ಬೈಕ್ ನುಗ್ಗಿ ಬಂದು ಬಲಿಯಾದ 10 ರ ಹರೆಯದ ಅವಿನಾಶ್ । ಕೊಳ್ತಿಗೆ ಗ್ರಾಮದ ಬಾಯಂಬಾಡಿಯ ನತದೃಷ್ಟ ಬಾಲಕ

ಕೊಳ್ತಿಗೆ ಗ್ರಾಮದ ಎಕ್ಕಡ್ಕದ 10 ವರ್ಷ ಪ್ರಾಯದ ಅವಿನಾಶ್ ಎಂಬ ಹುಡುಗನಿಗೆ ವೇಗವಾಗಿ ಹೋಗುತ್ತಿದ್ದ ಬೈಕು ಡಿಕ್ಕಿಯಾಗಿ ಮೃತಪಟ್ಟಿದ್ದಾನೆ.


Ad Widget

Ad Widget

Ad Widget

Ad Widget
Ad Widget

Ad Widget

Ad Widget

ಕೊಳ್ತಿಗೆಯ ಬಾಯಂಬಾಡಿ ಶ್ರೀ ಸುಬ್ರಮಣ್ಯ ದೇವಸ್ಥಾನಕ್ಕೆ ಜಾತ್ರೋತ್ಸವಕ್ಕೆ ಹೋಗಿ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಎಕ್ಕಡ್ಕದ ಮೋಹನ್ – ಸೇಸಮ್ಮ ದಂಪತಿಗಳ ಪುತ್ರನಾದ ಅವಿನಾಶ್ ನಡೆದುಕೊಂಡು ಹೋಗುತ್ತಿದ್ದಾಗ ಒಮ್ಮೆಲೇ ಬಂದ ಬೈಕ್ ಆತನ ಮೇಲೆ ಚಲಿಸಿದೆ.


Ad Widget

ಬೈಕ್ ನ ಡಿಕ್ಕಿಯ ತೀವ್ರತೆಗೆ ತಲೆ ಮತ್ತು ದೇಹದ ಇತರ ಭಾಗಗಳಿಗೆ ಗಾಯವಾಗಿದ್ದು, ಆತನನ್ನು ಆ ಕೂಡಲೇ ಬೆಳ್ಳಾರೆಯ ಆಸ್ಪತ್ರೆಗೆ ಸೇರಿಸಲಾಯಿತು. ಪರಿಸ್ಥಿಯ ತೀವ್ರತೆಯನ್ನು ಅರಿತು ಆತನನ್ನು ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಪುತ್ತೂರಿಗೆ ಕರೆತರಲಾಯಿತು.

ಆದರೆ ಅಷ್ಟರಲ್ಲೇ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಈ ದುರ್ಘಟನೆಯು ಅಂಚಿನಡ್ಕ ಬಾಯಂಬಾಡಿ ರಸ್ತೆಯಲ್ಲಿ ನಡೆದಿದ್ದು, ಆಕ್ಸಿಡೆಂಟಿಗೆ ಕಾರಣವಾದ ಬೈಕ್ ಸವಾರ ಕನಿಷ್ಠ ಕರುಣೆ ಮರೆತು ಬೈಕ್ ನ ಸಮೇತ ಪರಾರಿಯಾಗಿದ್ದಾನೆ.

error: Content is protected !!
Scroll to Top
%d bloggers like this: