ಮಾಚಿಲ ಮೂಲ ಕ್ಷೇತ್ರ ನಾಲ್ಕಂಭ ಉಳ್ಳಾಲ್ತಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ- ಧಾರ್ಮಿಕ ಸಭೆ

ಕಾಣಿಯೂರು: ಬ್ರಹ್ಮಕಲಶೋತ್ಸವ ನಡೆದ ಬಳಿಕ ಗ್ರಾಮದಲ್ಲಿ ಸುಭೀಕ್ಷೆಯನ್ನು ಕಾಣುವಂತಹ ವ್ಯವಸ್ಥೆ ನಡೆದುಕೊಂಡು ಬಂದಿದೆ ಎಂಬುದಕ್ಕೆ ಹಲವಾರು ಸಾಕ್ಷಿಗಳಿವೆ. ಬ್ರಹ್ಮಕಲಶೋತ್ಸವಕ್ಕೆ ತನ್ನದೇ ಆದ ಮಹತ್ವ ಇದೆ. ದೈವಸ್ಥಾನಗಳು, ದೇವಸ್ಥಾನಗಳು ಹಿಂದು ಸಂಸ್ಕøತಿಯಲ್ಲಿ ಎರಡು ಕಣ್ಣುಗಳು ಇದ್ದಂತೆ ಎಂದು ಸವಣೂರು ವಿದ್ಯಾರಶ್ಮೀ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು ಹೇಳಿದರು. ಅವರು ಜ 31ರಂದು ಉಳ್ಳಾಲ್ತಿ ಮೂಲ ಕ್ಷೇತ್ರ ಮಾಚಿಲ ಕುಂಬ್ಲಾಡಿ ಹಾಗೂ ಪರಿವಾರ ದೈವಗಳ ನವೀಕರಣ ಪ್ರತಿಷ್ಠಾ ಬ್ರಹ್ಮಕಲಶದ ಪ್ರಯಕ್ತ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನ್ಯಾಯವಾದಿ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಮೋಹನ ಗೌಡ ಇಡ್ಯಡ್ಕ ಮಾತನಾಡಿ, ಯಾವುದೇ ಕೆಲಸಗಳನ್ನು ಸಾಧಿಸಬೇಕಾದರೆ ನಮ್ಮ ಗುರಿ ಮತ್ತು ಉದ್ಧೇಶ ಸ್ಪಷ್ಟವಾಗಿರಬೇಕು. ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಾಗ ಯಶಸ್ಸು ಸಾಧಿಸುವುದು ಕಷ್ಟವಲ್ಲ. ಬ್ರಹ್ಮಕಲಶೋತ್ಸವದ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಎಲ್ಲರೂ ಅಭಿನಂದನಾರ್ಹರು ಎಂದರು. ಪ್ರದೀಪ್ ಆರ್.ಗೌಡ ಅರುವಗುತ್ತು ಮಾತನಾಡಿ, ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಶಿಸ್ತನ್ನು ಜೀವನದಲ್ಲಿ ಕಾಪಾಡಿಕೊಂಡು ಬರುತ್ತಿರುವ ಚಾರ್ವಾಕ ಗ್ರಾಮವು ಬೇರೆ ಜಿಲ್ಲೆಗಳಿಗೆ ಮಾದರಿಯಾಗಿದೆ. ಈ ನಿಟ್ಟಿನಲ್ಲಿ ಬ್ರಹ್ಮಕಲಶೋತ್ಸವದ ಯಶಸ್ಸು ಪ್ರತಿಯೊಬ್ಬರಿಗೂ ಸಲ್ಲುತ್ತದೆ ಎಂದರು.

ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಜನಾರ್ದನ ಎಸ್ ಶುಭಹಾರೈಸಿದರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷೆ ಚಂದ್ರಕಲಾ ಜಯರಾಂ ಅರುವಗುತ್ತು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರಾಮಕೃಷ್ಣ ಗೌಡ, ಉಪಾಧ್ಯಕ್ಷ ವಿಜಯಕುಮಾರ್ ಸೊರಕೆ, ಜೀರ್ಣೋಧ್ದಾರ ಸಮಿತಿ ಉಪಾಧ್ಯಕ್ಷ ಪ್ರವೀಣ್ ಕುಂಟ್ಯಾನ, ಶ್ರೀ ನಾಲ್ಕಂಭ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾಚಿಲ ಮೂಲ ಕ್ಷೇತ್ರದಲ್ಲಿ ವಿವಿಧ ಕೆಲಸ ನಿರ್ವಹಿಸಿದ ಉದಯ ಹಾಗೂ ಜನಾರ್ದನ ಅವರನ್ನು ಗೌರವಿಸಲಾಯಿತು. ಲೋಹಿತ್ ಮೀಯೊಳ್ಪೆ, ಬಾಲಕೃಷ್ಣ ಕರಂದ್ಲಾಜೆ, ಆನಂದ ಕುಂಬಾರ, ಪುರಂದರ ಅಂಬುಲ, ಚಂದ್ರಶೇಖರ ಅಂಬುಲ, ಚಂದ್ರಶೇಖರ ಖಂಡಿಗ, ಮೋಹನ ಖಂಡಿಗ, ಪ್ರಕಾಶ್ ಅರುವ, ಸುಂದರ ದೇವಸ್ಯರವರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ವಿಶ್ವನಾಥ ಅಂಬುಲ ಸ್ವಾಗತಿಸಿ, ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ಕೆ.ವಿ.ಮಾಧವ ಗೌಡ ಕರಂದ್ಲಾಜೆ ವಂದಿಸಿದರು. ಪ್ರಶಾಂತ್ ಅಂಬುಲ ಕಾರ್ಯಕ್ರಮ. ನಿರೂಪಿಸಿದರು. ಬಳಿಕ ಶ್ರೀರಾಗ್ ಮ್ಯೂಸಿಕ್ ಪುತ್ತೂರು ಇವರಿಂದ ಭಕ್ತಿ ರಸಮಂಜರಿ ನಡೆಯಿತು. ನೇಮೋತ್ಸವ: ಜ 31ರಂದು ಸಂಜೆ ಶ್ರೀ ಉಳ್ಳಾಲ್ತಿ ದೇವಿಯ ಭಂಡಾರ ತೆಗೆದು, ಕಾಜಿಕಾರ ಕಟ್ಟೆಯಲ್ಲಿ ಅಲಂಕಾರ ಪೂಜೆಗೈದು, ಶ್ರೀ ನಾಲ್ಕಂಭ ಉಳ್ಲಾಲ್ತಿ ಕ್ಷೇತ್ರಕ್ಕೆ ಆಗಮನ, ಜ 1ರಂದು ಬೆಳಿಗ್ಗೆ ನೇಮೋತ್ಸವ ಆರಂಭಗೊಂಡು, ಉಳ್ಳಾಲ್ತಿಗೆ ಹೂ ಹಾಗೂ ಸೇವೆಗಳ ಅರ್ಪಣೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ದೇವರ ಮಹಾಪೂಜೆ, ಶ್ರೀ ಉಳ್ಳಾಕುಲು ದೈವಗಳ ಭಂಡಾರ ತೆಗೆದು, ಬಳಿಕ ಅನ್ನಸಂತರ್ಪಣೆ ನಡೆಯಿತು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ನ್ಯಾಯವಾದಿ ವೆಂಕಪ್ಪ ಗೌಡ ಮಾಚಿಲ ಪ್ರಾಸ್ತಾವಿಕ ಮಾತನಾಡಿ, ನಾಲ್ಕು ದೈವಿಕ ಶಕ್ತಿಗಳು ಇರುವ ನಾಲ್ಕಂಭ ಕ್ಷೇತ್ರವು ಅಭಿವೃದ್ಧಿಗೊಳ್ಳುತ್ತಿದೆ. ಈ ಭಾಗದÀ ದೇವಸ್ಥಾನ, ದೈವಸ್ಥಾನಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಿ.ಪಿ ಜಯರಾಮ ಗೌಡರು ಪ್ರಮುಖ ಪಾತ್ರವಹಿಸುತ್ತಿದ್ದರು. ಇದೀಗ ಅವರ ಶಿಷ್ಯರಾಗಿ ಅವರ ಕಲ್ಪನೆಯನ್ನ ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಮೂಲ ಕ್ಷೇತ್ರ ಮಾಚಿಲದಲ್ಲಿ 500 ವರ್ಷಗಳ ಹಿಂದೆ ಜೈನರಸರ ಕಾಲದಲ್ಲಿ ಉತ್ಸವಗಳು ನಡೆದುಕೊಂಡು ಬರುತ್ತಿದ್ದು, ಕಾಲ ಕ್ರಮೇಣ ಉತ್ಸಾಹ ನಿಂತುಹೋಗಿತ್ತು. ಇದೀಗ ಅಷ್ಟಮಂಗಲ ಚಿಂತನೆಯಲ್ಲಿ ತಿಳಿದು ಬಂದ ಹಿನ್ನಲೆಯಲ್ಲಿ ಮಾಚಿಲ ಮೂಲ ಕ್ಷೇತ್ರಗಳ ದೈವಸ್ಥಾನಗಳು ಸುಮಾರು 60 ಲಕ್ಷ ರೂ ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಎಂದವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Leave A Reply

Your email address will not be published.