ಉಜಿರೆಯ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಯಲ್ಲಿಆರು ದಿನಗಳ ಕಾಲ ನಡೆದ ವಸ್ತುಪ್ರದರ್ಶನ

0 3

ಉಜಿರೆಯ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಯಲ್ಲಿ, ವಿವಿಧ ವಿಷಯವಾರು ಸಮಾಜ, ಸಂಸ್ಕೃತ, ಆಂಗ್ಲ ಭಾಷೆ, ಕನ್ನಡ, ಹಿಂದಿ, ವಿಜ್ಞಾನ , ಗಣಿತ ಮತ್ತು ಕ್ರೀಡಾ ಚಟುವಟಿಕೆಗಳ ಪ್ರದರ್ಶನವನ್ನು ಒಟ್ಟು ಆರು ದಿನಗಳ ಕಾಲ ನಡೆಸಲಾಯಿತು.

ಪ್ರದರ್ಶನಗಳ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿದ್ಯಾಲಕ್ಷ್ಮೀ, ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ನಲ್ಲಿ ಬಿ ಗ್ರೇಡ್ ಗಳಿಸಿದ ವಿದ್ಯಾರ್ಥಿಗಳು ಅಜಯ್ ಕೃಷ್ಣ ಮತ್ತು ನಿಶ್ಚಿತರವರು ಪ್ರದರ್ಶನಕ್ಕೆ ಚಾಲನೆ ನೀಡಿದರು. ಹಾಗೂ ಕ್ರೀಡಾಚಟುವಟಿಕೆಗಳ ಪ್ರದರ್ಶನವನ್ನು ಎಸ್.ಡಿ.ಎಂ ಕಾಲೇಜಿನ ದೈಹಿಕ ಉಪನ್ಯಾಸಕ ರಮೇಶ್ ರವರು ಉದ್ಘಾಟಿಸಿ, ಪ್ರದರ್ಶನವನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ವಾರದ ಪ್ರದರ್ಶನಗಳಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು. ಶಾಲಾ ಅಧ್ಯಾಪಕ-ಅಧ್ಯಾಪಕಿಯರು ಪ್ರದರ್ಶನಗಳ ಕಾರ್ಯನಿರ್ವಹಿಸಿದರು. ಕಾರ್ಯಗಳಿಗೆ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿದ್ಯಾಲಕ್ಷ್ಮೀ ಪ್ರೋತ್ಸಾಹಿಸಿದರು.

Leave A Reply