Day: February 7, 2020

ಕಾಣಿಯೂರು ಬೈತಡ್ಕದಲ್ಲಿ ವಿದ್ಯುತ್ ಕಂಬಕ್ಕೆ ಪಿಕ್‌ಅಪ್ ಡಿಕ್ಕಿ,ಮುರಿದು ಬಿದ್ದ ಕಂಬ

ಕಾಣಿಯೂರು ಬೈತಡ್ಕದಲ್ಲಿ ಪಿಕ್‍ಅಪ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಕಾಣಿಯೂರು: ಕಾಣಿಯೂರು ಸಮೀಪ ಬೈತಡ್ಕ ಎಂಬಲ್ಲಿ ಪಿಕ್‍ಅಪ್ ಒಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಫೆ 7ರಂದು ನಡೆದಿದೆ. ಕಾಣಿಯೂರು ಕಡೆಯಿಂದ ಬರುತ್ತಿದ್ದ ಪಿಕ್‍ಅಪ್ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಸಂಪೂರ್ಣ ತುಂಡಾಗಿ ಹಾನಿಯಾಗಿದೆ. ಚಾಲಕ ಸಣ್ಣ ಪುಟ್ಟ ಗಾಯಗೊಂಡಿದ್ದು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಫೆ. 13-19 :ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ

ಕಡಬ : ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಫೆ-13 ರಿಂದ 19 ರವರೆಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ 5 ದಿನಗಳ ಉತ್ಸವಾದಿಗಳು ನಡೆಯಲಿದೆ. ಫೆ.13 ರಂದು ರಾತ್ರಿ ಧ್ವಜಾರೋಹಣ ,ಬಲಿಹೊರಟು ಉತ್ಸವ ,ಶ್ರೀ ರಂಗಪೊಜೆ ,ಮಹಾಪೊಜೆ ,ಪ್ರಸಾದ ವಿತರಣೆ ನಡೆಯಲಿದೆ ಫೆ-14 ರಂದು ರಾತ್ರಿ ಬಲಿ ಹೊರಟು ಉತ್ಸವ ,ಹೊಸಮಜಲು ಕಟ್ಟೆಪೊಜೆ .ಭೂತ ಬಲಿ ,ಶ್ರೀ ಮಹಾಲಿಂಗರಾಯ ದೈವದ ಭಂಡಾರ ಬಂದು ದೈವದ ಜಾಲೆ ಸವಾರಿ .ಶ್ರೀ ನೇಲ್ಕಾರು ನೇಮ ಹಾಗೂ ಉಳ್ಳಾಲ್ತಿ ನೇಮ …

ಫೆ. 13-19 :ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ Read More »

ಸವಣೂರು : ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ

ಸವಣೂರು : ಸವಣೂರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ಫೆ.7ರಂದು ಆರಂಭಗೊಂಡಿದ್ದು ಫೆ.8ರವರೆಗೆ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಫೆ.6ರಂದು ಬೆಳಿಗ್ಗೆ ಊರ ಭಕ್ತಾಧಿಗಳಿಂದ ಸಮರ್ಪಣೆ ನಡೆಯಿತು. ಫೆ.7ರಂದು ಬೆಳಿಗ್ಗೆ ತಂತ್ರಿಗಳ ಆಗಮನ,ಸಾಮೂಹಿಕ ಪ್ರಾರ್ಥನೆ,ಪುಣ್ಯಾಹ,ಮಧ್ಯಾಹ್ನ ಕಲಶಾಭಿಷೇಕ,ಮಹಾಪೂಜೆ,ಪರಿವಾರ ದೇವರುಗಳ ಪ್ರತಿಷ್ಠಾ ದಿನದ ಪೂಜೆ,ಮಹಾಪೂಜೆ,ಪ್ರಸಾದ ವಿತರಣೆ,ಪಲ್ಲಪೂಜೆ ನಡೆಯಿತು.ಮದ್ಯಾಹ್ನ ಗೋಪಾಲಕೃಷ್ಣ ಬಡೆಕಿಲ್ಲಾಯ ಅವರ ಮನೆಯವರ ಸೇವಾರ್ಥವಾಗಿ ಅನ್ನಸಂತರ್ಪಣೆ ನಡೆಯಿತು. ಸಂಜೆ ದೀಪಾರಾಧನೆ,ತಾಯಂಬಕ ಸೇವೆ,ಮಹಾಪೂಜೆ,ಶ್ರೀ ದೇವರ ಬಲಿಹೊರಟು ಉತ್ಸವ,ಶ್ರೀ ಭೂತಬಲಿ,ವಸಂತ ಕಟ್ಟೆಪೂಜೆ,ಸುಡುಮದ್ದು ಪ್ರದರ್ಶನ ನಡೆಯಿತು. ಫೆ.8ರಂದು ಬೆಳಿಗ್ಗೆ ದರ್ಶನ ಬಲಿ,ಬಟ್ಟಲು …

ಸವಣೂರು : ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ Read More »

ಫೆ.8 : ಕಲ್ಲೇಗ ಕಲ್ಲುಡ ದೈವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ

ಪುತ್ತೂರು: ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಫೆ.8ರಂದು ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ ನಡೆಯಲಿದೆ. ಫೆ.8ರಂದು ಬೆಳಿಗ್ಗೆ ಕಾರ್ಜಾಲುಗುತ್ತಿನಲ್ಲಿ ಸ್ಥಳಶುದ್ಧಿ ಹೋಮ, ಕಲಶ ಪ್ರತಿಷ್ಠೆ, ನಂತರ ಶ್ರೀ ದೈವಸ್ಥಾನದಲ್ಲಿ ಗಣಹೋಮ, ಶ್ರೀ ದೈವಗಳ ತಂಬಿಲ, ನಾಗತಂಬಿಲ, ಮಧ್ಯಾಹ್ನ ಶ್ರೀ ದೈವಸ್ಥಾನದ ಬಳಿ ಶ್ರೀ ದೈವಗಳ ಭಂಡಾರದ ವತಿಯಿಂದ ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ ಕಾರ್ಜಾಲು ಗುತ್ತಿನಿಂದ ಶ್ರೀ ದೈವಗಳ ಭಂಡಾರ ಹೊರಟು ಗೋಂದಲು ಪೂಜೆ, ನಂತರ ಶ್ರೀ ಕಲ್ಲುಡ ಕುಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ ನಡೆಯಲಿದೆ …

ಫೆ.8 : ಕಲ್ಲೇಗ ಕಲ್ಲುಡ ದೈವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ Read More »

ಅಪಘಾತದ ಗಾಯಾಳು ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಸುಳ್ಯ: ರಸ್ತೆ ಅಪಘಾತದಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಳ್ಯ ದ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನಡೆದಿದೆ. ಜ.19 ರಂದು ಬೆಳಿಗ್ಗೆ ಸುಳ್ಯ ಕಡೆಯಿಂದ ಬಡ್ಡಡ್ಕ ಕಡೆಗೆ ಸಂಚರಿಸುತ್ತಿದ್ದ ವ್ಯಾಗನರ್ ಕಾರಿಗೆ ಬಡ್ಡಡ್ಕದಿಂದ ಸುಳ್ಯಕ್ಕೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿಯಾದ ಘಟನೆ ಅಲೆಟ್ಟಿಯ ಕುಡೆಕಲ್ಲು ಎಂಬಲ್ಲಿ ನಡೆದಿತ್ತು. ಘಟನೆಯಲ್ಲಿ ಬೈಕ್ ಸವಾರ ಎಂ.ಎ.ವಿದ್ಯಾರ್ಥಿ ವಿನೀತ್ ಕಲ್ಲಪಳ್ಳಿ ಅವರು ಬೈಕ್ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಅವರನ್ನು ತಕ್ಷಣ ಅವರನ್ನು 108 ಅಂಬ್ಯುಲೆನ್ಸ್ ನಲ್ಲಿ ಸುಳ್ಯದ ಆಸ್ಪತ್ರೆಗ ಸಾಗಿಸಲಾಯಿತು. …

ಅಪಘಾತದ ಗಾಯಾಳು ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು Read More »

ಉಪ್ಪಿನಂಗಡಿ :ಗುಜರಿ ಕಳ್ಳರ ಬಂಧನ

ಪುತ್ತೂರು : ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ತಾಲೂಕು ಉಪ್ಪಿನಂಗಡಿ ಕಸಬಾ ಗ್ರಾಮದ ಹಳೆಗೇಟು ಎಂಬಲ್ಲಿರುವ ಜಿ.ಕೆ ಸ್ಕ್ರಾಪ್ ಎಂಬ ಹೆಸರಿನ ಗುಜಿರಿ ಅಂಗಡಿಯ ಗೋದಾಮಿನಲ್ಲಿ ಇರಿಸಿದ್ದ ಸುಮಾರು ಅಂದಾಜು 1,00,000/- ರೂ ಮೌಲ್ಯದ ಸೊತ್ತಾದ ಹಳೆಯ ಗುಜಿರಿ ಸಾಮಾಗ್ರಿಗಳನ್ನು ಯಾರೋ ಕಳ್ಳರೂ ಕಳವು ಮಾಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಿನಾಂಕ 06.02.2020 ರಂದು ಕಲಂ:380 ಬಾಧಂಸಂ ಯಂತೆ ಪ್ರಕರಣ ದಾಖಲಿಸಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಉಪ್ಪಿನಂಗಡಿ ಪೊಲೀಸ್ ತಂಡವು ಫೆ.7ರಂದು ಪ್ರಕರಣದ …

ಉಪ್ಪಿನಂಗಡಿ :ಗುಜರಿ ಕಳ್ಳರ ಬಂಧನ Read More »

ಭಜನಾ ಸತ್ಸಂಗ ಸಮಾವೇಶ ಸ್ಥಳಕ್ಕೆ ಡಾ.ಹೆಗ್ಗಡೆ ಭೇಟಿ : ಸಿದ್ದತೆ ವೀಕ್ಷಣೆ

ಭಜನಾ ಸತ್ಸಂಗ ಸಮಾವೇಶ ಸ್ಥಳಕ್ಕೆ ಡಾ.ಹೆಗ್ಗಡೆ ಬೇಟಿ : ಸಿದ್ದತೆ ವೀಕ್ಷಣೆ ಪುತ್ತೂರು: ಫೆ.8 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರು ಗದ್ದೆಯಲ್ಲಿ ನಡೆಯುವ ‘ಭಜನಾ ಸತ್ಸಂಗ ಸಮಾವೇಶ – ಕೋಟಿ ಶಿವ ಪಂಚಾಕ್ಷರಿ ಪಠಣ’ ಕಾರ್ಯಕ್ರಮದ ಸಿದ್ಧತೆ ಹಾಗೂ ವ್ಯವಸ್ಥೆಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಫೆ.7ರಂದು ಸ್ಥಳಕ್ಕೆ ಭೇಟಿಕೊಟ್ಟು ವೀಕ್ಷಿಸಿ ಸಲಹೆ ಸೂಚನೆಗಳನ್ನು ನೀಡಿದರು. ಸತ್ಸಂಗ ಸಮಾವೇಶ ಸಮಿತಿ ಅಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಆರ್ಥಿಕ …

ಭಜನಾ ಸತ್ಸಂಗ ಸಮಾವೇಶ ಸ್ಥಳಕ್ಕೆ ಡಾ.ಹೆಗ್ಗಡೆ ಭೇಟಿ : ಸಿದ್ದತೆ ವೀಕ್ಷಣೆ Read More »

ಭಜನಾ ಹೃದಯ ನಿರ್ಮಿಸುವ ಸಲುವಾಗಿ ಭಜನಾ ಸತ್ಸಂಗ ಸಮಾವೇಶ-ಡಾ.ಎಚ್.ಎಲ್. ಮಂಜುನಾಥ್

ಪುತ್ತೂರು : ಯುವಜನರಲ್ಲಿ ಧಾರ್ಮಿಕ ನಂಬಿಕೆ, ಆಚರಣೆಗಳ‌, ಧರ್ಮದ ಬಗ್ಗೆ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಭಜನಾ ಸತ್ಸಂಗ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಚ್. ಎಲ್.‌ ಮಂಜುನಾಥ್ ಹೇಳಿದರು. ಅವರು ಫೆ. 8ರಂದು ಭಜನಾ ಸತ್ಸಂಗ ಸಮಾವೇಶ ನಡೆಯುವ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಗೆ ಭೇಟಿ ನೀಡಿ ಸಮಾವೇಶದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ಯುವಶಕ್ತಿಯ ಸದ್ಭಳಕೆಗೆ ತಿಳುವಳಿಕೆ ಮೂಡಿಸುವ ಹಿನ್ನೆಲೆಯಲ್ಲಿ ಭಜನಾ ಕೂಟ ನಡೆಸಲಾಗುತ್ತಿದೆ …

ಭಜನಾ ಹೃದಯ ನಿರ್ಮಿಸುವ ಸಲುವಾಗಿ ಭಜನಾ ಸತ್ಸಂಗ ಸಮಾವೇಶ-ಡಾ.ಎಚ್.ಎಲ್. ಮಂಜುನಾಥ್ Read More »

ಮಾಯಾ ಮಹೇಶ್ವರ ದೇವಸ್ಥಾನ ಇದರ ವಾರ್ಷಿಕ ಜಾತ್ರೋತ್ಸವ ಆರಂಭ : ಮಾ 6 ರಿಂದ ಮಾ 10 ರವರೆಗೆ : ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳಾಲು : ಬೆಳಾಲು ಗ್ರಾಮದ ಮಾಯಾ ಮಹೇಶ್ವರ ದೇವಸ್ಥಾನ ಮಾಯ ಇದರ ವಾರ್ಷಿಕ ಜಾತ್ರೆಯು ಮಾ.6 ಆರಂಭವಾಗಲಿದ್ದು ಮಾ 10 ರವರೆಗೆ ನಡೆಯಲಿದೆ. ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಇತ್ತೀಚಿಗೆ ಊರ ಹಿರಿಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಚ್ ಪದ್ಮ ಗೌಡ, ವಿಜಯ್ ತಂತ್ರಿ, ಪಾರ್ಲ ಶಿವಕುಮಾರ್ ಬಾರಿತ್ತಾಯ, ಅರಿಕೋಡಿ ಕ್ಷೇತ್ರದ ಮೊಕ್ತೇಸರರಾದ ಶ್ರೀಯುತ ದೊಂಬಯ್ಯ ಗೌಡ, ಆರಿಕೊಡಿ ಧರ್ಮದರ್ಶಿಗಳಾದ ಹರೀಶ್ ಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಜಯಂತ ಗೌಡ, ನಿವೃತ್ತ …

ಮಾಯಾ ಮಹೇಶ್ವರ ದೇವಸ್ಥಾನ ಇದರ ವಾರ್ಷಿಕ ಜಾತ್ರೋತ್ಸವ ಆರಂಭ : ಮಾ 6 ರಿಂದ ಮಾ 10 ರವರೆಗೆ : ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ ಇದರ ಬ್ರಹ್ಮಕಲಶೋತ್ಸವದ ಸ್ಮರಣ ಸಂಚಿಕೆ: ದೇಶ ರಕ್ಷಣೆಯಲ್ಲಿ ಪ್ರಜೆಗಳ ಪಾತ್ರ -ವಿಷಯದಲ್ಲಿ ಪ್ರಬಂಧ ಸ್ಪರ್ಧೆ

ಪುತ್ತೂರು: ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ ಇದರ ಬ್ರಹ್ಮಕಲಶೋತ್ಸವದ ಸ್ಮರಣ ಸಂಚಿಕೆ ಸಮಿತಿ ವತಿಯಿಂದ ವಿದ್ಯಾರ್ಥಿಗಳನ್ನು ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ದೃಷ್ಟಿಯಿಂದ ತಾಲೂಕು ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ *”ದೇಶ ರಕ್ಷಣೆಯಲ್ಲಿ ಪ್ರಜೆಗಳ ಪಾತ್ರ* “ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು,ಈ ಸ್ಪರ್ಧೆಯಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರಬಂಧವನ್ನು ಬರೆದು ಈ ಕೆಳಗೆ ತಿಳಿಸಿದ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿಕೊಡಬೇಕಾಗಿ ಈ ಮೂಲಕ ವಿನಂತಿ. *ನಿಯಮಗಳು:-* 1)ತಾವು ಕಳುಹಿಸುವ ಪ್ರಬಂಧಗಳು 100 ಪದಗಳಿಗೆ ಮೀರಿರಬಾರದು. 2)ದಿನಾಂಕ:25.02.2020 …

ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ ಇದರ ಬ್ರಹ್ಮಕಲಶೋತ್ಸವದ ಸ್ಮರಣ ಸಂಚಿಕೆ: ದೇಶ ರಕ್ಷಣೆಯಲ್ಲಿ ಪ್ರಜೆಗಳ ಪಾತ್ರ -ವಿಷಯದಲ್ಲಿ ಪ್ರಬಂಧ ಸ್ಪರ್ಧೆ Read More »

error: Content is protected !!
Scroll to Top