Day: February 18, 2020

ಮಂಗಳೂರು: ಅಪ್ರಾಪ್ತ ಬಾಲಕಿಯ ಅಪಹರಣ : ಪ್ರಕರಣ ದಾಖಲು

ಮಂಗಳೂರು : ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜತ್ತಬೈಲಿನ ಜಪ್ಪಿನಗುತ್ತು ನಿವಾಸಿ, ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಅಪಹರಿ ಸಿದ ಬಗ್ಗೆ ಪ್ರಕರಣ ದಾಖಲಾಗಿದೆ. ಫೆ.14ರಂದು ಸಂಜೆ 16 ವರ್ಷದ ಬಾಲಕಿ ಶಾಲೆಯಿಂದ ಮನೆಗೆ ಬಂದ ಬಳಿಕ ಆಕೆಯನ್ನು ಪರಶುರಾಮ (26) ಎಂಬಾತ ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕಿಯನ್ನು ಕರೆದೊಯುತ್ತಿದ್ದಾಗ ಆಸು ಪಾಸಿನ ಜನರು ಗಮನಿಸಿದ್ದಾರೆ. ಹುಡುಕಾಡಿದರೂ ಪತ್ತೆಯಾಗದ ಕಾರಣ ರವಿವಾರ ಬಾಲಕಿಯ ತಂದೆ ಕಾವೂರು ಪೊಲೀಸ್‌ ಠಾಣೆಯಲ್ಲಿ ಪುತ್ರಿ ನಾಪತ್ತೆಯಾಗಿದ್ದಾಳೆ ಹಾಗೂ ಆಕೆಯನ್ನು ಅಪಹರಿಸಲಾಗಿದೆ ಎಂದು …

ಮಂಗಳೂರು: ಅಪ್ರಾಪ್ತ ಬಾಲಕಿಯ ಅಪಹರಣ : ಪ್ರಕರಣ ದಾಖಲು Read More »

ಅಡಿಕೆ ರಾಶಿ,ರಬ್ಬರ್ ಶೀಟ್‌ಗೆ ಬೆಂಕಿ | ಸುಟ್ಟು ಹೋದ ಮನೆ

ಸುಳ್ಯ : ಅನ್ನ ಬೇಯಿಸಲು ಒಲೆಗೆ ಮಾಡಿದ್ದ ಬೆಂಕಿಯಿಂದ ಮನೆಯ ಮೇಲಿದ್ದ ರಬ್ಬರ್ ಶೀಟ್ ಮತ್ತು ಅಡಿಕೆ ಗೋಣಿಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ, ಬೆಂಕಿ ಮನೆ ಇಡೀ ವ್ಯಾಪಿಸಿದೆ. ಮನೆ ಹಾಗೂ ಅದರೊಳಗಿದ್ದ ಸಮಸ್ತ ವಸ್ತಗಳೂ ಸುಟ್ಟು ಕರಕಲಾದ ಘಟನೆ ಅರಂತೋಡು ಗ್ರಾಮದ ಅಡ್ತಲೆ ಬಳಿಯ ಪಿಂಡಿಮನೆಯಲ್ಲಿ ಫೆ.18 ರಂದು ನಡೆದಿದೆ. ಪಿಂಡಿಮನೆ ವಾಸುದೇವ ಗೌಡರ ಮನೆಯಲ್ಲಿ ಈ ಘಟನೆ ನಡೆದಿದ್ದು ಒಟ್ಟು 12 ಲಕ್ಷ ರೂ ನಷ್ಟ ಸಂಭವಿಸಿರುವುದಾಗಿ ವರದಿಯಾಗಿದೆ. ಮನೆಯಲ್ಲೇ ರಬ್ಬರ್ ಶೀಟು ಒಟ್ಟಿ …

ಅಡಿಕೆ ರಾಶಿ,ರಬ್ಬರ್ ಶೀಟ್‌ಗೆ ಬೆಂಕಿ | ಸುಟ್ಟು ಹೋದ ಮನೆ Read More »

ಮಾ.7 – 8 : ಮಂಗಳೂರಿನಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನ

ಮಂಗಳೂರು : ಪತ್ರಕರ್ತರ 35ನೇ ರಾಜ್ಯ ಸಮ್ಮೇಳನ 2020, ಮಾ.7 ಮತ್ತು 8 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆತಿಥ್ಯದಲ್ಲಿ ಕರಾವಳಿ ಭಾಗದಲ್ಲಿ ಪ್ರಥಮ ಬಾರಿಗೆ ರಾಜ್ಯ ಸಮ್ಮೇಳನ ನಡೆಯುತ್ತಿ ದೆ. 1976 ಅಕ್ಟೋಬರ್ 6 ರಂದು ಉದಯಿಸಿದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಇದೀಗ ನಿರಂತರ ರಚನಾತ್ಮಕ ಚಟುವಟಿಕೆಗಳ ಆಗರದಂತಿದೆ. ಈಗಾಗಲೇ ದೇಶದಲ್ಲೇ ಅಭೂತಪೂರ್ವ ಎನಿಸಿದ ಎರಡು ಗ್ರಾಮ ವಾಸ್ತವ್ಯ …

ಮಾ.7 – 8 : ಮಂಗಳೂರಿನಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನ Read More »

ಕಡಬ : ಶ್ರದ್ದಾ ಕೇಂದ್ರ ಸ್ವಚ್ಚತೆಗಾಗಿ ದೇವಸ್ಥಾನಗಳಿಗೆ ಕಸದಬುಟ್ಟಿ ವಿತರಣೆ

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಒಕ್ಕೂಟದ ವತಿಯಿಂದ ಶ್ರದ್ದಾ ಕೇಂದ್ರ ಸ್ವಚತೆ ಅಭಿಯಾನದಡಿಯಲ್ಲಿ ದೇವಸ್ಥಾನಗಳಿಗೆ ಕಸದ ಬುಟ್ಟಿ ವಿತರಿಸಲಾಯಿತು. ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನ, ಮಾಲೇಶ್ವರ ಶ್ರೀ ಮಹಾಬಲೇಶ್ವರ, ವೀರಭದ್ರೇಶ್ವರ ದೇವಸ್ಥಾನಗಳಿಗೆ ವಿತರಿಸಲಾಯಿತು. ಯೋಜನೆಯ ಕಡಬ ಎ ಒಕ್ಕೂಟದ ಅಧ್ಯಕ್ಷ ಸೀತಾಚಂದ್ರನ್,ಕಾರ್ಯದರ್ಶಿ ದಯಾನಂದ ರೈ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು.

ಗುರುವಾಯನಕೆರೆ ಪಕ್ಕ ನಿಂತಿದ್ದ ಕಂಟೈನರ್ ಲಾರಿಗೆ ಅಂಗವಿಕಲರು ಬಳಸುವ ತ್ರಿಚಕ್ರ ವಾಹನ ಡಿಕ್ಕಿ : ಸವಾರನ ಕಾಲಿಗೆ ಗಂಭೀರ ಗಾಯ

ಗುರುವಾಯನಕೆರೆಯಿಂದ ಉಪ್ಪಿನಂಗಡಿಗೆ ಹೋಗುವ ದಾರಿಯಲ್ಲಿ, ಗುರುವಾಯಕೆರೆಯ ಕೆನರಾ ಬ್ಯಾಂಕ್ ಎಟಿಎಂ ನ ಪಕ್ಕ ನಿಂತಿದ್ದ ಕಂಟೈನರ್ ಲಾರಿಗೆ ಅಂಗವಿಕಲರು ಬಳಸುವ ತ್ರಿಚಕ್ರ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ತ್ರಿಚಕ್ರ ವಾಹನ ಸವಾರನ ಕಾಲಿಗೆ ಗಂಭೀರ ಗಾಯಗಳಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ತ್ರಿಚಕ್ರ ವಾಹನದ ಮುಂಭಾಗ ಮತ್ತು ಒಂದು ಬದಿಯ ಚಕ್ರದ ಭಾಗಕ್ಕೆ ಡ್ಯಾಮೇಜ್ ಆಗಿದೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ತ್ರಿಚಕ್ರ ವಾಹನವನ್ನು ಅಂಗವಿಕಲ ವ್ಯಕ್ತಿಯಲ್ಲದೆ ಬೇರೊಬ್ಬ ವ್ಯಕ್ತಿ ಚಲಾಯಿಸಿದ್ದೆನ್ನಲ್ಲಾಗಿದೆ. ಅದ್ದರಿಂದ ಕಣ್ಣ ಅಂದಾಜು ತಪ್ಪಿ …

ಗುರುವಾಯನಕೆರೆ ಪಕ್ಕ ನಿಂತಿದ್ದ ಕಂಟೈನರ್ ಲಾರಿಗೆ ಅಂಗವಿಕಲರು ಬಳಸುವ ತ್ರಿಚಕ್ರ ವಾಹನ ಡಿಕ್ಕಿ : ಸವಾರನ ಕಾಲಿಗೆ ಗಂಭೀರ ಗಾಯ Read More »

ಸಂಪ್ಯ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲದ ಫೋಟೋ ಗ್ಯಾಲರಿ

ಪುತ್ತೂರು: ಸಂಪ್ಯ ಉದಯಗಿರಿಯಲ್ಲಿ ಅನಾದಿ ಕಾಲದಿಂದ ನಡೆಸಿಕೊಂಡು ಬರುತ್ತಿರುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ವಿಜ್ರಂಭಣೆಯಿಂದ ನಡೆಯಿತು. ಚಿತ್ರ ಕೃಪೆ: ಪೃಥ್ವಿ ಚಡಗ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ತೆಗೆದು ಬಳಿಕ ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ರಂಗ ಪೂಜೆ ನಡೆಯಿತು. ನಂತರ ಉದಯಗಿರಿಗೆ ಆಗಮಿಸಿ ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ರಾತ್ರಿ ಕುಳ್ಚಟ್ಟು ಸೇವೆ ನಡೆಯಿತು. ಕುಳ್ಚಟ್ಟು ಸೇವೆ ಬಳಿಕ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ಬೆಳಗಿನ ಜಾವ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, …

ಸಂಪ್ಯ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲದ ಫೋಟೋ ಗ್ಯಾಲರಿ Read More »

ಪುಣ್ಚಪ್ಪಾಡಿ : ಬದಿಯಡ್ಕ-ಸಾರಕರೆ ರಸ್ತೆ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಸವಣೂರು :ಸವಣೂರು ಗ್ರಾ.ಪಂ.ವ್ಯಾಪ್ತಿಯ ಪುಣ್ಚಪ್ಪಾಡಿ ಗ್ರಾಮದ ಬದಿಯಡ್ಕ-ಸಾರಕರೆ ರಸ್ತೆಯ ಉದ್ಘಾಟನೆಯನ್ನು ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ ನೆರವೇರಿಸಿದರು. ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ಧನ. ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಲಲಿತಾ ಈಶ್ವರ್, ತಾಲೂಕು ಪಂಚಾಯತ್ ಸದಸ್ಯೆ ಕು. ರಾಜೇಶ್ವರಿ ಕೆ, ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಬಿ.ಕೆ,ಸದಸ್ಯರಾದ ಸತೀಶ್ ಬಲ್ಯಾಯ,ನಾಗೇಶ್ ಓಡಂತರ್ಯ, ಸವಣೂರು ಸಿ.ಎ. ಬ್ಯಾಂಕ್ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ,ನಿರ್ದೇಶಕರಾದ ಮಹಾಬಲ ಶೆಟ್ಟಿ ಕೊಮ್ಮಂಡ,ಸೋಮನಾಥ ಕನ್ಯಾಮಂಗಲ,ನ್ಯಾಯವಾದಿ ಮಹೇಶ್ ಕೆ.ಸವಣೂರು,ಪ್ರವೀಣ್ ಬಂಬಿಲದೋಳ,ಗ್ರಾ.ಪಂ.ಮಾಜಿ ಸದಸ್ಯ …

ಪುಣ್ಚಪ್ಪಾಡಿ : ಬದಿಯಡ್ಕ-ಸಾರಕರೆ ರಸ್ತೆ ಕಾಂಕ್ರೀಟ್ ರಸ್ತೆ ಉದ್ಘಾಟನೆ Read More »

ಕಾವು: ಲಾರಿ ಆಕ್ಸಿಲ್ ಕಟ್ ಆಗಿ ಭೀಕರ ಅಪಘಾತ

ಪುತ್ತೂರು : ಮಾಣಿ-ಮೈಸೂರು ಹೆದ್ದಾರಿಯ ಕಾವು ಪೇಟೆಯಲ್ಲಿ ಚಲಿಸುತಿದ್ದ ಲಾರಿಯ ಆಕ್ಸಿಲ್ ತುಂಡಾಗಿ ಭೀಕರ ಅಪಘಾತ ನಡೆದಿದೆ. ಅಪಘಾತದಲ್ಲಿ ಎರಡು ಕಾರುಗಳು ನಜ್ಜುಗುಜ್ಜಗಿದೆ. ಬ್ರೀಜಾ ಕಾರಿನಲ್ಲಿದ್ದ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ . ಲೋಡ್ ತುಂಬಿದ್ದ ಲಾರಿ ಸುಳ್ಯ ಕಡೆಗೆ ಸಂಚರಿಸುತಿತ್ತು.  ಕಾವು ಕ್ಯಾಂಪ್ಕೋ ನೂತನ ಬಿಲ್ಡಿಂಗ್ ಸಮೀಪ ತಿರುವಿನಲ್ಲಿ ಲಾರಿ ಆಕ್ಸಿಲ್ ತುಂಡಾಗಿದೆ. ಲಾರಿಯ ಸಂಪೂರ್ಣ ಬಾಡಿ  ರಸ್ತೆಯಲ್ಲಿ ಎಳೆದುಕೊಂಡು ಹೋಗಿದೆ. ಅಪಘಾತದಲ್ಲಿ  ಬ್ರೀಜಾ ಮತ್ತು ಎರ್ಟಿಗಾ ಕಾರುಗಳು ಜಖಂಗೊಂಡಿದೆ.

ಶಾಂತಿಮೊಗರು : ದೇವಸ್ಥಾನಕ್ಕೆ ಸುಬ್ರಹ್ಮಣ್ಯ ಭಜನಾ ಮಂಡಳಿಯಿಂದ 1 ಲಕ್ಷ ನಗದು ದೇಣಿಗೆ

ಬೆಳಂದೂರು: ಬ್ರಹ್ಮಕಲಶದ ಸಿದ್ದತೆಯಲ್ಲಿರುವ ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಣ್ಯೇಶ್ವರ ದೇವಸ್ಥಾನದ ಹೊರಾಂಗಣದ ಮೇಲ್ಛಾವಣಿಗೆ ಶೀಟ್ ಅಳವಡಿಸುವ ಬಗ್ಗೆ ರೂ.1 ಲಕ್ಷ ನಗದನ್ನು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯ ನೇತೃತ್ವದಲ್ಲಿ ನಗರ ಭಜನಾ ಸಮಿತಿಯ ವತಿಯಿಂದ ನೀಡಲಾಯಿತು. ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ರಮೇಶ್ ನಡುಮನೆ,ನಗರ ಭಜನಾ ಸಮಿತಿಯ ಅಧ್ಯಕ್ಷ ವಿಶ್ವನಾಥ ಮಡಿವಾಳ,ಗೌರವಾಧ್ಯಕ್ಷ ಸೂರಪ್ಪ ಗೌಡ ಪಟ್ಟೆತ್ತಾನ,ಗೌರವ ಸಲಹೆಗಾರರಾದ ಭರತ್ ನಡುಮನೆ,ಪುಷ್ಪಲತಾ ಪಿ.ಗೌಡ ಕುದ್ಮಾರು, ಚಿದಾನಂದ ಕೆರೆನಾರು,ಶ್ರೀಧರ ಗೌಡ ಕೊಯಕ್ಕುಡೆ,ಚಂದ್ರ ಗೌಡ ತೆಕ್ಕಿತಡಿ,ರವಿ ಎರ್ಕಮೆ,ಹೇಮನಾಥ …

ಶಾಂತಿಮೊಗರು : ದೇವಸ್ಥಾನಕ್ಕೆ ಸುಬ್ರಹ್ಮಣ್ಯ ಭಜನಾ ಮಂಡಳಿಯಿಂದ 1 ಲಕ್ಷ ನಗದು ದೇಣಿಗೆ Read More »

ಮಗಳ ಮದುವೆಯ ಕರೆಯೋಲೆ ನೀಡಿದ್ದ ಆಟೋ ಎಳೆಯುವವನ ಭೇಟಿಯಾದ ಪ್ರಧಾನಿ

ಒಂದು ಕಾಲದಲ್ಲಿ ಶ್ರೀಮಂತರ, ಸಿನಿಮಾ ನಟ-ನಟಿಯರಿಗೆ, ಮತ್ತು ಎಲೈಟ್ ವರ್ಗದವರಿಗೆ ಮಾತ್ರ ದೊರಕುತ್ತಿದ್ದ ದೇಶದ ದೊರೆ, ಈಗ ದೀನರ, ದಲಿತರ, ನೊಂದವರ ಮತ್ತು ಕೂಲಿ ಕೆಲಸದವರಿಗೆ ಕೂಡ ಲಭ್ಯವಾಗುತ್ತಿದ್ದಾರೆ. ಅದು ಪ್ರಧಾನಿ ನರೇಂದ್ರ ದಾಮೋದರ ದಾಸ್ ಮೋದಿ ! ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನೆ ತಮ್ಮ ಸ್ವಕ್ಷೇತ್ರ ವಾರಾಣಸಿಗೆ ಬಂದಿದ್ದಾಗ ರಿಕ್ಷಾ ಎಳೆಯುವ ಮಂಗಲ್ ಕೇವತ್ ಅವರನ್ನು ಭೇಟಿಯಾಗಿದ್ದಾರೆ. ಮಂಗಲ್ ಕೇವತ್ ಅವರು ತಮ್ಮ ಮಗಳ ಮದುವೆಯ ಕರೆಯೋಲೆಯನ್ನು ಖುದ್ದಾಗಿ ದೆಹಲಿಯ ಪ್ರಧಾನ ಮಂತ್ರಿ ಕಚೇರಿಗೆ …

ಮಗಳ ಮದುವೆಯ ಕರೆಯೋಲೆ ನೀಡಿದ್ದ ಆಟೋ ಎಳೆಯುವವನ ಭೇಟಿಯಾದ ಪ್ರಧಾನಿ Read More »

error: Content is protected !!
Scroll to Top