ವಿಕ್ಷಿಪ್ತ ಮನಸ್ಸಿನ ಬಾಂಬರ್ ಆದಿತ್ಯ ರಾವ್ ಓವ್ರ ಮಾನಸಿಕ ವಿಕಲ । Details ಒಳಗಿದೆ !!

ಇಂದು ಬೆಳಿಗ್ಗೆ 8.30 ಕ್ಕೆ ಬೆಂಗಳೂರಿನ ಡಿಜಿ ಮತ್ತು ಐಜಿಪಿ ನೀಲಮಣಿ ರಾಜು ಅವರ ಮುಂದೆ ಆರೋಪಿಯಾದ ಆದಿತ್ಯ ರಾವ್ ಶರಣಾಗುವುದರೊಂದಿಗೆ ಮಂಗಳೂರಿನ ಟೈಮ್ ಬಾಂಬ್ ಪ್ರಕರಣವು ಒಂದು ನಿರ್ಣಾಯಕ ಹಂತಕ್ಕೆ ತಲುಪಿದೆ.

ಈಗ ಮಂಗಳೂರಿನಿಂದ ಮತ್ತು ಇತರೆಡೆಗೆ ಚದುರಿಹೋಗಿದ್ದ ಹಲವು ಪೋಲೀಸರ ಟೀಮುಗಳು ಬೆಂಗಳೂರಿನತ್ತ ಮುಖಮಾಡಿವೆ.

ಈಗಿನ ಪ್ರಾಥಮಿಕ ತನಿಖೆಯ ಪ್ರಕಾರ ಆತ ಹಲವಾರು ಪ್ರಕಣಗಳಲ್ಲಿ ಅಪರಾಧಿಯಾಗಿದ್ದ. ಕೆಲವು ಪ್ರಕರಣಗಳಲ್ಲಿ ಆತನು ಪೋಲೀಸರು ವಾರ್ನಿಂಗ್ ಮಾಡಿ ಆತನನ್ನು ಹೊರಗೆ ಬಿಟ್ಟಿದ್ದರು. ಆದರೆ ಹಿಂದೊಮ್ಮೆ ಬೆಂಗಳೂರಿನಲ್ಲಿ ಹುಸಿ ಬಾಂಬ್ ಕರೆ ಮಾಡಿ ಸಿಕ್ಕಿಬಿದ್ದಿದ್ದ. ಸಿಕ್ಕಿ ಬಿದ್ದು 11 ತಿಂಗಳ ಶಿಕ್ಷೆಗೂ ಗುರಿಯಾಗಿದ್ದ.

ಆತನಿಗೆ ದೊಡ್ಡ ಓದು ಓದುವುದು ಸಾಧ್ಯವಾಗಿತ್ತು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿಕೊಂಡಿದ್ದ. ಅದರ ಮೇಲೆ MBA ಪದವಿ ಪಡೆದುಕೊಂಡಿದ್ದ. ಓದುವುದರಲ್ಲಿ ಮುಂದಿದ್ದ. ಓದಿ ಒಂದು ಒಳ್ಳೆಯ ಕೆಲಸ ಪಡೆದುಕೊಳ್ಳುವುದು ಆತನ ಕನಸಾಗಿತ್ತು. ಮನೆಯವರೂ ಮಧ್ಯಮವರ್ಗದವರು. ಮಗನನ್ನು ಓದಿಸುವುದಕ್ಕೆ ಅವರಿಗೆ ಏನೂ ತೊಂದರೆ ಇರಲಿಲ್ಲ.

ಯಾವಾಗ ಆತನಿಗೆ ಒಳ್ಳೆಯ ಓದು ದೊರೆಯಿತು, ಆಗ ಒಂದು ಒಳ್ಳೆಯ ಕೆಲಸವೂ ಸಿಕ್ಕಿತ್ತು. ಸಿಕ್ಕ ಒಳ್ಳೆಯ ಬ್ಯಾಂಕ್ ನ ಕೆಲಸವನ್ನು ಬಿಟ್ಟು ವಾಪಸ್ಸು ಬಂದಿದ್ದ. ಕೆಲಸ ಬಿಡಲು ಕಾರಣ ” ಅಲ್ಲಿ AC ಹಾಕುತ್ತಿದ್ದರು, ನ್ಯಾಚುರಲ್ ಗಾಳಿಗೆ ಅಲ್ಲಿ ಸಿಗುತ್ತಿರಲಿಲ್ಲ” ಎಂಬ ಸಿಲ್ಲಿ ಕಾರಣ ಕೊಟ್ಟಿದ್ದ.

ಮೊದಲೇ ಆದಿತ್ಯ ರಾವ್ ಮೌನಿ. ಶಾಲೆಯಲ್ಲಿ ಮತ್ತು ಊರಿನವರ ಪ್ರಕಾರ ಆತ ಒಳ್ಳೆಯ ವಿದ್ಯಾರ್ಥಿ. ತನ್ನ ಪಾಡಿಗೆ ತಾನಿರುತ್ತಿದ್ದ. ತನ್ನ ಲೋಕದಲ್ಲಿತಾನು ವಿಹರಿಸುತ್ತಿದ್ದ. ಅದೇ ಕಾರಣಕ್ಕೆ ಸುತ್ತ ಮುತ್ತಲ ಜನರು ಚಿಕ್ಕಂದಿನಲ್ಲಿ ಆತನನ್ನು ‘ ಒಳ್ಳೆಯ ಹುಡುಗ ‘ ಅನ್ನುತ್ತಿದ್ದರು !!

ಮೋಲ್ನೋಟಕ್ಕೆ ಮೌನಿಯಾಗಿ, ಸದ್ದುಗದ್ದಲವಿಲ್ಲದೆ lazy ತರಹ ಇರುತ್ತಿದ್ದ ಆತನ ತಲೆ ಯಾವಾಗಲೂ ಬ್ಯುಸಿ ಇರುತ್ತಿತ್ತು. ಅನಗತ್ಯ ವಿಚಾರಗಳು ಆತನ ಮಿದುಳನ್ನು ಸುರುಳಿ ಸುತ್ತಿ ಹಿಚುಕಿ ಹಾಕುತ್ತಿದ್ದವು. ಆತ ವಿಪರೀತ ಯೋಚನೆಯ ಗುಂಗಿಗೆ ಬೀಳುತ್ತಿದ್ದ. ಯೋಚಿಸಿದ್ದನ್ನೇ ಮತ್ತೆ ಮತ್ತೆ ಕೆದಕಿ ತೆಗೆದು ಯೋಚಿಸುತ್ತಿದ್ದ. ತನಗಾದ ಅವಮಾನವನ್ನು ತೀರಾ ಪರ್ಸನಲ್ ಆಗಿ ತೆಗೆದುಕೊಳ್ಳುತ್ತಿದ್ದ.

ತನಗಾದ ನೋವನ್ನು, ಅವಮಾನವನ್ನು, ಸೋಲನ್ನು ಮರೆತುಬಿಟ್ಟು ಮುಂದಕ್ಕೆ ಸಾಗುವುದು ಆತನಿಗೆ ಸಾಧ್ಯವಾಗಲಿಲ್ಲ. ಆದದ್ದಾಗಲಿ, ಮತ್ತೆ ಹೊಸದಾಗಿ ಶುರುಮಾಡೋಣ, ಬದುಕು ಕಟ್ಟಿಕೊಳ್ಳೋಣ ಎನ್ನುವ ಯೋಚನೆಯನ್ನೇ ಆತ ಮಾಡಲಿಲ್ಲ.

ಮೊನ್ನೆ ಆದದ್ದೂ ಅದೇ. ತನ್ನ ಮೇಲೆ ಕೇಸು ಹಾಕಿ ಜೈಲಿಗೆ ಕಳಿಸಿದ ಏರ್ ಪೋರ್ಟ್ ಪೊಲೀಸರಿಗೆ ಬುದ್ದಿ ಕಲಿಸಲೇ ಬೇಕೆಂದು ಆತನ ಮನಸ್ಸು ಹಠಕ್ಕೆ ಬಿದ್ದಿತ್ತು. ಆತನ ಮನಸ್ಸು ಬುದ್ದಿಯ ಮಾತನ್ನು ಕೇಳುವುದನ್ನು ಬಿಟ್ಟು ಬಹು ಕಾಲವಾಗಿತ್ತು. ಅದಕ್ಕಾಗೇ, ಪೊಲೀಸರಿಗೆ ಏನೋ ಬುದ್ದಿ ಕಲಿಸಿಯೇ ಬಿಡುತ್ತೇನೆಂದು ಹೊರಟ ಆದಿತ್ಯ ಇವತ್ತು ಅಂದರ್ ಆಗಿದ್ದಾನೆ.

ಹಿಂದೆ ತಪ್ಪು ಮಾಡುವಾಗ ಆತನಿಗೆ ಅಪ್ಪ ಮತ್ತು ತಮ್ಮಅಕ್ಷತ್ ರಾವ್ ಬುದ್ದಿ ಹೇಳಿದ್ದರು. ” ಬಿಟ್ಟು ಬಿಡು ಇದನ್ನೆಲ್ಲಾ, ನೋಡು, ನಿನಗೆ ಒಳ್ಳೆಯ ವಿದ್ಯಾಭ್ಯಾಸವಿದೆ. ಹೇಗಾದರೂ ನೆಮ್ಮದಿಯಾಗಿ ಬದುಕಬಹುದು. ಮಣಿಪಾಲದಲ್ಲಿ ಮನೆ ಇದೆ. ಸುಮ್ಮನೆ ಇಲ್ಲದ ವಿಚಾರಕ್ಕೆ ಯೋಚಿಸುತ್ತ ಕೂರಬೇಡ ” ಹೀಗೆಂದು ಮನೆಯವರೆಲ್ಲ ಬುದ್ದಿ ಹೇಳಿದ್ದರು.

ಆದರೆ ಆತ ಬದಲಾಗಲಿಲ್ಲ. ಬರಬರುತ್ತಾ ಆತನಿಗೂ ವಯಸ್ಸಾಯಿತು, ಮದುವೆಯಾಗುವ ವಯಸ್ಸು ದಾಟುತ್ತ ಬಂತು. ವಯಸ್ಸಾಗುತ್ತ ಬಂದಂತೆಲ್ಲ ಆತ ಸಮಸ್ಯೆ ಉಲ್ಬಣವಾಯಿತು.

ಆವಾಗ ಅಮ್ಮ ತೀರಿಕೊಂಡಿದ್ದಾಗ ಆದಿತ್ಯ ಜೈಲಲ್ಲಿದ್ದ. ಆದಿತ್ಯನಿಗೆ ಅಮ್ಮ ಸತ್ತ ಸಂಧರ್ಭಕ್ಕೂ ಮನೆಗೆ ಬರಲಾಗಿರಲಿಲ್ಲ. ಅದಕ್ಕಾಗಿ ಆತ ನೊಂದು ಕೊಂಡೂ ಇದ್ದ. ಇದೆಲ್ಲವೂ ಆತನ ವಿಕ್ಷಿಪ್ತತೆಯನ್ನು ಜಾಸ್ತಿ ಮಾಡಿದ್ದವು.

ತಮ್ಮ ಅಕ್ಷತ್ ರಾವ್ ಹೇಳುವ ಪ್ರಕಾರ, ಆತನ ಫ್ಯಾಮಿಲಿ – ಆದಿತ್ಯ ರಾವ್ ಅನ್ನುಒಟ್ಟು ಮನೆಯಿಂದ ಹೊರಕ್ಕೆ ಹಾಕಿದ್ದರು. ಒಬ್ಬಂಟಿಯಾದ ಮೇಲಂತೂ ಆತ ಮತ್ತಷ್ಟು ಹಾಳಾಗಿದ್ದ.

ಆತ ಇತ್ತೀಚಿನವರೆಗೆ ಮಂಗಳೂರಿನ ಜ್ಯೋತಿ ಸರ್ಕಲ್ಲಿನ ‘ ಹೋಟೆಲ್ ಕ್ವಾಲಿಟಿ ‘ ಯಲ್ಲಿ ಬಿಲ್ಲಿಂಗ್ ಸೆಕ್ಷನ್ನಲ್ಲಿ ಕೆಲಸಮಾಡುತ್ತಿದ್ದ. ಮೇಲ್ನೋಟಕ್ಕೆ, ಹೋಟೆಲಿನಲ್ಲಿ ಆತ ಮಾಮೂಲಾಗಿದ್ದ. ಪ್ರಾಮಾಣಿಕನಾಗಿದ್ದ. ಸೌಮ್ಯನಾಗಿದ್ದ. ಹುಚ್ಚು ಒಳ ಮನಸ್ಸಿನ ಕ್ಷೋಭೆಗಳನ್ನು ಹೇಗೆ ತಾನೇ ನಾವು ಹೊರಗಿನಿಂದ ಓದಲು ಸಾಧ್ಯ ?!

ಆತನ ನಡವಳಿಕೆಯನ್ನು ಗಮನಿಸಿದರೆ, ಆತ ಪರಿಶುದ್ಧ ಮಾನಸಿಕ ವಿಕಲ. ಖಿನ್ನತೆ ಆತನನ್ನು ಕಾಡುತ್ತಿತ್ತು ಅನಿಸುತ್ತಿದೆ. ಆತ ಮಾನಸಿಕ ಚಿಕಿತ್ಸೆಗೆ ಅರ್ಹ.

ಆತ ಅದೆಷ್ಟು ವಿಕ್ಷಿಪ್ತನೆಂದರೆ, ಪೊಲೀಸರಿಗೆ ಮುಖ ಕೊಟ್ಟು ಮಾತಾಡಲೂ ಕಷ್ಟ ಪಡುತ್ತಿದ್ದಾನೆ. ಅದೇ ಕಾರಣಕ್ಕೆ, ” ಈ ಕೃತ್ಯವನ್ನು ಮಾಡಿದ್ದು ನಾನೇ, ನನ್ನನ್ನು ಜಾಸ್ತಿ ಪ್ರಶ್ನೆ ಮಾಡಬೇಡಿ. ಅದನ್ನು ನಾನು ಬರೆದು ಕೊಡುತ್ತೇನೆ ” ಎಂದು ಹೇಳಿ ಒಂದು ಸಣ್ಣ ಪ್ಯಾರಾ ಬರೆದೂ ಕೊಟ್ಟಿದ್ದಾನೆ. ಅದರೊಂದಿಗೆ ಆತ ಅಂತರ್ಮುಖಿಯಾಗಿದ್ದನೆಂದು ಪ್ರೂವ್ ಮಾಡಿದ್ದಾನೆ.

ಇವತ್ತು ಅವನು ಈ ರೀತಿ, ವಿನಾಕಾರಣ ಏನೇನೂ ತನ್ನ ಉದ್ದೇಶ ಈಡೇರಿಸಿಕೊಳ್ಳಲಾಗದ ಕೃತ್ಯಕ್ಕೆ ಕೈ ಹಾಕಿ, ಈಗ ಸಿಕ್ಕಿ ಬೀಳುವುದು ಖಾತರಿ ಆಗುತ್ತಿರುವಂತೆ ಸ್ವತಃ ಶರಣಾಗಿದ್ದಾನೆ. ಇವತ್ತು ಸಂಜೆ ಮಂಗಳೂರಿನ ಪೋಲೀಸರ ಕೈಗೆ ಆತ ಹಸ್ತಾ೦ತರಿಸಲ್ಪಡುತ್ತಾನೆ. ಕಾನೂನು ತನ್ನ ಕೆಲಸವನ್ನು ತಾನು ಸದ್ದಿಲ್ಲದೇ ಮಾಡುತ್ತದೆ.

Leave A Reply

Your email address will not be published.