ಉಪ್ಪಿನಂಗಡಿಯ ನೆಕ್ಕರೆ, ಕಂಪ, ಬೊಳ್ಳಾವು ಎಂಬಲ್ಲಿ ಹಣ್ಣಡಿಕೆ ಕಳವು ಪ್ರಕರಣ । ಮೂವರ ಬಂಧನ

ಉಪ್ಪಿನಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಪುತ್ತೂರು ತಾಲೂಕು ಕಸಬಾ ಗ್ರಾಮದ ನೆಕ್ಕರೆ, ಕಂಪ, ಬೊಳ್ಳಾವು ಎಂಬಲ್ಲಿನ ನಿವಾಸಿ ರಾಜೇಶ್‌ ಎಂಬವರ ತೋಟದ ಅಡಿಕೆ ಮರಗಳಿಂದ ಹಣ್ಣು ಅಡಿಕೆಯ ಕಳವು ನಡೆದಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದ್ದು,
ಸದ್ರಿ ಪ್ರಕರಣದಲ್ಲಿ ಮೂವರು ಆರೋಪಿಗಳ ನ್ನು ಬಂಧಿಸಲಾಗಿದೆ.

ಆರೋಪಿಗಳನ್ನು ಚಂದ್ರಹಾಸ, (23 ವರ್ಷ), ಜಗಧೀಶ (24 ವರ್ಷ), ಯೊಗೀಶ (18 ವರ್ಷ) ಎಂಬವರುಗಳನ್ನು ಬಂದಿಸಲಾಗಿದ್ದು,

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಆರೋಪಿಗಳೆಲ್ಲರೂ ತಾವು ಕಳವು ಮಾಡಿದ ಹಣ್ಣು ಅಡಿಕೆಯಿಂದ ಮಾರಿ ಬಂದ ಹಣವನ್ನು ಪರಸ್ಪರ ಹಂಚಿಕೊಂಡಿದ್ದಾರೆ.

ಮೂವರು ಆರೋಪಿಗಳಿಂದ ಅಂದಾಜು 1,25,000/-ರೂ ಮೌಲ್ಯದ ಬೈಕ್, ಸ್ಕೂಟರ್ ಹಾಗೂ ತಾವೂ ಕಳವು ಮಾಡಿ ನೀಡಿದ ಅಡಿಕೆ ಅಂಗಡಿಗಳಲ್ಲಿಂದ ಒಟ್ಟು 25,000/- ರೂ ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ಮೋಟಾರ್‌ ಬೈಕ್‌ಗಳು ಹಾಗೂ ಅಡಿಕೆಯ ಒಟ್ಟು ಮೌಲ್ಯ 1,50,000/ ರೂಪಾಯಿಯದ್ದಾಗಿದೆ.

Leave a Reply

error: Content is protected !!
Scroll to Top
%d bloggers like this: