ಇಂದು ಪಾಂಡವ ಪ್ರತಿಷ್ಠೆಯ ಬರೆಪ್ಪಾಡಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ,ಜೀರ್ಣೋದ್ಧಾರ ಸಂಕಲ್ಪ ವಿಧಿ

ಕಡಬ : ತಾಲೂಕಿನ ಕುದ್ಮಾರು ಗ್ರಾಮದಲ್ಲಿ ಇರುವ ಪಾಂಡವ ಪ್ರತಿಷ್ಟೆಯ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 20 ನೇವರ್ಷದ ಮಹಾಶಿವರಾತ್ರಿ ಉತ್ಸವ ಹಾಗೂ ಕ್ಷೇತ್ರದ ಜೀರ್ಣೋದ್ಧಾರ ಸಂಕಲ್ಪ ವಿಧಿ ಕಾರ್ಯಕ್ರಮ ಫೆ 21 ರಂದು ನಡೆಯಲಿದೆ. ಸಂಜೆ ಶ್ರೀ ಶಾಂತಿಮೊಗೆರು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಹಾಗೂ, ಕೆಳಗಿನಕೇರಿ ಕೊಪ್ಪ ಶ್ರೀ ಶಾರದಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಶ್ರೀ ದೇವರಿಗೆ 108 ಸೀಯಾಳ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯಲಿದೆ.

ಪಂಚಲಿಂಗೇಶ್ವರ ದೇವರು
ಭಕ್ತವೃಂದದಿಂದ ಶ್ರಮದಾನ
ಕೇಪುಳೇಶ್ವರ

ಬಳಿಕ ಗುರುಪ್ರಿಯಾ ನಾಯಕ್ ಹಾಗೂ ತಂಡದವರಿಂದ ಭಕ್ತಿ ಸಂಗೀತ ಲಹರಿ ನಡೆಯಲಿದೆ. ಬಳಿಕ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಈಶ್ವರಮಂಗಲ ಶ್ರೀ ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚತ ಮೂಡೆತ್ತಾಯ ಉದ್ಘಾಟಿಸಲಿದ್ದಾರೆ. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಮೊಕ್ತೇಸರ ರಾಘವೇಂದ್ರ ಭಟ್ ಅಧ್ಯಕ್ಷತೆವಹಿಸಲಿದ್ದಾರೆ.

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಉಡುಪಿ ಸಾಲಿಗ್ರಾಮ ಡಿವೈನ್ ಪಾರ್ಕ್‍ನ ಸಂಪನ್ಮೂಲ ವ್ಯಕ್ತಿ ಸುಂದರ ಗೌಡ ಏನೆಕಲ್ಲು ಧಾರ್ಮಿಕ ಭಾಷಣ ಮಾಡಲಿದ್ದಾರೆ. ಕಶೆಕೋಡಿ ಶ್ರೀ ವೆಂಕಟ್ರಮಣ ದೇವಸ್ಥಾನದ ಆಡಳಿತೆ ಮೊಕ್ತೇಸರ ಸಂಜೀವ ನಾಯಕ್ ಕಲ್ಲೇಗ, ಭಜರಂಗದಳ ಜಿಲ್ಲಾ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ, ಶಾಂತಿಮೊಗೊರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶೀಯ ಮೊಕ್ತೇಸರ ರಾಜ್‍ದೀಪಕ್ ಜೈನ್, ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಕೊಯಕ್ಕುಡೆ ಶಿರಾಡಿ ದೈವಸ್ಥಾನದ ಆಡಳಿತೆ ಮೊಕ್ತೇಸರ ಶ್ರೀಧರ ಗೌಡ ಕೊಯಕ್ಕುಡೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಭಕ್ತರ ಸಭೆ

ದೇವಾಲಯದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಫೆ.20ರಂದು ಭಕ್ತರ ಚಿಂತನಾ ಸಭೆ ನಡೆಯಿತು.

ಸಭೆಯಲ್ಲಿ ಧಾರ್ಮಿಕ ಮುಂದಾಳು ಅರುಣ್ ಕುಮಾರ್ ಪುತ್ತಿಲ,ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು,ಸವಣೂರು ಸಿಎ ಬ್ಯಾಂಕ್ ನಿರ್ದೇಶಕ ಉದಯ ರೈ ಮಾದೋಡಿ,ತಾ.ಪಂ.ಉಪಾಧ್ಯಕ್ಷೆ ಲಲಿತಾ ಈಶ್ವರ, ತಿಮ್ಮಪ್ಪ ಗೌಡ ತೆಕ್ಕಿತಾಡಿ,ಅನುವಂಶೀಯ ಮೊಕ್ತೇಸರರಾದ ಜನೇಶ್ ಭಟ್, ರಾಘವೇಂದ್ರ ಭಟ್ ವೇದಿಕೆಯಲ್ಲಿ ಇದ್ದರು.

ಭಕ್ತಾದಿಗಳು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಲ್ಲಿ ಏಕ ಮನಸಿನಿಂದ ಶ್ರಮಿಸುವುದಾಗಿ ತಿಳಿಸಿದರು.ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶ ಒಂದೇ ಮುಖ್ಯ ಉದ್ದೇಶ ಎಂದು ಭಕ್ತರು ತಿಳಿಸಿದರು.

Leave A Reply

Your email address will not be published.