ಭಜನಾ ಸತ್ಸಂಗ ಸಮಾವೇಶ: ಸಿದ್ದತಾ ಸಭೆ


Ad Widget

Ad Widget

Ad Widget

Ad Widget
Ad Widget

Ad Widget

ಪುತ್ತೂರು: ಫೆ. 8 ರಂದು ನಡೆಯಲಿರುವ ಭಜನಾ ಸತ್ಸಂಗ ಸಮಾವೇಶ ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಪಠಣ ಹಾಗೂ ಭಜನಾ ಸಂಕೀರ್ತನ ಮೆರವಣಿಗೆಯ ಕಾರ್ಯಕ್ರಮ ದ ಅಂತಿಮ ಪೂರ್ವಭಾವಿ ಸಿದ್ದತಾ ಸಭೆ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ನಡೆಯಿತು.

ಸಭೆಯಲ್ಲಿ ಶ್ರೀ ಕ್ಷೇತ್ರ ಮಾಣಿಲ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ ಕಾರ್ಯಕ್ರಮದಲ್ಲಿ ಹಲವು ಮಠಾಧಿಪತಿಗಳು, ಜನಪ್ರತಿನಿದಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ, ಮಾನವೀಯತೆಯ ಮೌಲ್ಯಗಳು ಸಮಾಜದಲ್ಲಿ ನೆಲೆಸಬೇಕು, ಎಲ್ಲರನ್ನು ಒಗ್ಗೂಡಿಸಬೇಕೆಂದು ಈ ಭಜನಾ ಕಾರ್ಯಕ್ರಮ ಮಾಡಿದ್ದೇವೆ, ಸುಮಾರು 50ಸಾವಿರ ಜನ ಸೇರುವ ನಿರೀಕ್ಷೆಯಲ್ಲಿದ್ದೇವೆ, ಮುಂದಿನ ಪೀಳಿಗೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಜೋಜಿಸಿದ್ದೇವೆ ಎಂದರು.


Ad Widget

ಕಾರ್ಯಾಧ್ಯಕ್ಷ ರಾದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ನಗರದಲ್ಲಿ ಈಗಾಗಲೇ ಬ್ಯಾನರ್, ಬಂಟಿಂಗ್ಸ್ ಗಳನ್ನು ಅಳವಡಿಸಲಾಗಿದೆ, ಒಂದೂವರೆ ಲಕ್ಷ ಚದರ ಆಡಿ ವಿಸ್ತೀರ್ಣದ ಸಭಾಂಗಣ ಸಜ್ಜುಗೊಂಡಿದ್ದು, 1600 ಮಿಕ್ಕಿದ ಭಜನಾ ಮಂಡಳಿ ಗಳು ಭಾಗವಹಿಸಲಿವೆ.

ಪುತ್ತೂರಿಗೆ ವಿವಿಧ ಭಾಗಗಳಿಂದ ಸರಕಾರಿ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ, ಬೆಳಗಿನ ಉಪಹಾರ, ಮದ್ಯಾನ್ಹ ಭೋಜನ ವ್ಯವಸ್ಥೆ ಮಾಡಲಾಗಿದೆ, ಭಜನಾ ಸಂಕೀರ್ತನ ಯಾತ್ರೆ ಯು ಚೆಂಡೆ, ವಾದ್ಯ, ಭಜನಾ ಕುಣಿತ ಗಳೊಂದಿಗೆ ಪುತ್ತೂರಿನ ಆದರ್ಶ ಆಸ್ಪತ್ರೆ ರಸ್ತೆ, ಎ ಪಿ ಯಂ ಸಿ ರಸ್ತೆ ಯಾಗಿ ಬಸ್ಸು ನಿಲ್ದಾಣ ದ ಬಳಿಯಿಂದ ಮಹಾಲಿಂಗೇಶ್ವರ ಗದ್ದೆಗೆ ಬರಲಿವೆ.

ಎಲ್ಲಾ ಮಹಾಜನತೆ ಈ ಕಾರ್ಯಕ್ರಮ ದಲ್ಲಿ ಭಾಗವಹಿಸುವಂತೆ ಭಜನಾ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.ಭಜನಾ ಸತ್ಸಂಗ ಸಮಾವೇಶ ಸಮಿತಿಯ ಅಧ್ಯಕ್ಷ ಧನ್ಯಕುಮಾರ್ ಬೆಳಿಯೂರುಗುತ್ತು, ಪದ್ಮನಾಭ ಶೆಟ್ಟಿ, ಯೋಜನೆಯ ಕೇಂದ್ರ ಒಕ್ಕೂಟದ ಅಧ್ಯಕ್ಷ ರಾಮಣ್ಣ ಗೌಡ ಗುಂಡೋಳೆ, ಸಮಿತಿಯ ಪ್ರಮುಖರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಲೋಕೇಶ್ ಬೆತ್ತೋಡಿ, ಜನಾರ್ದನ ಎಸ್, ರಾಜೇಶ್ ಬನ್ನೂರು, ಜಯಂತ ಪೊರೋಳಿ, ಹರಿರಾಮಚಂದ್ರ ಉಪ್ಪಿನಂಗಡಿ, ರಾಜೇಶ್ ಜೈನ್, ವಸಂತ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!
Scroll to Top
%d bloggers like this: