ಆನ್ ಲೈನ್ ನಲ್ಲಿ ಮದ್ಯ ತರಿಸಲು ಹೋಗಿ ಲಕ್ಷ ರೂಪಾಯಿ ನಾಮ ಹಾಕಿಸಿಕೊಂಡ ಟೆಕ್ಕಿ | ಬೆಂಗಳೂರಿನ ಅರ್ಜುನ್ ಜಗನ್ನಾಥನ್ ಈ ಬುದ್ದಿವಂತ !

ಬುದ್ದಿವಂತ ಹುಡುಗ ಮಾತ್ರ ಟೆಕ್ಕಿಯಾಗುತ್ತನೆ. ಟೆಕ್ಕಿಯಾದ ಮೇಲೆ ಹುಡುಗ ದಡ್ಡನಾಗುತ್ತಾನಾ ? ಈ ಕೆಳಗಿನ ಸ್ಟೋರಿ ಓದಿ.
ಆನ್ ಲೈನ್ ನಲ್ಲಿ ಮದ್ಯ ಖರೀದಿಸಲು ಹೋಗಿ ಲಕ್ಷಾಂತರ ರೂಪಾಯಿ ದುಡ್ಡು ಕಳೆದುಕೊಂಡಿದ್ದಾನೆ ಬೆಂಗಳೂರಿನ ಈ ಬುದ್ಧಿವಂತ ಟೆಕ್ಕಿ.

ಯೆಲೇನಹಳ್ಳಿಯ ನಿವಾಸಿ ಅರ್ಜುನ್ ಜಗನ್ನಾಥನ್ ಎಂಬ ಸಾಫ್ಟ್‌ವೇರ್ ಉದ್ಯೋಗಿಗೆ ಜನವರಿ 19 ರಂದು ಪಾರ್ಟಿ ಮಾಡಬೇಕೆನಿಸಿತು. ಸೀದಾ ಎದ್ದು ಹೋಗಿ ಶಾಪಿನಿಂದ ಮದ್ಯ ಖರೀದಿಸಲು ಸೊಂಟದ ಕೆಳಗಿನ ಛರ್ಭಿ ಬಿಡಬೇಕಲ್ಲ? ಅದಕ್ಕಾಗೇ ಆನ್‌ಲೈನ್‌ನಲ್ಲಿ ಮದ್ಯ ಖರೀದಿಗೆ ಯತ್ನಿಸಿದ್ದಾನೆ. ಇಂಟರ್ ನೆಟ್ಟಿನಲ್ಲಿ ಸಿಗದ್ದೇನಾದರೂ ಇದೆಯಾ ? ಇಂತಹ ಉದಾಸೀನದ ಗಿರಾಕಿಗಳಿಗಾಗಿಯೇ ಒಬ್ಬಾತ ಅಂಗಡಿ ತೆರೆದು, ಟೈ ಕಟ್ಟಿಕೊಂಡು ಲ್ಯಾಪ್ ಟಾಪ್ ತೊಡೆಯ ಮೇಲಿಟ್ಟುಕೊಂಡು ಕೂತಿದ್ದ.

ಟೆಕ್ಕಿ 1500 ರುಪಾಯಿಯ ಮಾಲನ್ನು ಪರ್ಚೆಸ್ ಮಾಡಿದ್ದಾನೆ. ಮೊದಲು 1500 ರೂಪಾಯಿ ಅಕೌಂಟ್ ನಿಂದ ಕಟ್ ಆಗಿದೆ. ನಂತರ ಕರೆ ಮಾಡಿದ ಅಂಗಡಿಯಾತ ಟ್ರಾನ್ಸಾಕ್ಷನ್ ಆಗಿಲ್ಲ, ಎರರ್ ಬರ್ತಿದೆ. ಮತ್ತೆ ಒಟಿಪಿ ಬರುತ್ತೆ ಕಳಿಸಿ ಅಂದಿದ್ದಾನೆ.
ಆತನ ಮಾತು ನಂಬಿ ಮತ್ತೆ ಓಟಿಪಿಯನ್ನು ಟೆಕಿ ಜಗನ್ನಾಥ್ ಹಂಚಿಕೊಂಡಿದ್ದಾನೆ. ಈ ಬಾರಿ 6000 ಹಣ ಕಟ್ ಆಗಿದೆ. ಮತ್ತೆ ಕರೆ ಮಾಡಿದ ಮೋಸಗಾರ ತಾಂತ್ರಿಕ ತೊಂದರೆ ಆಗಿದೆ, ಇನ್ನು ಕೆಲವು ಓಟಿಪಿಗಳು ಬರುತ್ತವೆ ಅವನ್ನು ಕಳುಹಿಸಿ ಎಂದು ಹೇಳಿ ಒಟ್ಟಿಗೆ 78,742 ರೂಪಾಯಿ ಹಣ ಸಲೀಸಾಗಿ ಟ್ರಾನ್ಸ್ ಫರ್ ಮಾಡಿಕೊಂಡಿದ್ದಾನೆ.

ಆ ನಂತರ ಮತ್ತೆ ಈ ಬುದ್ದಿವಂತನಿಗೆ ಕರೆ ಮಾಡಿದ ಆ ವ್ಯಕ್ತಿ, ಏನೋ ತಾಂತ್ರಿಕ ಸಮಸ್ಯೆಯಿಂದಾಗಿ ಹೀಗೆಲ್ಲಾ ಆಗಿದೆ ಎಂದು ಹೇಳಿ, ಎಲ್ಲ ಹಣವನ್ನು ನಿಮಗೆ ವಾಪಸ್ ನೀಡುತ್ತೇನೆ ಎಂದು ಹೇಳಿ ವಾಟ್ಸ್‌ಆಫ್‌ಗೆ ಕ್ಯೂ ಆರ್ ಕೋಡ್ ಒಂದನ್ನು ರವಾನಿಸಿದ್ದಾನೆ.
ಹಣ ವಾಪಸ್ ಬರುತ್ತದೆಂಬ ಆಸೆಯಿಂದ ವಾಟ್ಸ್‌ಪ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ್ದೇ ತಡ ಮತ್ತೆ 48,000 ಸಾವಿರ ಹಣ ಜರ್ರನೆ ಹೊರಟು ಹೋಗಿದೆ. ಟೆಕ್ಕಿ ಜಗನ್ನಾಥ್‌ ಕೆಲವೇ ನಿಮಿಷದಲ್ಲಿ 1.27 ಲಕ್ಷ ಹಣ ಕಳೆದುಕೊಂಡಿದ್ದಾನೆ. ಒಂದು ಹನಿ ಮದ್ಯ ಕುಡಿಯದೆಯೇ, ಟೆಕ್ಕಿಯ ನೆತ್ತಿಗೆ ಅಮಲೇರಿದೆ.

ಕೂಡಲೇ ಬ್ಯಾಂಕ್ ಗೆ ಕರೆ ಮಾಡಿ ತನ್ನ ಖಾತೆಯ ವ್ಯವಹಾರವನ್ನು ರದ್ದು ಮಾಡುವಂತೆ ಮನವಿ ಮಾಡಿದ್ದಾನೆ ಟೆಕ್ಕಿ. ಆದರೆ ಆತ ಬಳಸಿದ್ದು ಡೆಬಿಟ್ ಕಾರ್ಡ್ ಅಲ್ಲ. ಆತ ಉಜ್ಜಿದ್ದುಕ್ರೆಡಿಟ್ ಕಾರ್ಡ್‌ ! ಕ್ರೆಡಿಟ್ ಕಾರ್ಡ್‌ ನಿಂದ ಮಾಡಿದ ವ್ಯವಹಾರವನ್ನು ರದ್ದು ಮಾಡಲಾಗದು ಎಂಬ ಉತ್ತರ ಬ್ಯಾಂಕಿನಿಂದ ದೊರೆತಿದೆ. ಅಲ್ಲಿಂದ ಪೊಲೀಸ್ ಠಾಣೆಗೆ ತೆರಳಿದ ಜಗನ್ನಾಥ್ ದೂರು ದಾಖಲಿಸಿದ್ದಾನೆ .

ಪೊಲೀಸರ ತನಿಖೆ ಪ್ರಕಾರ ಜಗನ್ನಾಥ್ ಅವರ ಖಾತೆಯಿಂದ ಕಟ್ ಆಗಿರುವ ಹಣ ಕಾಶ್ಮೀರದಲ್ಲಿರುವ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆಯಂತೆ.

Leave A Reply

Your email address will not be published.