ಕುಂಡಡ್ಕ|ಮೊಗೇರ ದೈವಸ್ಥಾನ, ಸ್ವಾಮಿ ಕೊರಗಜ್ಜ ಸಾನಿಧ್ಯದ ಪ್ರತಿಷ್ಠಾ ಮನವಿ ಪತ್ರ ಬಿಡುಗಡೆ

ಸುಳ್ಯ ‌: ಪೆರುವಾಜೆ ಗ್ರಾಮದ ಕುಂಡಡ್ಕ ಶ್ರೀ ಮೊಗೇರ ದೈವಸ್ಥಾನ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ಸಾನಿಧ್ಯ ಕ್ಷೇತ್ರದ ಪ್ರತಿಷ್ಠಾ ಕಾರ್ಯ ಹಿನ್ನೆಲೆಯಲ್ಲಿ ಹೊರತರಲಾದ ಮನವಿ ಪತ್ರವನ್ನು ಫೆ.21 ರಂದು ದೈವಸ್ಥಾನದ ವಠಾರದಲ್ಲಿ ಬಿಡುಗಡೆಗೊಳಿಸಲಾಯಿತು.

ಈ‌ ಸಾನಿಧ್ಯವು ಒಂದು ಶತಮಾನದ ಇತಿಹಾಸ ಹೊಂದಿದ್ದು ಅತ್ಯಂತ ಕಾರಣಿಕ ಕ್ಷೇತ್ರವಾಗಿದೆ. ಪ್ರಸ್ತುತ ಈ  ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಅಂತಿಮ ಹಂತದಲ್ಲಿದ್ದು 2020 ಎಪ್ರಿಲ್ ‌8 ರಂದು‌ ಪ್ರತಿಷ್ಟಾದಿ ಕಾರ್ಯ ನಡೆಯಲಿದೆ. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಕ್ಷೇತ್ರದ ಪ್ರತಿಷ್ಠಾ ಕಾರ್ಯಕ್ಕೆ ಸರ್ವರ ಸಹಕಾರ ಕೋರಿದರು.

ಈ‌ ಸಂದರ್ಭದಲ್ಲಿ ಪೆರವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರ ಎಂ.ಕೆ.ಬಾಲಚಂದ್ರ ರಾವ್,‌ ಜೀರ್ಣೋದ್ಧಾರ ಸಮಿತಿ ಸಂಚಾಲಕ ಉಮೇಶ್ ಕೆಎಂಬಿ, ದೈವಸ್ಥಾನ ಆಡಳಿತ ಸಮಿತಿಯ ಗುರುವ ಕುಂಡಡ್ಕ, ಮೋಹನ ಬೈಪಡಿತ್ತಾಯ ಮುಕ್ಕೂರು, ವಸಂತ ಬೈಪಡಿತ್ತಾಯ ಮುಕ್ಕೂರು, ಗಣೇಶ್ ಶೆಟ್ಟಿ ಕುಂಜಾಡಿ, ಸುಧಾಕರ ರೈ ಕುಂಜಾಡಿ, ದಯಾನಂದ ರೈ ಕನ್ನೆಜಾಲು, ಕಾರ್ಯದರ್ಶಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಜತೆ ಕಾರ್ಯದರ್ಶಿ ಲಿಂಗಪ್ಪ ಗೌಡ ಕುಂಡಡ್ಕ, ದೈವಸ್ಥಾನ ಆಡಳಿತ ಕುಟುಂಬದ ಅಧ್ಯಕ್ಷ ಚನಿಯ ಕುಂಡಡ್ಕ, ಉಪಾಧ್ಯಕ್ಷ ಕೃಷ್ಣಪ್ಪ ಕುಂಡಡ್ಕ, ಖಜಾಂಜಿ ರಾಮಚಂದ್ರ ಚೆನ್ನಾವರ, ಕಾರ್ಯದರ್ಶಿ ವಾಸು, ಜತೆ ಕಾರ್ಯದರ್ಶಿ ಪುರುಷೋತ್ತಮ ಕುಂಡಡ್ಕ, ಪ್ರಸಾದ್ ಕುಂಡಡ್ಕ, ನಾರಾಯಣ ಕೊಂಡೆಪ್ಪಾಡಿ ಮೊದಲಾದವರು ‌ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಕುಶಾಲಪ್ಪ ಗೌಡ ಸ್ವಾಗತಿಸಿ, ವಂದಿಸಿದರು.

Leave A Reply

Your email address will not be published.