Day: February 15, 2020

ಸುಳ್ಯ ಕ್ಷೇತ್ರ: ಅಕ್ರಮ ಸಕ್ರಮ‌ ಸಮಿತಿಗೆ ನೇಮಕ

ಸುಳ್ಯ ಕ್ಷೇತ್ರ: ಅಕ್ರಮ ಸಕ್ರಮ‌ ಸಮಿತಿಗೆ ನೇಮಕ ವೆಂಕಟ್ ವಳಲಂಬೆ,ಗುಣವತಿ ಕೊಲ್ಲಂತಡ್ಕ,ಬಾಳಪ್ಪ ಕಳಂಜ ಸುಳ್ಯ: ಕರ್ನಾಟಕ ಭೂ ಕಂದಾಯ ಅಧಿನಿಯಮದಂತೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಬಗರ್‌ಹುಕುಂ ಸಾಗುವಾಳಿ ಸಕ್ರಮೀಕರಣ ಸಮಿತಿಗೆ ಸದಸ್ಯರನ್ನಾಗಿ 3 ಮಂದಿಯನ್ನು ಸರಕಾರ ನೇಮಿಸಿದೆ. ಈ ಸಮಿತಿಯ ಅಧ್ಯಕ್ಷರಾಗಿ ಕ್ಷೇತ್ರದ ಶಾಸಕರು,ಕಾರ್ಯದರ್ಶಿಯಾಗಿ ತಹಶಿಲ್ದಾರ್ ಕರ್ತವ್ಯ ನಿರ್ವಹಿಸುತ್ತಾರೆ.ಸದಸ್ಯರಾಗಿ ಬಿಜೆಪಿ ಮಂಡಲ ಸಮಿತಿ ಪೂರ್ವಾಧ್ಯಕ್ಷ ವೆಂಕಟ್ ವಳಲಂಬೆ,ತಾ.ಪಂ.ಮಾಜಿ ಸದಸ್ಯೆ ಗುಣವತಿ ಕೊಲ್ಲಂತಡ್ಕ,ಕಳಂಜ ಮಣಿಮಜಲಿನ ಬಾಳಪ್ಪ ಕಳಂಜ ಅವರನ್ನು ಆಯ್ಕೆ ಮಾಡಲಾಗಿದೆ.

ದೀಪಾರಾಧನೆಯಿಂದ ಶೋಭಿಪ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರು

ದೀಪಾರಾಧನೆಯಿಂದ ಶೋಭಿಪ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರು ಸುಳ್ಯ : ಇತಿಹಾಸ ಪ್ರಸಿದ್ಧ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವು ಬ್ರಹ್ಮ ಶ್ರೀ ವೇ.ಮೂ.ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.13 ರಂದು ಪ್ರಾರಂಭಗೊಂಡಿದ್ದು ಫೆ.17ರ ವರೆಗೆ ನಡೆಯಲಿದೆ. ನಿತ್ಯ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ. ರಾತ್ರಿ ವಿದ್ಯುತ್ ಬೆಳಕಿಲ್ಲದೆ ದೀಪಗಳ ಬೆಳಕಿನಲ್ಲಿ ದೇವಾಲಯ ವಿಶೇಷವಾಗಿ ಕಂಗೊಳಿಸುತ್ತಿದೆ.ಇದರ ಸುಂದರ ದೃಶ್ಯ ಗಳನ್ನು ಇಲ್ಲಿ ನೀಡಲಾಗಿದೆ. ದೇವಸ್ಥಾನದ ಅರ್ಚಕ ಉದಯಕುಮಾರ್ ಕೆ.ಟಿ.ಪೂಜಾಕಾರ್ಯ ನೆರವೇರಿಸಿದರು. ಈ …

ದೀಪಾರಾಧನೆಯಿಂದ ಶೋಭಿಪ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರು Read More »

`ಗೆಜ್ಜೆಗಿರಿ’ ಬ್ರಹ್ಮಕಲಶ ರಾಜ್ಯಕ್ಕೆ ಮಾದರಿಯಾಗಿಸಲು ಜಿಲ್ಲಾಡಳಿತಕ್ಕೆ ಉಸ್ತುವಾರಿ ಸಚಿವ ಕೋಟ ಸೂಚನೆ

`ಗೆಜ್ಜೆಗಿರಿ’ ಬ್ರಹ್ಮಕಲಶ ರಾಜ್ಯಕ್ಕೆ ಮಾದರಿಯಾಗಿಸಲು ಜಿಲ್ಲಾಡಳಿತಕ್ಕೆ ಉಸ್ತುವಾರಿ ಸಚಿವ ಕೋಟ ಸೂಚನೆ ಪುತ್ತೂರು; ಕರಾವಳಿಯಾದ್ಯಂತ 250ಕ್ಕೂ ಗರಡಿಗಳಲ್ಲಿ ಆರಾಧನೆಯಾಗುತ್ತಿರುವ ಪುತ್ತೂರು ಪಡುಮಲೆಯ ಕಾರಣಿಕ ಪುರುಷರಾದ ಕೋಟಿ ಚೆನ್ನಯ ಮತ್ತು ಅವರ ಮಾತೆ ದೇಯಿ ಬೈದೆತಿ ಮೂಲ ಸ್ಥಾನವಾದ ಗೆಜ್ಜೆಗಿರಿ ನಂದನ ಬಿತ್ತ್‍ಲ್‍ನಲ್ಲಿ ಫೆ.24ರಿಂದ ಮಾರ್ಚ್ 2 ತನಕ ನಡೆಯಲಿರುವ ಬ್ರಹ್ಮಕಲಶೋತ್ಸವ ಐತಿಹಾಸಿಕವಾಗಿ ಮೂಡಿಬರಲಿದ್ದು, ರಾಜ್ಯದಲ್ಲಿಯೇ ಮಾದರಿ ಕಾರ್ಯಕ್ರಮವಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಂಪೂರ್ಣ ಜವಾಬ್ದಾರಿ ವಹಿಸಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ …

`ಗೆಜ್ಜೆಗಿರಿ’ ಬ್ರಹ್ಮಕಲಶ ರಾಜ್ಯಕ್ಕೆ ಮಾದರಿಯಾಗಿಸಲು ಜಿಲ್ಲಾಡಳಿತಕ್ಕೆ ಉಸ್ತುವಾರಿ ಸಚಿವ ಕೋಟ ಸೂಚನೆ Read More »

Breaking news: ಯಮದೂತನಾದ ವೇಗ ದೂತ: ಬಂಡೆಗೆ ಬಡಿದ ಬಸ್ 9 ಸಾವು

ಕಾರ್ಕಳ: ಮೈಸೂರಿನಿಂದ ಬರುತ್ತಿದ್ದ ಬಸ್ಸೊಂದು ಬಂಡೆಗೆ ಢಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ಮುಳ್ನೂರ್ ಘಾಟ್ ಎಂಬಲ್ಲಿ ಫೆ.15ರಂದು ನಡೆದಿದೆ. ಮೈಸೂರಿನಿಂದ ಖಾಸಗಿ ಕಂಪೆನಿಯು ಈ ಪ್ರವಾಸವನ್ನು ಆಯೋಜಿಸಿತ್ತು ಎಂದು ಹೇಳಲಾಗಿದ್ದು, ಬಸ್ ಮುಳ್ನೂರ್ ಘಾಟ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಬಂಡೆಗೆ ಢಿಕ್ಕಿ ಹೊಡೆದಿದೆ. ಬಸ್ ಬೆಂಗಳೂರು ಡಿ.ಬಿ.ಟ್ರಾವೆಲರ್ಸ್‌‌ ಸಂಸ್ಥೆ ಗೆ ಸೇರಿದ್ದಾಗಿದೆ. ಪರಿಣಾಮ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದವರು …

Breaking news: ಯಮದೂತನಾದ ವೇಗ ದೂತ: ಬಂಡೆಗೆ ಬಡಿದ ಬಸ್ 9 ಸಾವು Read More »

ಫೆ.16 :ನಳೀಲು ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಸವಣೂರು :ಕೊಳ್ತಿಗೆ ಗ್ರಾ ಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಹಾಗೂ ಸಾರ್ವಜನಿಕ ಸತ್ಯನಾರಾಯಣ ಪೂಜೆ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ಫೆ.23ಮತ್ತು ಫೆ .24ರಂದು ನಡೆಯಲಿದೆ.ಇದರ ಪೂರ್ವಭಾವಿಯಾಗಿ ಫೆ.16ರಂದು ಗೊನೆ ಮುಹೂರ್ತ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಚಿತೆ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಲಿಂಜ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ

ಬಂಟ್ವಾಳ : ಕಾರಣಿಕ ಶಕ್ತಿ ,ಭಕ್ತರ ಇಷ್ಟಪ್ರದಾಯಿನಿ ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಗೆ ಫೆ. 14 ರಂದು ಬೆಂಞತ್ತಿಮಾರಿನಿಂದ ಭಂಡಾರ ಹೊರಟು ಪುಂಡಿಕಾಯಿ ಬಳಿ ಇರುವ ಪಾಲಮಂಟಮೆಗೆ ಬಂತು. ಫೆ 15 ರಂದು ಬ್ರಾಹ್ಮೀ ಮುಹೂರ್ತದಲ್ಲಿವಿಜೃಂಭಣೆಯಿಂದ ಮೆರವಣಿಗೆ ಹೊರಟು ಮಧ್ಯಾಹ್ನ ಶ್ರೀ ದೇವಿಗೆ ಹೂವಿನ ಪೂಜೆ, ಕುಂಕುಮಾರ್ಚನೆ, ಕರ್ಪೂರಾರತಿ ಆದಿ ಸೇವೆಗಳು ನಡೆದು ರಾತ್ರಿ ಮೆಚ್ಚಿ ಜಾತ್ರೆ ನಡೆಯಿತು. ಮಲ್ಲಿಗೆ ಪುಷ್ಪ ದಂಡೆಯಿಂದ ಸರ್ವಾಲಂಕೃತ ದೇವಿಗೆ ಪೂಜೆ ನಡೆದ ಬಳಿಕ ಉಳ್ಳಾಲ್ತಿ ದೈವದ …

ಕೆಲಿಂಜ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ Read More »

ಇವರೇ ನೋಡಿ ಜಗತ್ತಿನ ಅತ್ಯಂತ ಹಿರಿಯ ಪುರುಷ । ಜಪಾನಿನ ಇವರ ವಯಸ್ಸು ಕೇವಲ 112 ವರ್ಷ !

ಜಗತ್ತಿನ ದೀರ್ಘಾಯುಷ್ಮಾನ್ ದೇಶ ಜಪಾನಿನ 112 ವರ್ಷ ವಯಸ್ಸಿನ ಚಿಟೆತ್ಸು ವತನಾಬೆ ಎಂಬವರು ಜಗತ್ತಿನಲ್ಲಿರುವ ಅತ್ಯಂತ ಹಿರಿಯ ಪುರುಷ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಹೆಸರೀಗ ಗಿನ್ನೆಸ್ ಪುಸ್ತಕ ಸೇರಿದೆ. 1907 ರ ಮಾರ್ಚ್ 5 ರಂದು ಜನಿಸಿದ ವತನಾಬೆ ಸುದೀರ್ಘ ಜೀವನದ ರಹಸ್ಯ ಬಲ್ಲಿರಾ ? ಏನೆಂದು ಟೆನ್ಶನ್ ಮಾಡಿಕೊಳ್ಳದೆ ಸದಾ ನಗುತ್ತಾ ಇರುವುದೇ ಅವರ ಆಯುರ್ ರಹಸ್ಯ. ಅಲ್ಲದೆ ಅವರು ಜೀವನ ಪೂರ್ತಿ ಏನಾದರೂ ಕೆಲಸ ಮಾಡುತ್ತಾ ಸದಾ ಆಕ್ಟಿವ್ ಆಗಿದ್ದಾರೆ. ಸಿಹಿಯನ್ನು ಬಹುವಾಗಿ …

ಇವರೇ ನೋಡಿ ಜಗತ್ತಿನ ಅತ್ಯಂತ ಹಿರಿಯ ಪುರುಷ । ಜಪಾನಿನ ಇವರ ವಯಸ್ಸು ಕೇವಲ 112 ವರ್ಷ ! Read More »

ಕುದ್ಮಾರು : ಅತ್ಯಾಚಾರ ಯತ್ನ ಆರೋಪಿಯ ಅಂಗಡಿಗೆ ಬೆಂಕಿ : ಮೂವರ ಬಂಧನ

ಅತ್ಯಾಚಾರ ಯತ್ನ ಆರೋಪಿಯ ಅಂಗಡಿಗೆ ಬೆಂಕಿ: ಮೂವರ ಬಂಧನ ಸುಳ್ಯ: ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿ ಬೆಳ್ಳಾರೆ ಪೊಲೀಸರ ವಶದಲ್ಲಿರುವ ಕುದ್ಮಾರು ಗ್ರಾಮದ ಅಬ್ದುಲ್ಲಾನ ಅಂಗಡಿಗೆ ಬೆಂಕಿ ಹಚ್ಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ತೆಗೆದು ಪಡೆದುಕೊಂಡಿದ್ದಾರೆ. 2 ಮದುವೆಯಾಗಿ 6 ಮಕ್ಕಳಿರುವ ಅಬ್ದುಲ್ಲಾ ಅವರು 5ನೇ ತರಗತಿಗೆ ಹೋಗುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ್ದು,ಫೋಕ್ಸೋ ಕಾಯ್ದೆಯ ಅನ್ವಯ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಈತನಿಗೆ ಕುದ್ಮಾರು ರಸ್ತೆ ಬದಿಯಲ್ಲಿ ಅಂಗಡಿಯೊಂದಿದ್ದು, ಇದಕ್ಕೆ ಫೆ.14 ರಂದು …

ಕುದ್ಮಾರು : ಅತ್ಯಾಚಾರ ಯತ್ನ ಆರೋಪಿಯ ಅಂಗಡಿಗೆ ಬೆಂಕಿ : ಮೂವರ ಬಂಧನ Read More »

ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ರಾಗಿ ಕೆ.ಸುರೇಂದ್ರನ್ ಆಯ್ಕೆ

ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ರಾಗಿ ಸುರೇಂದ್ರನ್ ಆಯ್ಕೆ ಕೇರಳ ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷ ರಾಗಿ ಸುರೇಂದ್ರನ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಕೇರಳ ರಾಜ್ಯ ಬಿಜೆಪಿಯ ಅಧ್ಯಕ್ಷ ರಾಗಿ ಶ್ರೀಧರನ್‌ ಪಿಳ್ಳ ಎರಡು ಬಾರಿ ಕರ್ತವ್ಯ ನಿರ್ವಹಿಸಿದ್ದರು. ಕೇರಳ ಬಿಜೆಪಿಯ ಅಧ್ಯಕ್ಷ ರಾಗಿದ್ದ ಕುಮ್ಮನಂ ರಾಜಶೇಖರನ್‌ ಅವರನ್ನು ಮಿಜೋರಾಂ ರಾಜ್ಯಪಾಲರನ್ನಾಗಿ ಮಾಡಿದ ಬಳಿಕ ಶ್ರೀಧರನ್ ಪಿಳ್ಳೆ ಅವರು ಆಯ್ಕೆಯಾಗಿದ್ದರು. ಕೇರಳದಲ್ಲಿ ಲೋಕಲ್ ಬಾಡಿ ಚುನಾವಣೆಗಳು ಇನ್ನೇನು ಕೆಲವೇ ತಿಂಗಳುಗಳ ದೂರದಲ್ಲಿವೆ. ಅಲ್ಲದೆ ಬರುವ ವರ್ಷ 2021 ಅದಕ್ಕೆ …

ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ರಾಗಿ ಕೆ.ಸುರೇಂದ್ರನ್ ಆಯ್ಕೆ Read More »

ಅಡ್ಕಾರು -ಗುಂಡ್ಯಡ್ಕ : ಅಬ್ಬಾಸ್ ಫೈಝಿ ಅವರ ಮನೆಯಿಂದ ಲಕ್ಷಾಂತರ ನಗದು ಕಳವು

ಅಡ್ಕಾರು -ಗುಂಡ್ಯಡ್ಕ : ಮನೆಯಿಂದ ಲಕ್ಷಾಂತರ ನಗದು ಕಳವು ಕಳವು ಸುಳ್ಯ : ಜಾಲ್ಸೂರು ಗ್ರಾಮದ ಅಡ್ಕಾರು ಗುಂಡ್ಯಡ್ಕ ಎಂಬಲ್ಲಿ ಮನೆಯೊಂದರಿಂದ ಸುಮಾರು ಲಕ್ಷಕ್ಕೂ ಅಧಿಕ ಮೊತ್ತದ ನಗದು ಕಳವಾಗಿರುವ ಘಟನೆ ವರದಿಯಾಗಿದೆ. ಅಡ್ಕಾರಿನ ಗುಂಡ್ಯಡ್ಕದ ಅಬ್ಬಾಸ್ ಫೈಝಿ ಅವರ ಪತ್ನಿ ಆಮೀನ ಅವರು ಫೆ.14ರಂದು ಮಧ್ಯಾಹ್ನ ಮನೆಗೆ ಬೀಗ ಹಾಕಿ ಮನೆ ಸಮೀಪದ ಗೃಹಪ್ರವೇಶಕ್ಕೆ ತೆರಳಿ ಅಲ್ಲಿರುವ ಮಗಳ ಮನೆಯಲ್ಲಿ ತಂಗಿದ್ದರು. ಫೆ.15ರಂದು ಮನೆಗೆ ಆಗಮಿಸಿದ ಅವರಿಗೆ ಮನೆಯ ಬಾಗಿಲು ಮುರಿದಿರುವುದನ್ನು ಗಮನಿಸಿ, ಒಳ ಹೋಗಿ …

ಅಡ್ಕಾರು -ಗುಂಡ್ಯಡ್ಕ : ಅಬ್ಬಾಸ್ ಫೈಝಿ ಅವರ ಮನೆಯಿಂದ ಲಕ್ಷಾಂತರ ನಗದು ಕಳವು Read More »

error: Content is protected !!
Scroll to Top