ಅನಿಯಮಿತ ವಿದ್ಯುತ್ ಕಡಿತ,ಬಳಕೆದಾರರು ಗರಂ

ಸವಣೂರು :ಇಲ್ಲಿನ ಮೆಸ್ಕಾಂ ಉಪವಿಭಾಗದಿಂದ ಸರಬರಾಜಾಗುವ ವಿದ್ಯುತ್ ದೋಷಪೂರಿತವಾಗಿದ್ದು ,ಅನಿಯಮಿತ ವಿದ್ಯುತ್ ಕಡಿತದಿಂದ ಕೃಷಿಕರು,ಸಾರ್ವಜನಿಕರು,ವಿದ್ಯಾರ್ಥಿಗಳು ತೊಂದರೆ ಪಡುತ್ತಿದ್ದು,ಇದರಿಂದಾಗಿ ಮೆಸ್ಕಾಂ ವಿರುದ್ದ ಬಳಕೆದಾರರು ಗರಂ ಆಗಿದ್ದಾರೆ. ಸವಣೂರು ಮೆಸ್ಕಾಂ ಉಪಕೇಂದ್ರದಿಂದ ಸರಬರಾಜಾಗುವ ಕಳೆದ 2 ತಿಂಗಳಿನಿಂದ ವಿದ್ಯುತ್ ಪೂರೈಕೆ ಅಸಪರ್ಮಕವಾಗಿದ್ದು,ದೋಷಪೂರಿತವಾಗಿದೆ,ರಾತ್ರಿ ಹಗಲೆನ್ನದೆ ಬೇಕಾಬಿಟ್ಟಿಯಾಗಿ ವಿದ್ಯುತ್ ಕಡಿತ ಮಾಡುತ್ತಿದ್ದು ಮನೆಬಳಕೆ ಹಾಗೂ ಕೃಷಿಬಳಕೆ ಗೆ ವಿದ್ಯುತ್ ಕಡಿತದಿಂದ ಸಮಸ್ಯೆಯಾಗಿದೆ.ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹಲವು ಬಾರಿ ಸಮಸ್ಯೆಯ ಕುರಿತು ಇಲಾಖೆಯ ಗಮನಕ್ಕೆ ತರಲಾಗಿದ್ದರೂ ಯಾವುದೇ ಬದಲಾವಣೆಯಾಗಿಲ್ಲ ಎಂದು ಗ್ರಾಹಕರು ಆಪಾದನೆ. ಮಾಡಾವಿನಲ್ಲಿ ಸಬ್‍ಸ್ಟೇಶನ್ ಕಾಮಗಾರಿ ನಡೆಯುತ್ತಿದ್ದು,ಈ ಬೇಸಿಗೆಗೆ ಅದು ಪೂರ್ಣವಾಗಿ ಈ ಭಾಗಕ್ಕೆ ವಿದ್ಯುತ್ ದೊರಕುವುದು ತಡವಾಗಬಹುದು.ಈಗಿನ ಅನಿಯಮಿತ ವಿದ್ಯುತ್ ಕಡಿತದಿಂದ ಕೃಷಿಕರಿಗೆ ಕೃಷಿಕಾರ್ಯಗಳಿಗೆ ನೀರುಣಿಸಲು ಸರಿಯಾದ ವಿದ್ಯುತ್ ಇಲ್ಲದೆ ಸಮಸ್ಯೆಯಾಗುತ್ತದೆ.ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಹತ್ತಿರ ಬರುತ್ತಿದ್ದು,ಇದೇ ರೀತಿ ಮುಂದುವರಿದರೆ ವ್ಯಾಸಂಗಕ್ಕೂ ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ ದಿನದಲ್ಲಿ ಕನಿಷ್ಠ 12ಗಂಟೆ 3 ಫೇಸ್ ಗುಣಮಟ್ಟದ ವಿದ್ಯುತ್ ಪೂರೈಸಬೇಕು,20 ಗಂಟೆ ನಿರಂತರ ಮನೆ ಬಳಕೆಯ ವಿದ್ಯುತ್ ಪೂರೈಸಬೇಕು,ಪುತ್ತೂರು ಕೇಂದ್ರದಿಂದ ನೇರವಾಗಿ ಸವಣೂರು ಉಪಕೇಂದ್ರಕ್ಕೆ ಪ್ರತ್ಯೇಕ ಫೀಡರ್‍ನು ಅಳವಡಿಸಬೇಕು.ಸವಣೂರು ಉಪಕೇಂದ್ರ ವ್ಯಾಪ್ತಿಯಲ್ಲಿ ಬೇಡಿಕೆಯಿರುವ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಬೇಕು


Ad Widget

Ad Widget

Ad Widget

Ad Widget

Ad Widget

Ad Widget
error: Content is protected !!
Scroll to Top
%d bloggers like this: