ಉಪ್ಪಿನಂಗಡಿ :ಗುಜರಿ ಕಳ್ಳರ ಬಂಧನ

ಗುಜರಿ ಕಳ್ಳರು

ಪುತ್ತೂರು : ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ತಾಲೂಕು ಉಪ್ಪಿನಂಗಡಿ ಕಸಬಾ ಗ್ರಾಮದ ಹಳೆಗೇಟು ಎಂಬಲ್ಲಿರುವ ಜಿ.ಕೆ ಸ್ಕ್ರಾಪ್ ಎಂಬ ಹೆಸರಿನ ಗುಜಿರಿ ಅಂಗಡಿಯ ಗೋದಾಮಿನಲ್ಲಿ ಇರಿಸಿದ್ದ ಸುಮಾರು ಅಂದಾಜು 1,00,000/- ರೂ ಮೌಲ್ಯದ ಸೊತ್ತಾದ ಹಳೆಯ ಗುಜಿರಿ ಸಾಮಾಗ್ರಿಗಳನ್ನು ಯಾರೋ ಕಳ್ಳರೂ ಕಳವು ಮಾಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಿನಾಂಕ 06.02.2020 ರಂದು ಕಲಂ:380 ಬಾಧಂಸಂ ಯಂತೆ ಪ್ರಕರಣ ದಾಖಲಿಸಲಾಗಿತ್ತು.


Ad Widget

Ad Widget

Ad Widget

Ad Widget
Ad Widget

Ad Widget

Ad Widget

ಈ ಕುರಿತು ತನಿಖೆ ನಡೆಸಿದ ಉಪ್ಪಿನಂಗಡಿ ಪೊಲೀಸ್ ತಂಡವು ಫೆ.7ರಂದು ಪ್ರಕರಣದ ಆರೋಪಿಗಳಾದ 1) 34 ನೇ ನೆಕ್ಕಿಲಾಡಿ ಗ್ರಾಮ, ಪುತ್ತೂರು ತಾಲೂಕು ನಿವಾಸಿ ಮಹಮ್ಮದ್ ಸಿನಾನ್ @ ಸಿನಾನ್ (19 ವರ್ಷ), 2) ಇಳಂತಿಲ ಗ್ರಾಮ ,ಬೆಳ್ತಂಗಡಿ ತಾಲೂಕು ನಿವಾಸಿ ಹಷೀತ್ (18ವರ್ಷ) 3) ಬಾರ್ಯ ಗ್ರಾಮ, ಬೆಳ್ತಂಗಡಿ ತಾಲೂಕು ನಿವಾಸಿ ಇಸ್ಮಾಯಿಲ್ (18 ವರ್ಷ) ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


Ad Widget

ಆರೋಪಿಗಳನ್ನು ವಿಚಾರಣೆ ನಡೆಸಿ ಆರೋಪಿಗಳಿಂದ ಕಳವು ಮಾಡಿದ ಸೊತ್ತುಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ವಾಹನದ ಸಮೇತ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

error: Content is protected !!
Scroll to Top
%d bloggers like this: