ಸವಣೂರು ಕೆ.ಸೀತಾರಾಮ ರೈಯವರ ರಶ್ಮಿ ನಿವಾಸದಲ್ಲಿ ಇಂಟರ್ ಕ್ಲಬ್ ಫೆಲೋಶಿಪ್ ಮೀಟ್

ಸವಣೂರು ಕೆ.ಸೀತಾರಾಮ ರೈಯವರ ರಶ್ಮಿ ನಿವಾಸದಲ್ಲಿ ಇಂಟರ್ ಕ್ಲಬ್ ಫೆಲೋಶಿಪ್ ಮೀಟ್

ಪುತ್ತೂರು: ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರ ರಶ್ಮಿ ನಿವಾಸದಲ್ಲಿ ಜರಗಿದ ರೋಟರಿ ಕ್ಲಬ್ ಸುಳ್ಯ, ಸುಳ್ಯ ಸಿಟಿ, ಸುಬ್ರಹ್ಮಣ್ಯ, ಬೆಳ್ಳಾರೆ ಟೌನ್, ಲಯನ್ಸ್ ಕ್ಲಬ್ ಸುಳ್ಯ, ಪುತ್ತೂರು ಮತ್ತು ಇನರ್‌ವೀಲ್ ಕ್ಲಬ್ ಸುಳ್ಯ ಇವರ ಆಶ್ರಯದಲ್ಲಿ ಜರಗಿದ ಇಂಟರ್ ಕ್ಲಬ್ ಫೆಲೋಶಿಪ್ ಮೀಟ್ 2019-20 ” ಸ್ನೇಹ ರಶ್ಮಿ” ಕಾರ್‍ಯಕ್ರಮ ನಡೆಯಿತು.

ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಪುರುಷೋತ್ತಮ್ ಕೆ.ಜಿ. ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ಸಂಸ್ಥೆಯ ಜಿಲ್ಲಾ ಗವರ್‌ನರ್ ಜೋಸೆಫ್ ಮ್ಯಾಥ್ಯೋ ಅಧ್ಯಕ್ಷತೆ ವಹಿಸಿದರು. ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ರೋನಲ್ಡ್ ಗೋಮ್ಸ್, ರವೀಂದ್ರ ಭಟ್, ಕೇಶವ ಪಿ.ಕೆರವರುಗಳು ಶುಭ ಹಾರೈಸಿದರು. ರೋಟರಿ ಕ್ಲಬ್‌ನ ಸುಳ್ಯ ಅಧ್ಯಕ್ಷ ಭಾನುಪ್ರಕಾಶ್, ಸುಬ್ರಹ್ಮಣ್ಯದ ಅಧ್ಯಕ್ಷ ಭರತ್ ನೆಕ್ರಾಜೆ, ಬೆಳ್ಳಾರೆ ಟೌನ್ ಅಧ್ಯಕ್ಷ ನರಸಿಂಹ ಜೋಷಿ, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ್ ರೈ, ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕಿನಾರ, ಸುಳ್ಯ ಇನರ್ ವೀಲ್ ಕ್ಲಬ್ ಅಧ್ಯಕ್ಷೆ ಡಾ. ಹರ್ಷಿತಾ ಪುರುಷೋತ್ತಮ್‌ರವರುಗಳು ಉಪಸ್ಥಿತರಿದ್ದರು. ಸವಣೂರು ಕಸ್ತೂರಿಕಲಾ ಎಸ್ ರೈ, ಡಾ.ರಾಜೇಶ್ ರೈ ಮಂಗಳೂರು, ಆಶ್ವಿತಾ ರಾಜೇಶ್ ರೈ ಮಂಗಳೂರು, ವಿದ್ಯಾರಶ್ಮಿ ವಿದ್ಯಾಲಯದ ಆಡಳಿತಾಧಿಕಾರಿ ಆಶ್ವಿನ್ ಶೆಟ್ಟಿ, ರಶ್ಮಿ ಆಶ್ವಿನ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಸಭಾ ಕಾರ್ಯಕ್ರಮದಲ್ಲಿ ಹಿರಿಯ ಕ್ರೀಡಾ ಪಟು ವಸಂತಿ ಶಿಬರಾಮ ಗೌಡ ಮೆದು ಮತ್ತು ಗಣಿ ವಿಜ್ಞಾನಿ ಸಂಧ್ಯಾ ಕುಮಾರಿರವರುಗಳನ್ನು ಸನ್ಮಾನಿಸಲಾಯಿತು. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ರವರು ಸನ್ಮಾನಿತರ ಪರಿಚಯ ಮಾಡಿದರು. ಸವಣೂರು ಕೆ.ಸೀತಾರಾಮ ರೈ ಸ್ವಾಗತಿಸಿ, ಜಯಪ್ರಕಾಶ್ ರೈ ಸುಳ್ಯ ವಂದಿಸಿದರು. ಸುಬ್ರಯ ಭಟ್ ದಳ ಕಾರ್ಯಕ್ರಮ ನಿರೂಪಿಸಿದರು.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: