ಬಿದ್ದು ಸಿಕ್ಕಿದ್ದ ಪರ್ಸ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಸವಣೂರು ವಿದ್ಯಾರಶ್ಮಿಯ ವಿದ್ಯಾರ್ಥಿನಿಯರಾದ ಯಶಸ್ವಿನಿ, ಸ್ಪೂರ್ತಿ

ಬಿದ್ದು ಸಿಕ್ಕಿದ್ದ ಪರ್ಸ್ ಹಿಂತಿರುಗಿಸಿದ ವಿದ್ಯಾರ್ಥಿನಿಯರಾದ ಯಶಸ್ವಿನಿ, ಸ್ಪೂರ್ತಿ

ಪುತ್ತೂರು: ಸವಣೂರು ವಿದ್ಯಾರಶ್ಮಿ ಪದವಿ ಕಾಲೇಜಿನ ಆವರಣದೊಳಗೆ ಬಿದ್ದು ಸಿಕ್ಕಿದ್ದ ಪರ್ಸನ್ನು ಇಬ್ಬರು ವಿದ್ಯಾರ್ಥಿನಿಯರು ಪ್ರಾಮಾಣಿಕವಾಗಿ ಕಾಲೇಜಿನ ಮುಖ್ಯಸ್ಥರ ಮೂಲಕ ವಾರಿಸುದಾರರಿಗೆ ಒಪ್ಪಿಸಿದ ಘಟನೆ ಫೆ.3ರಂದು ನಡೆದಿದೆ. ಎನ್.ಎಸ್.ಎಸ್ ವಿದ್ಯಾರ್ಥಿಗಳಾದ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ ಯಶಸ್ವಿನಿ ಹಾಗೂ ಪ್ರಥಮ ವರ್ಷದ ಬಿ.ಎ. ವಿದ್ಯಾರ್ಥಿನಿ ಸ್ಪೂರ್ತಿಯವರು ಶಾಲಾ ಕ್ಯಾಂಪಸ್ ಒಳಗಡೆ ಇರುವ ವೇಳೆ ಅವರಿಗೆ ಹಣ ಇರುವ ಪರ್ಸ್ ಸಿಕ್ಕಿದ್ದು ಅವರು ಅದನ್ನು ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮೀ ಎಸ್. ರೈ ಅವರಿಗೆ ನೀಡಿದ್ದರು.

ಬಳಿಕ ಉಪನ್ಯಾಸಕ, ಎನ್.ಎಸ್.ಎಸ್. ಸಂಯೋಜಕ ವೆಂಕಟ್ರಮಣ ಅವರು ಪರ್ಸ್ ಒಳಗಡೆ ಇದ್ದ ಕಡಬ ಆಕಾಶ್ ಸ್ಟುಡಿಯೋದ ಕಾರ್ಡ್‌ನಲ್ಲಿದ್ದ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ಪರ್ಸ್ ವಾರಿಸುದಾರ ಕಡಬ ಬಜಾಝ್ ಶೋ ರೂಮ್ ನಲ್ಲಿನರುವ ಮರ್ದಾಳ ದೋಳ ನಿವಾಸಿ ದೀಕ್ಷಿತ್ ಎಂಬವರದ್ದು ಎನ್ನುವುದನ್ನು ಪತ್ತೆ ಹಚ್ಚಿದ್ದರು. ಬಳಿಕ ದೀಕ್ಷಿತ್ ಅವರು ಕಾಲೇಜಿಗೆ ತೆರಳಿ ಪರ್ಸನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿನಿಯರಿಗೆ ಬಹುಮಾನ ನೀಡಿ ಕೃತಜ್ಞತೆ ಸಲ್ಲಿಸಿದರು.

Leave A Reply

Your email address will not be published.