ಸಾಮಾನ್ಯ ಸಭೆಗಳಿಗೆ ಗೈರು ಹಾಜರಾತಿ: 6 ಗ್ರಾ.ಪಂ.ಸದಸ್ಯರು ಅನರ್ಹ

ಸಾಮಾನ್ಯ ಸಭೆಗಳಿಗೆ ಗೈರು ಹಾಜರಾತಿ: 6 ಗ್ರಾ.ಪಂ.ಸದಸ್ಯರು ಅನರ್ಹ


Ad Widget

Ad Widget

Ad Widget

Ad Widget
Ad Widget

Ad Widget

Ad Widget

ನಿರಂತರ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಿಗೆ ಗೈರು ಹಾಜರಾದ ಹಿನ್ನಲೆ 6 ಜನ ಗ್ರಾಮ ಪಂಚಾಯ್ತಿ ಸದಸ್ಯರು ಅನರ್ಹಗೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸಾತನೂರು ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ. ಗ್ರಾಮೀಣ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾರವರು ಈ ಆದೇಶ ಹೊರಡಿಸಿದ್ದಾರೆ.


Ad Widget

ಸಾತನೂರು ಗ್ರಾಮ ಪಂಚಾಯತ್ ಸದಸ್ಯರಾದ ಎ ಕೆ ಜಿಲಾನಿ, ಕೆ. ಬಚ್ಚಪ್ಪ, ಸೌಭಾಗ್ಯ, ಶ್ವೇತಾ ಎಂ ಹಾಗೂ ಮಾಜಿ ಉಪಾಧ್ಯಕ್ಷೆ ಟಿ ಪ್ರಮೀಳಾ, ಹಾಗೂ ಉಪಾಧ್ಯಕ್ಷೆ ದಿವ್ಯ ಭಾರತಿ ಅನರ್ಹಗೊಂಡಿದ್ದಾರೆ.

ಲಂಚ ಪಡೆದು ಲೋಕಾಯುಕ್ತ ಹಾಗೂ ಎಸಿಬಿಯಿಂದ ಸಿಕ್ಕಿಬಿದ್ದಿದ್ದ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಮಂಜುನಾಥ್ ಎಂಬಾತನನ್ನ ಮರಳಿ ಪಂಚಾಯತ್ ಸೇರಿಸಿಕೊಳ್ಳಲು ಈ ಆರು ಜನ ಅನರ್ಹಗೊಂಡ ಸದಸ್ಯರು ಮುಂದಾಗಿದ್ದರು.ತಮಗೆ ಸಹಾಯವಾಗುತ್ತಿದ್ದ ಬಿಲ್ ಕಲೆಕ್ಟರ್ ಮಂಜುನಾಥ್ ನನ್ನು ಕಳೆದ 2018 ರ ಸಾಮಾನ್ಯ ಸಭೆಯಲ್ಲಿ ಮರಳಿ ಪಂಚಾಯತ್ ಗೆ ಸೇರಿಸಿಕೊಳ್ಳುವಂತೆ ನಡವಳಿಕೆಯನ್ನು ಸಿದ್ಧಪಡಿಸಿದ್ದರು. ಲಂಚ ಪಡೆದು ಎಸಿಬಿ ಹಾಗೂ ಲೋಕಾಯುಕ್ತರಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮಂಜುನಾಥ್‍ನನ್ನ ತೆಗೆದುಕೊಳ್ಳಲು ನಡವಳಿಕೆ ಸಿದ್ಧಪಡಿಸಿದ್ದ 6 ಜನರ ಸದಸ್ಯರನ್ನ ಅನರ್ಹಗೊಳಿಸುವಂತೆ ಪಿಡಿಓ ರಮೇಶ್ ಶಿಫಾರಸ್ಸು ಮಾಡಿದ್ದರು.

ಈ ಘಟನೆಯ ನಂತರ ನಡೆದ ನಿರಂತರ ನಾಲ್ಕು ಸಭೆಗಳಿಗೆ ಈ 6 ಜನ ಪಂಚಾಯತ್ ಸದಸ್ಯರು ಗೈರಾಗಿದ್ದರು. ಈ ಕುರಿತು ಸರ್ಕಾರಕ್ಕೆ ಪಿಡಿಓ ಶಿಫಾರಸ್ಸು ಮಾಡಿದ್ದು, ಗ್ರಾಮ ಪಂಚಾಯತ್ ಸದಸ್ಯರು ಕೂಡ ಸದಸ್ಯ ಸ್ಥಾನದಿಂದ ವಜಾಗೊಂಡು ಅನರ್ಹಗೊಂಡಿದ್ದಾರೆ.

ಮಂಜುನಾಥ್‍ಗೆ ಸಹಾಯ ಮಾಡಲು ಹೋಗಿ ತಮ್ಮ ಸದಸ್ಯತ್ವ ಸ್ಥಾನವನ್ನೇ ಈ ಸದಸ್ಯರು ಕಳೆದುಕೊಂಡಿದ್ದಾರೆ. ಸತತವಾಗಿ ಎರಡು ವರ್ಷಗಳ ಕಾಲ ಸಾಮಾನ್ಯ ಸಭೆಗಳಿಗೆ ಹಾಜರಾಗದೇ ಇದ್ದ ಕಾರಣ ಇದೇ ಸದಸ್ಯರಿಂದ ಅಭಿವೃದ್ಧಿ ಕೆಲಸಗಳಿಗೆ ಅನುಮೋದನೆ ದೊರಕುತ್ತಿರಲಿಲ್ಲ. ಇದರಿಂದ ಸಾರ್ವಜನಿಕರ ಕೆಲಸಗಳು ಆಗದೆ ಪರದಾಡುವಂತಾಗಿತ್ತು. ನಿರಂತರ ಗೈರು ಹಿನ್ನಲೆ ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮ 1993 ರ 48 (4) ರ ಪ್ರಕಾರ ಉಪಾಧ್ಯಕ್ಷೆಯನ್ನ ಹಾಗೂ 1993 ಪ್ರಕರಣ 43 ಎ ಪ್ರಕಾರ ಸದಸ್ಯರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು,ಭ್ರಷ್ಟರ ಪರ ನಿಲ್ಲುವ ಹಾಗೂ ವಕಾಲತ್ತು ಮಾಡುವ ಪಂಚಾಯತ್ ಸದಸ್ಯರಿಗೆ ಈ ಪ್ರಕರಣ ಎಚ್ಚರಿಕೆ ಗಂಟೆಯಾಗಿದೆ.

error: Content is protected !!
Scroll to Top
%d bloggers like this: