ಸವಣೂರು : ವಿದ್ಯಾರಶ್ಮಿ ಕಾಲೇಜಿನಲ್ಲಿ ಮಾತೃಭಾಷಾ ದಿವಸ್

ಸವಣೂರು : ಇಲ್ಲಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾತೃಭಾಷಾ ದಿವಸ್ ಕಾರ್ಯಕ್ರಮವನ್ನು ಫೆ.20ರಂದು ನಡೆಸಲಾಯಿತು.

ಸಂಸ್ಥೆಯ ಪ್ರಾಂಶುಪಾಲೆ ರಾಜಲಕ್ಷ್ಮಿ ಎಸ್ ರೈ ಕಾರ್ಯಕ್ರಮ ಉದ್ಘಾಟಿಸಿ,ಮಾತೃಭಾಷೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ಪ್ರತಿಯೊಬ್ಬರು ಮಾತೃಭಾಷೆಯನ್ನು ಉಳಿಸಿ ಬೆಳೆಸಬೇಕು ಮತ್ತು ಅನ್ಯ ಭಾಷೆಗಳನ್ನು ಪ್ರೀತಿಸಬೇಕು. ಭಾಷೆಯ ತಾರತಮ್ಯತೆ ಸಲ್ಲದು. ಮಾತೃಭಾಷೆಯು ನಮ್ಮ ಆಂತರಿಕ ಭಾವನೆಗಳನ್ನು ನಿರರ್ಗಳವಾಗಿ ವ್ಯಕ್ತಪಡಿಸಲು ಸಹಕಾರಿ ಎಂದರು.

ವೇದಿಕೆಯಲ್ಲಿ ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಉಪನ್ಯಾಸಕ ಲೋಕೇಶ್ ರವರು ಅತಿಥಿಗಳಾಗಿ ಭಾಗವಹಿಸಿದರು.

ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕಿ ವಿದ್ಯಲತಾ ರವರು ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು. ಐ.ಕ್ಯು.ಎ.ಸಿ  ಘಟಕದ ಸಂಯೋಜಕ ಶೇಷಗಿರಿ. ಎಂ ಉಪಸ್ಥಿತರಿದ್ದರು.

ರಾಜ್ಯಶಾಸ್ತ್ರ ಉಪನ್ಯಾಸಕ ವೆಂಕಟ್ರಮಣ ನ್ಯಾಕ್ ಮತ್ತು ಇತಿಹಾಸ ಉಪನ್ಯಾಸಕಿ ಪ್ರತಿಭಾ ಎಸ್ ರವರು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ವಿದ್ಯಾರ್ಥಿಗಳಾದ ಕು. ಉಮಾವತಿ, ಧನ್ಯಶ್ರೀ ಪ್ರಾರ್ಥಿಸಿದರು.ಕು. ಚೈತ್ರಾ ಸ್ವಾಗತಿಸಿ, ಲೋಕೇಶ್ ಡಿ ವಂದಿಸಿದರು. ಕು. ಭಾರತಿ ಕಾರ್ಯಕ್ರಮ ನಿರೂಪಿಸಿದರು. 

Leave A Reply

Your email address will not be published.