ಇಂಜಿನಿಯರಿಂಗ್ ಪದವಿಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಸಿಂಧೂರ ಸರಸ್ವತಿಯವರಿಗೆ ಹುಟ್ಟೂರ ಸನ್ಮಾನ

0 13

ಇಂಜಿನಿಯರಿಂಗ್ ಪದವಿಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಸಿಂಧೂರ ಸರಸ್ವತಿಯವರಿಗೆ ಹುಟ್ಟೂರ ಸನ್ಮಾನ

ಪುತ್ತೂರು: ಮುಂಡೂರು ಗ್ರಾಮದ ಅಯೋಧ್ಯೆಯಲ್ಲಿ ವಾಸವಾಗಿರುವ ಮುರಳೀಧರ್ ಭಟ್ ಹಾಗೂ ಶೋಭಾ ದಂಪತಿಗಳ ಪುತ್ರಿ ಸಿಂಧೂರ ಸರಸ್ವತಿಯವರಿಗೆ ಹುಟ್ಟೂರ ಸನ್ಮಾನ ನಡೆಯಿತು. ಇಂಜಿನಿಯರಿಂಗ್ ಪದವಿ(ತಾಂತ್ರಿಕ)ಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು 6 ಚಿನ್ನದ ಪದಕ ಪಡೆದು ಗ್ರಾಮದ ಹೆಸರನ್ನು ರಾಜ್ಯ ಮಟ್ಟಕ್ಕೆ ತಲುಪಿಸಿದ ಹೆಮ್ಮೆಯ ಕುವರಿಯನ್ನು ಹುಟ್ಟೂರ ಜನ ಅತ್ಯಂತ ಸಂತಸದಿಂದ ಸನ್ಮಾನ ಮಾಡುವುದರ ಜೊತೆಗೆ ಕಾರ್ಯಕ್ರಮವನ್ನು ಆಯೋಜಿಸಿದರು. ಸನ್ಮಾನ ಕಾರ್ಯಕ್ರಮವನ್ನು ಸಾಂದೀಪನಿ ವಿದ್ಯಾಸಂಸ್ಥೆಯ ಸಂಚಾಲಕರಾಗಿರುವ ಭಾಸ್ಕರ ಆಚಾರ್ ನೆರವೇರಿಸಿ, ಸಿಂಧೂರ ಸರಸ್ವತಿಯ ಭವಿಷ್ಯಕ್ಕೆ ಶುಭಹಾರೈಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಂಧೂರ ಸರಸ್ವತಿಯವರು, ಊರಿನವರ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೇನೆ. ನಿಮ್ಮ ಹಾಗೂ ಹೆತ್ತವರ ಪ್ರೇರಣೆಯೇ ನನಗೆ ಶ್ರೀ ರಕ್ಷೆ ಎಂದರು.

ಸಭೆಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶ್ರೀಕಾಂತ್ ಆಚಾರ್, ಒತ್ತೆಕೋಲ ಸಮಿತಿ ಅಧ್ಯಕ್ಷ ಸದಾಶಿವ ಶೆಟ್ಟಿ ಪಟ್ಟೆ, ಗ್ರಾ.ಪಂ ಸದಸ್ಯರಾದ ಅಶೋಕ್ ಪುತ್ತಿಲ, ಬಾಲಕೃಷ್ಣ ಪೂಜಾರಿ, ಪ್ರೇಮಾ, ಸ್ವಾತಿ , ಶೀನಪ್ಪ ನಾಯ್ಕ್, ಜಯಗುರು ಆಚಾರ್, ಸುಜಾತ, ಲಕ್ಷ್ಮೀಶ ರಾವ್, ಬಾಲಚಂದ್ರ ಗೌಡ ಕಡ್ಯ, ಜಯಪ್ರಕಾಶ್, ಸವಿತಾ, ಮೋಕ್ಷಿತಾ, ಯಶವಂತಿ, ಹಿತೇಶ್ ಗೌಡ, ಸುದೀರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮುಂಡೂರು ಗ್ರಾ.ಪಂ.ಸದಸ್ಯ ಅಶೋಕ್ ಕುಮಾರ್ ಪುತ್ತಿಲ ಸ್ವಾಗತಿಸಿದರು. ಬಾಲಚಂದ್ರ ಗೌಡ ವಂದಿಸಿದರು. ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಉಮೇಶ್ ಗೌಡ ಗುತ್ತುಪಾಲು ಹಾಗೂ ಶಿವರಾಮ ಅಡಪ ಉಪಸ್ಥಿತರಿದ್ದರು.

Leave A Reply