ಶಾಸಕ ಸಂಜೀವ ಮಠ೦ದೂರರ ಚುನಾವಣಾ ಪೂರ್ವ ಸಂಕಲ್ಪ । ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಶತರುದ್ತ್ರಾಭಿಷೇಕ ಸೇವೆ

ಕಳೆದ ಪುತ್ತೂರು ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿ ಶ್ರೀ ಸಂಜೀವ ಮಠಂದೂರು ಅವರು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸಿ ಕೊಂಡಿದ್ದರು. ತಮ್ಮಮುಂದಿನ ರಾಜಕೀಯ ಜೀವನದಲ್ಲಿ ಜನರ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಡುವ ಭಾಗ್ಯ ಬರುವಂತಾಗಲಿ ಎಂದು ತಮ್ಮ ಆತ್ಮೀಯ ಗೆಳೆಯರ ಜತೆ ಸೇರಿ ಬೇಡಿಕೊಂಡಿದ್ದರು.

ಅವರ ಕೋರಿಕೆಯನ್ನು ಶ್ರೀ ಮಹಾಲಿಂಗೇಶ್ವರ ಕೈಬಿಡಲಿಲ್ಲ. ಅವರ ಕೋರಿಕೊಂಡ ಸಂಕಲ್ಪದಂತೆ ನಿನ್ನೆ ಸಂಜೀವ ಮಠಂದೂರು ಅವರು ಪತ್ನಿಸಕುಟುಂಬಸ್ಥರಾಗಿ ಮತ್ತು ತಮ್ಮ ಆತ್ಮೀಯ ಗೆಳೆಯರು ಮತ್ತು ಪುತ್ತೂರು ಬಿಜೆಪಿಯ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರ ಸಾಂಗತ್ಯದಲ್ಲಿ ಶತರುದ್ರಾಭಿಷೇಕ ಸೇವೆಯನ್ನು ನೆರವೇರಿಸಿದರು.

ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಯುತ ವಸಂತ ಕೆದಿಲಾಯರು ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಬೆಳಿಗ್ಗೆ8.30 ಕ್ಕೆ ಪ್ರಾರಂಭವಾದ ಪೂಜಾ ಕಾರ್ಯಕ್ರಮಗಳು ಮಧ್ಯಾಹ್ನಒಂದು ಗಂಟೆಯವರೆಗೆ ನಡೆದವು. ಮಧ್ಯಾಹ್ನ ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆಯಿತು.

ಆ ನಂತರ ಸಂಜೆ ಆರೂವರೆಗೆ ದೇವಸ್ಥಾನದ ಪ್ರಾಂಗಣದಲ್ಲಿ ರಂಗಪೂಜೆ ನೆರವೇರಿತು. ಆ ಸಂದರ್ಭದಲ್ಲಿ ಅರ್ಚಕರು ಶ್ರೀ ಮಹಾಲಿಂಗೇಶ್ವರ ದೇವರ ಪರವಾಗಿ ಹಿತನುಡಿಗಳನ್ನು ನುಡಿದರು.

ರಂಗ ಪೂಜೆಯ ಸಂದರ್ಭ

ಪುತ್ತೂರಿನ ಹಲವು ಗಣ್ಯರು ದೇವಸ್ಥಾನಕ್ಕೆ ಆಗಮಿಸಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಬಿಜೆಪಿ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲದ ನಿಯೋಜಿತ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್, ಜಿಲ್ಲಾ ಬಿಜೆಪಿ ಸದಸ್ಯ ಚಂದ್ರ ಶೇಖರ್ ರಾವ್ ಬಪ್ಪಳಿಗೆ, ವಿಶ್ವನಾಥ್ ಕುಲಾಲ್, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಸುರೇಶ ಆಳ್ವ , ಗಂಗಾಧರ ಗೌಡ, ಕಾರ್ತಿಕ್ ಮತ್ತು ನೂರಾರು ಕಾರ್ಯಕರ್ತರು ಹಾಜರಿದ್ದರು.

Leave A Reply

Your email address will not be published.