ.

ಲಾರಿ ಚಾಲಕ ಮತ್ತು ಕ್ಲೀನರ್ ಸೇತುವೆಯಿಂದ ಕೆಳಗೆ ಬೀಳುವ, ವಿದ್ಯುತ್ ಆಘಾತ ಹೀಗೆ ಎರಡೆರಡು ಅಪಾಯದಿಂದ ಅದೃಷ್ಟವಶಾತ್ ಪಾರಾಗಿದ್ದಾರೆ.
ನಿದ್ದೆಯ ಮಂಪರಿನಲ್ಲಿ ಚಾಲಕ ಲಾರಿ ಓಡಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.

ಅಲ್ಲದೆ ಚಾಲಕನು ಅತಿವೇಗದಲ್ಲಿ ಬಂದಿದ್ದು, ತಕ್ಷಣಕ್ಕೆ ನಿಯಂತ್ರಿಸಲಾರದೆ ಈ ಅವಗಢ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

error: Content is protected !!
Scroll to Top
%d bloggers like this: