ಸಮರ್ಥನಾ ಸಮಾವೇಶಕ್ಕೆ ಕ್ಷಣಗಣನೆ । ಕೇಸರಿ ಬಣ್ಣ ಬಳಿದುಕೊಳ್ಳಲಿದೆ ಸಮಗ್ರ ಮಂಗಳೂರು !

ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಮತ್ತು ಸುತ್ತಮುತ್ತಲಿನ ಬಿಜೆಪಿ ಮತ್ತು ಸಂಘ ಪರಿವಾರದ ಜನರು ಇವತ್ತೇ ರೆಡಿಯಾಗುತ್ತಿದ್ದಾರೆ. ನಾಳೆ ಕೂಳೂರಿನ ಗೋಲ್ಡ್ ಫಿಂಚ್ ಮೈದಾನವು ಪೂರ್ತಿ ಕೇಸರಿ ಬಣ್ಣದಲ್ಲಿ ಮಿಂದೇಳಲಿದೆ. ಯಾಕೆಂದರೆ, ನಾಳೆ ನಡೆಯುತ್ತಿರುವುದು ‘ ಸಮರ್ಥನಾ ಸಮಾವೇಶ ‘ !

ಮೊನ್ನೆ ನಡೆದ ಕಾಂಗ್ರೆಸ್ ಬೆಂಬಲಿತ ಸಮಾವೇಶಕ್ಕೆ ಅಂಗಡಿ ಮಾಲಕರು ತಮ್ಮ ಅಂಗಡಿ ಮುಂಗಟ್ಟು ಮುಚ್ಚಿ ಬಿಟ್ಟು ಅಲ್ಪಸಂಖ್ಯಾತ ಸಮುದಾಯದವರು ಎದ್ದು ನಡೆದಿದ್ದರು. ಒಗ್ಗಟ್ಟು ಪ್ರದರ್ಶಿಸಿದ್ದರು. ಅದಕ್ಕೆ ಪ್ರತಿಯಾಗಿ ಆ ಸಮಾರಂಭಕ್ಕೆ ಮುಟ್ಟಿನೋಡುವ ಪ್ರತಿಕ್ರಿಯೆ ಕೊಡುವ ಸಮಾವೇಶವೇ ಸಮರ್ಥನಾ ಸಮಾವೇಶ.

ಅದಕ್ಕಾಗಿ ಸಂಘಪರಿವಾರ ಸಮೇತ ಬಿಜೆಪಿ ಸರಿಯಾದ ಪ್ಲಾನಿಂಗ್ ಮಾಡಿಕೊಂಡಿವೆ. ಸಮರ್ಥನಾ ಸಮಾವೇಶಕ್ಕೆ ಪಾಲ್ಗೊಳ್ಳಲು ಬರುತ್ತಿರುವುದು ದೇಶದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು. ದೇಶಕ್ಕೆ ಸಿಎಎ ಯಂತಹಾ ಕಾನೂನು ಕೊಟ್ಟದ್ದಕ್ಕೆ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರನ್ನು ಅಭಿನಂಧಿಸುವ ಕೆಲಸ ನಾಳೆ ನಡೆಯಲಿದೆ.
ನೆರೆಯ ರಾಷ್ಟ್ರಗಳಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರು ಅನುಭವಿಸುವ ನೋವಿಗೆ ಒಂದು ಕರುಣಾಳು ಪ್ರತಿಕ್ರಿಯೆಯೇ ಈ ಸಿಎಎ. ಈ ಸಿಎಎಯನ್ನು ಸಮರ್ಥಿಸುವ ನಾಳೆಯ ಸಮಾವೇಶಕ್ಕೆ ಪ್ರತಿ ತಾಲೂಕಿನಿಂದ ಕನಿಷ್ಠಾತಿ ಕನಿಷ್ಠ 70 ಬಸ್ಸುಗಳು ಕೇಸರಿ ಕುವರರನ್ನು ತುಂಬಿಕೊಂಡು ಹೊರಡಲಿವೆ. ಎಲ್ಲರ ಉಸಿರಿನಲ್ಲೂ ಒಂದೇ : ‘ ಜೈ ಭಾರತ್ ಮಾತಾಕಿ ‘

ನರೇಂದ್ರ ಮೋದಿಯವರು ತಮ್ಮ ಎರಡನೆಯ ಪ್ರಧಾನಿಗಿರಿಯ ಟರ್ಮ್ ನಲ್ಲಿ ಹಿಂದೆಂದಿಗಿಂತಲೂ ಜಾಸ್ತಿ ಅಗ್ರೆಸ್ಸಿವ್ ಆಗಿದ್ದಾರೆ. ತಾವು ಅನಿಸಿಕೊಂಡದ್ದನ್ನು, ಸ್ವಾತಂತ್ರೋತ್ತರದಲ್ಲಿ ಈವರೆಗೆ ಸಾಧಿಸಲಾಗದೆ, ಅಥವಾ ಸಾಧಿಸುವ ಇಚ್ಛಾಶಕ್ತಿಯ ಕೊರತೆಯಿಂದ ಪಾಲು ಬಿದ್ದಿದ್ದ ಬದಲಾವಣೆಗಳನ್ನು, ತಮ್ಮ ಆಡಳಿತ ಎರಡು ವರ್ಷ ಮುಗಿಸುವ ಮೊದಲೇ, ಡೆಲಿವರ್ ಮಾಡುತ್ತಿದ್ದಾರೆ. ಟ್ರಿಪಲ್ ತಲಾಕ್ ನಿಷೇಧ ಆಯಿತು ; ಆರ್ಟಿಕಲ್ 371 ; ಈಗ ಪೌರತ್ವ ಕಾಯ್ದೆ ತಿದ್ದುಪಡಿ (ಸಿಎಎ) ! ಇದು ಇಲ್ಲಿಗೆ ನಿಲ್ಲುವ ಲಕ್ಷಣಗಳಿಲ್ಲ.

ಮುಂದೆ ಇದೆ ಅನಿಷ್ಟ ಸಂತಾನಗಳಿಗೆ ಮಾರಿ ಹಬ್ಬ. ಮೋದಿಯ ಮುಂದಿನ ಕೆಲವು ಪ್ರಾಜೆಕ್ಟುಗಳು -NRC, ಏಕ ರೂಪದ ಸಂವಿಧಾನ, ಆರ್ಥಿಕವಾಗಿ ದುರ್ಬಲರಿಗೆ ಮೀಸಲಾತಿ, ಕಪ್ಪು ಹಣದ ಮೇಲೆ ಮತ್ತಷ್ಟು ಕಠಿಣ ಕ್ರಮಗಳು ಮುಂತಾದುವುಗಳು ಇವೆಯಾದರೂ, ಅವೆಲ್ಲ ಇನ್ನೂ ಕೇವಲ ಪ್ಲಾನಿಂಗ್ ಹಂತದಲ್ಲಿವೆ.

ಮೋದಿ ಮೊದಲೇ ಖಾದಿ ಧರಿಸದ ಸನ್ಯಾಸಿ. ಮನೆ ಮಠ ಆಸ್ತಿ ಯಾವುದೂ ಮಾಡಿಕೊಳ್ಳದ, ಯಾವ ಯಾರ ಮುಲಾಜಿಗೂ ಬೀಳದ, ಸ್ವಂತ ತಾಯಿಯನ್ನೂ ತನ್ನ ಪ್ರಧಾನಿ ನಿವಾಸಕ್ಕೆ ಬಿಟ್ಟುಕೊಳ್ಳದ ಪರಿವ್ರಾಜಕ ಮನಸ್ತತ್ವದವರು ನರೇಂದ್ರ ದಾಮೋದರ್ ದಾಸ್ ಮೋದಿ !

ಅಂತಹ ವ್ಯಕ್ತಿ ದೇಶದಲ್ಲಿ ಯಾವುದೇ ಹೊಸ ಕಾನೂನು ತಂದರೂ ಜನ ಅದಕ್ಕೆ ‘ ಬೇಡ ‘ ಅನ್ನುವುದಿಲ್ಲ. ಬೇಡ ಅನ್ನುವವರು ಎಲ್ಲದಕ್ಕೂ ಸಿಗುತ್ತಾರೆ. ಆದರೆ, ಒಟ್ಟಾರೆಯಾಗಿ ಜನರು ಮೋದಿ ತಂದ ಕಾನೂನನ್ನು ಯಾವತ್ತೂ ಬೆಂಬಲಿಸಿದ್ದಾರೆ. ಇದಕ್ಕೆ ಕಾರಣ ಮೋದಿ ತೋರ್ಪಡಿಸುತ್ತಿರುವ ಪ್ರಭುದ್ದತೆ. ಅವರ ವ್ಯಕ್ತಿತ್ವದಲ್ಲಿನ ಗಾಂಭೀರ್ಯತೆ ಮತ್ತು ದೇಶಕ್ಕಾಗಿ ಏನಾದರೂ ಮಾಡಿಯೇ ತೀರಬೇಕೆಂಬ ಅವರ ತುಡಿತ !

ಅಂತಹ ಅವರ ತುಡಿತದ ಒಂದು ಭಾಗ ಇವತ್ತಿನ ಸಿಎಎ ! ಆದರೆ, ಒಂದು ದೊಡ್ಡ ಷಡ್ಯಂತರವೇ ಸಿಎಎಯ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಒಂದು ಮಾಹಿತಿಯ ಪ್ರಕಾರ, ಸಿಎಎ ಯನ್ನು ವಿರೋಧಿಸಲು 120 ಕೋಟಿಯಷ್ಟು ದೊಡ್ಡ ಮೊತ್ತದ ಫಂಡಿಂಗ್ ಮಾಡಲಾಗಿದೆ. ಅದೇ ಕಾರಣಕ್ಕೆ ಕಾಂಗ್ರೆಸ್ ಮತ್ತು ಇತರರು ದೊಡ್ಡ ದೊಡ್ಡ ಸಮಾವೇಶಗಳನ್ನು ನಡೆಸುತ್ತಿರುವುದು.

ದುಡ್ಡು ಕೊಟ್ಟರೆ, ಜನರನ್ನೇನೋ ಕರೆತರಬಹುದು, ಆದರೆ ಕೇಸರಿ ಶಾಲು ಧರಿಸಿದವನನ್ನು ಕೊಂಡುಕೊಳ್ಳಲು ಆ ಶತ ಕೋಟಿಗಳಿಗೆ ಆಗುವುದಿಲ್ಲವಲ್ಲ?!

ಜಿಲ್ಲಾಡಳಿತವು ನಾಳಿನ ಸಮಾವೇಶಕ್ಕೆಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಟ್ರಾಫಿಕ್ ಕಿರಿಕಿರಿ ಇದ್ದೀತು. ಎಲ್ಲರೂ ಸಹಕರಿಸಿ.

ನಾಳೆ ಬೇಕಾದರೆ ನೋಡಿ, ಊರು ಹಳ್ಳಿ ಬೀದಿ ಬೀದಿಗಳು ಖಾಲಿ ಖಾಲಿ. ಇಸ್ತ್ರಿ ನೀವಿದ ಕೇಸರಿ ಶಾಲಿನ ಮಂದಿಯದ್ದೇ ಮಂಗಳೂರಿನಲ್ಲಿ ಖಯಾಲಿ !

ಸೋಮವಾರ ( ಜನವರಿ 27 ರ) ಐತಿಹಾಸಿಕ ಪ್ರತಿಭಟನೆ ಕಾರ್ಯಕ್ರಮದ ನಿಯಮಗಳು :

  • ಶಿಸ್ತನ್ನು ಪಾಲಿಸುವುದು
  • 15 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರನ್ನೂ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮಾಡುವುದು
  • ಸೋಮವಾರದ ಸಮಾವೇಶದ ಪ್ರಯುಕ್ತ ಮಧ್ಯಾಹ್ನ ನಂತರ ಸಂಜೆ 6 ಗಂಟೆಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ದೇಶಭಕ್ತ ವರ್ತಕರು ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿ ಸಹಕರಿಸಿ.
  • ಕೆಲಸಕ್ಕೆ ಹೋಗುವವರು ಟ್ಯಾಕ್ಸಿ ಚಾಲಕ ಮಾಲಕರು ಮಧ್ಯಾಹ್ನದ ನಂತರ ಬಂದ್ ಮಾಡಿ ಸಹಕರಿಸುವುದು
  • ಕಾರ್ಯಕ್ರಮಕ್ಕೆ ಬರುವಾಗ ತಮ್ಮ ತಮ್ಮ ನಾಯಕರ ಸಂಪರ್ಕ ಇಟ್ಟುಕೊಳ್ಳುವಂತದ್ದು
  • ನನ್ನನ್ನು ಕರೆಯಲಿಲ್ಲ ಎಂಬುದನ್ನು ಬಿಟ್ಟು ನಾನು ಕೂಡ ಹೋಗುವುದರೊಂದಿಗೆ ಇತರರನ್ನು ಕರೆದುಕ್ಕೊಂಡು ಹೋಗಿ ಭಾರತದ ಉಳಿವಿಗಾಗಿ ಪ್ರತಿಭಟನೆ ಎಂಬ ಹುಮ್ಮಸ್ಸಿನ್ನಿಂದ ಪ್ರತಿಯೊಬ್ಬರೂ ಆಗಮಿಸುವುದು
  • ತಮ್ಮ- ತಮ್ಮ ಊರಿನಲ್ಲಿರುವ ಪ್ರತಿಯೊಬ್ಬರನ್ನೂ ಪ್ರತಿಭಟನೆಗೆ ಬರುವಂತೆ ಪ್ರೇರೆಪಿಸುವುದು
  • ತಮ್ಮಲ್ಲಿರುವ ಕಾರು , ಬೈಕ್ , ಜೀಪ್ ,ವ್ಯಾನ್ ಗಳನ್ನು ತೆಗೆದುಕ್ಕೊಂಡು ಬರುವುದು ಮತ್ತು ಬರುವಾಗ ಊರಿನಲ್ಲಿರುವ ಹಿರಿಯರು ಕಿರಿಯರನ್ನ ಕರೆದುಕ್ಕೊಂಡು ಬರುವುದು
  • ವಾಹನಗಳು ಇಲ್ಲದವರು, ವಾಹನಗಳು ಇರುವವರೊಂದಿಗೆ ಸಂಪರ್ಕಿಸಿ ಪ್ರತಿಭಟನೆಗೆ ಬರುವ ವ್ಯವಸ್ಥೆ ಮಾಡಿಕೊಳ್ಳುವುದು
  • ಬಂದ ವಾಹನದಲ್ಲೇ ಹಿಂದಿರುಗುವಂತಹ ವ್ಯವಸ್ಥೆಯನ್ನು ಮಾಡಿಕೊಳ್ಳುವುದು
  • ವಾಹನಗಳಲ್ಲಿ ಬರುವಾಗ ಓವರ್ ಟೇಕ್ ಮಾಡದೆ ಶಾಂತವಾಗಿ ಬರುವುದು
  • ಆದಷ್ಟು ಸ್ವಚ್ಛತೆಯ ಕಡೆ ಗಮನ ಕೊಟ್ಟು ಆಂದೋಲನದ ದಿನ ಮಂಗಳೂರನ್ನು ಸ್ವಚ್ಛವಾಗಿಡಲು ಸಹಕರಿಸುವುದು
  • ಬೈಕ್ ಗಳಲ್ಲಿ ಬರುವವರು ಪ್ರತ್ಯೇಕವಾಗಿ ಕಡ್ಡಾಯವಾಗಿ ಹೆಲ್ಮೆಟ್ ಹಾಕಬೇಕು
  • ಆದಷ್ಟು ಸ್ಪೀಡ್ ಕಂಟ್ರೋಲ್ ನಿಂದ ಬರಬೇಕು
  • ಬೈಕ್ ಗಳಲ್ಲಿ ಬರುವವರು ಇಬ್ಬರಿಗಿಂತ ಜಾಸ್ತಿ ಜನ ಬಾರದೇ ಇರುವುದು
  • ಆದಷ್ಟು ರಾಷ್ಟ್ರ ಧ್ವಜವನ್ನು ಕಾರ್ಯಕರ್ತರು ಬರುವಾಗಲೇ ತೆಗೆದುಕೊಂಡು ಬರುವುದು ಮತ್ತು ಅದಕ್ಕೆ ಅಪಚಾರವಾಗದಂತೆ ಜಾಗೃತೆವಹಿಸುವುದು
  • ಜನಜಾಗೃತಿ ಸಭೆ ಮುಗಿದು ಹಿಂದಿರುಗುವಾಗ ರಾತ್ರಿ ಮಾಡದೇ ಕೂಡಲೇ ಹಿಂದಿರುಗುವುದು
  • ಸ್ವಯಂ ಸೇವಕರ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದು
  • ಸ್ವಯಂ ಸೇವಕರು ಪೋಲಿಸರೊಂದಿಗೆ ಸಂಯಮದಿಂದ ವರ್ತಿಸಿ ಅವರೊಂದಿಗೆ ಸಹಕರಿಸುವುದು
  • ನಮ್ಮನ್ನು ಯಾರೇ ಎಷ್ಟೇ ಉದ್ರೇಕಿಸಿದರೂ ಆದಷ್ಟು ತಾಳ್ಮೆ ವಹಿಸುವುದು
  • ಈ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸುವ ಆಂದೋಲನನ್ನು ಇಲ್ಲಿಗೆ ಕೊನೆಗೊಳಿಸದೆ ಎನ್ ಆರ್ ಸಿ , ಎನ್ ಪಿ ಆರ್ ,ಸಿ ಎ ಎ ಜಾರಿ ತರಲು ನಿರಂತರ ಹೋರಾಟ ಮಾಡುವುದು
  • ಇದು ಪ್ರತಿಯೊಬ್ಬರ ಕಾರ್ಯಕ್ರಮವಾಗಿದ್ದು ,ಎಲ್ಲರೂ ತಮ್ಮ ಮನೆಯ ಕಾರ್ಯಕ್ರಮವೆಂದೇ ತಿಳಿದು ಭಾಗವಹಿಸಿ ದೇಶದ ಸಂವಿಧಾನವನ್ನು ರಕ್ಷಿಸಲು ಸಹಕರಿಸುವುದು
  • ಈ ಎಲ್ಲಾ ಸೂಚನೆಗಳನ್ನು ಪಾಲಿಸಿ ,CAA ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಯಶಸ್ವಿಗೊಳಿಸಲು ಶ್ರಮಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ
  • ಪ್ರತಿಯೋರ್ವ ರಾಷ್ಟ್ರ ಪ್ರೇಮಿ ಬಂಧು ಬಾಂಧವರು ಬಂದು ನಮ್ಮ ನೆಚ್ಚಿನ ನಾಯಕ ನರೇಂದ್ರ ಮೋದಿ ಯವರ ಕನಸಿನ ಭಾರತ ಕಟ್ಟುವಲ್ಲಿ ತಾವು ಕೈ ಜೋಡಿಸಿ
  • ಕೊನೆಯದಾಗಿ ಜೈ ಹಿಂದ್ !

ಬರಹ , ಪ್ರಕಟಣೆ : ನವೀನ್ , ಉಜಿರೆ

Leave A Reply

Your email address will not be published.