ಮಾ.31ರೊಳಗೆ ಆಧಾರ್‌‌ಗೆ PAN ಲಿಂಕ್‌ ಮಾಡದಿದ್ದರೆ PAN ನಿಷ್ಕ್ರಿಯ

ನವದೆಹಲಿ : ಪ್ಯಾನ್‌ ಕಾರ್ಡ್‌ ಮತ್ತು ಆಧಾರ್‌ ಕಾರ್ಡ್ ಅನ್ನು ಮಾ.31ರೊಳಗೆ ಲಿಂಕ್‌ ಮಾಡದಿದ್ದರೆ ಅಂಥ PANಗಳನ್ನು ನಿಷ್ಕ್ರಿಯಗೊಳಿಸುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ.

ಆಧಾರ್‌ ಲಿಂಕ್‌ ಮಾಡಲು ಎಂಟು ಬಾರಿ ಗಡುವು ನೀಡಿದ್ದ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಯು, ಮಾ.31ರೊಳಗೆ ಆಧಾರ್‌ ಲಿಂಕ್‌ ಮಾಡದಿದ್ದರೆ ಶಾಶ್ವತ ಖಾತೆ ಸಂಖ್ಯೆ(ಪ್ಯಾನ್‌)ಯನ್ನು ನಿಷ್ಕ್ರಿಯಗೊಳಿಸುವ ಎಚ್ಚರಿಕೆ ನೀಡಿದೆ.

ಮಾ.31ರ ನಂತರ PAN ಮತ್ತು ಆಧಾರ್‌ ಅನ್ನು ಲಿಂಕ್‌ ಮಾಡಿದರೆ, ನಿಮ್ಮ PAN- ಆಧಾರ್‌ ಸಂಖ್ಯೆ ಲಿಂಕ್‌ ಮಾಡಿದ ದಿನಾಂಕದಿಂದ ಶಾಶ್ವತ ಖಾತೆಯು ಕಾರ್ಯರೂಪಕ್ಕೆ ಬರುತ್ತದೆ ಎಂದು ಇಲಾಖೆ ತಿಳಿಸಿದೆ.

Leave A Reply

Your email address will not be published.