ಅಡ್ಕಾರು -ಗುಂಡ್ಯಡ್ಕ : ಅಬ್ಬಾಸ್ ಫೈಝಿ ಅವರ ಮನೆಯಿಂದ ಲಕ್ಷಾಂತರ ನಗದು ಕಳವು

ಅಡ್ಕಾರು -ಗುಂಡ್ಯಡ್ಕ : ಮನೆಯಿಂದ ಲಕ್ಷಾಂತರ ನಗದು ಕಳವು

ಕಳವು ಸುಳ್ಯ : ಜಾಲ್ಸೂರು ಗ್ರಾಮದ ಅಡ್ಕಾರು ಗುಂಡ್ಯಡ್ಕ ಎಂಬಲ್ಲಿ ಮನೆಯೊಂದರಿಂದ ಸುಮಾರು ಲಕ್ಷಕ್ಕೂ ಅಧಿಕ ಮೊತ್ತದ ನಗದು ಕಳವಾಗಿರುವ ಘಟನೆ ವರದಿಯಾಗಿದೆ. ಅಡ್ಕಾರಿನ ಗುಂಡ್ಯಡ್ಕದ ಅಬ್ಬಾಸ್ ಫೈಝಿ ಅವರ ಪತ್ನಿ ಆಮೀನ ಅವರು ಫೆ.14ರಂದು ಮಧ್ಯಾಹ್ನ ಮನೆಗೆ ಬೀಗ ಹಾಕಿ ಮನೆ ಸಮೀಪದ ಗೃಹಪ್ರವೇಶಕ್ಕೆ ತೆರಳಿ ಅಲ್ಲಿರುವ ಮಗಳ ಮನೆಯಲ್ಲಿ ತಂಗಿದ್ದರು. ಫೆ.15ರಂದು ಮನೆಗೆ ಆಗಮಿಸಿದ ಅವರಿಗೆ ಮನೆಯ ಬಾಗಿಲು ಮುರಿದಿರುವುದನ್ನು ಗಮನಿಸಿ, ಒಳ ಹೋಗಿ ನೋಡಿದಾಗ ಮೂರು ಕೋಣೆಗಳಲ್ಲಿದ್ದ ಗೋಡ್ರೇಜ್ ಓಪನ್ ಆದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಗೋಡ್ರೇಜ್ ನಲ್ಲಿದ್ದ ಒಂದು ಲಕ್ಷಕ್ಕೂ ಅಧಿಕ ನಗದು ಕಳವಾಗಿರುವುದು ಗಮನಕ್ಕೆ ಬಂದಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಸುಳ್ಯ ಠಾಣಾ ಪೊಲೀಸರು ಸ್ಥಳ ತನಿಖೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾರದಲ್ಲಿ 2 ನೇ ಘಟನೆ ವಾರದ ಹಿಂದೆ ಬೊಳುಬೈಲು ಎಂಬಲ್ಲಿ ಮನೆಯೊಂದಕ್ಕೆ ರಾತ್ರಿ ವೇಳೆ ಕಳ್ಳರು ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳವುಗೈದಿದ್ದು, ಅದೇ ತಂಡ ಈ ಕೃತ್ಯ ನಡೆಸಿರಬಹುದೆಂದು ಸ್ಥಳೀಯರ ಅಭಿಪ್ರಾಯವಾಗಿದೆ.

ನೋಡಾ…ನೋಡಾ… ಕೋಡಿಂಬಾಡಿ ಉಗ್ಗಪ್ಪ ಶೆಟ್ರ ಅಂಗಡಿಯಲ್ಲಿ ಈಗ್ಲೂ ಇದೆ ಗೋಲಿ ಸೋಡಾ !

error: Content is protected !!
Scroll to Top
%d bloggers like this: