‘ ಪ್ರಧಾನಿ ಮೋದಿಗೆ ಚಪ್ಪಲಿನಿಂದ ಹೊಡೆಯಬೇಕು’ ಎಂದು ನಾಟಕ ಪ್ರದರ್ಶನ । ಬೀದರಿನ ಶಾಹೀನ್ ಸಂಸ್ಥೆಯ ಮುಖ್ಯಶಿಕ್ಷಕಿ ಮತ್ತು ಪೋಷಕಿ ಅರೆಸ್ಟ್

ಬೀದರಿನ ಶಾಹೀನ್ ಎಜುಕೇಷನಲ್ ಸೊಸೈಟಿಯ ಮುಖ್ಯಶಿಕ್ಷಕಿ ಫರೀದಾ ಬೇಗಂ ಮತ್ತು ಶಾಲೆಯ ವಿದ್ಯಾರ್ಥಿನಿಯಳೊಬ್ಬಳ ಪೋಷಕಳಾದ ನಜ್ಬುನ್ನಿಸಾ – ಈ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಶಾಲೆಯಲ್ಲಿ ನಡೆದ ನಾಟಕ ಪ್ರದರ್ಶನದ ವೇಳೆ, ಸಿ ಎ ಎ -ಸಿ ಎ ಬಿ ವಿರುದ್ಧ ದ್ವೇಷ ಭಾವನೆ ಸಾರುವ ನಾಟಕ ಪ್ರದರ್ಶಿಸಿದಕ್ಕೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಆರೋಪಿಗಳ ಮೇಲೆ 124 A,153A, 504, 505 (2) ಮತ್ತು 34 ಮುಂತಾದ ಹಲವು ಕೇಸುಗಳನ್ನು ದಾಖಲಿಸಿ ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ.

ಒಟ್ಟು 60 ಜನ ವಿದ್ಯರ್ಥಿಗಳಿರುವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಮೂರು ಬಾರಿ ತನಿಖೆಗಾಗಿ ಪ್ರಶ್ನಿಸಲಾಗಿದೆ. ತನಿಖೆಯ ವೇಳೆ, ಆರೋಪಿಯ ಮಗಳು ತನ್ನ ಅಮ್ಮ ಮೋದಿಯನ್ನು ಅವಮಾನಿಸುವಂತಹ ಹೇಳಿಕೆಯನ್ನು ಹೇಳಿಕೊಟ್ಟಿದ್ದಳೆಂದು ಒಪ್ಪಿಕೊಂಡಿದ್ದಾಳೆಂದು ವರದಿಯಾಗಿದೆ.

ಪ್ರಧಾನಿ ಮೋದಿಗೆ ಚಪ್ಪಲಿನಿಂದ ಹೊಡೆಯಬೇಕು ಎಂದು ನಾಟಕದಲ್ಲಿ ಏನೂ ಅರಿಯದ ಮಗುವಿನ ಕೈಲಿ ಹೇಳಿಸಿರುವುದು ದ್ವೇಷ ಭಾವನೆ ಹರಡುವುದಕ್ಕಾಗಿದೆ.

ಎಬಿವಿಪಿ ಕಾರ್ಯಕರ್ತನಾದ ನಿಲೇಶ್ ರಕ್ಷಲ ನೀಡಿದ್ದ ದೂರಿನನ್ವಯ ಜನವರಿ 26 ರಂದು FIR ದಾಖಲಾಗಿದೆ. ನಿನ್ನೆ ಶನಿವಾರ ಅಸಾವುದ್ದೀನ್ ಓವೈಸಿ ಅವರು ಜೈಲಿನಲ್ಲಿ ಆರೋಪಿಗಳನ್ನು ಭೇಟಿಯಾದರು.

Leave A Reply

Your email address will not be published.