ಅವಿಭಜಿತ ದಕ್ಷಿಣ ಕನ್ನಡ ಉಗ್ರರ ಟಾರ್ಗೆಟ್ ? | ಮಂಗಳೂರಿಗೂ ಅಗತ್ಯವಾಗಿ ಬೇಕು NIA ಆಫೀಸು

ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ( NIA ) ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾಗಿದೆ. ದೇಶದಲ್ಲಿ ಒಟ್ಟು 8 ಸಿಟಿಗಳಲ್ಲಿ NIA ಯ ಆಫೀಸಿದೆ. ಹೈದರಾಬಾದ್, ಗುವಾಹತಿ, ಕೊಚ್ಚಿ,ಲಕ್ನೋ, ಮುಂಬೈ, ಕೋಲ್ಕತ್ತಾ ಮತ್ತು ಜಮ್ಮುವಿನಲ್ಲಿ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಆಫೀಸಿದೆ.

ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಕಾರ್ಯ ವೈಖರಿಯೂ, ಇತರ ಇನ್ವೆಸ್ಟಿಗೇಟೀವ್ ಏಜೆನ್ಸಿಗಳ ಕಾರ್ಯವೈಖರಿಗೂ ತುಂಬಾ ವ್ಯತ್ಯಾಸವಿರುತ್ತದೆ. ಮುಖ್ಯವಾಗಿ, ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ( NIA ) ಯು ದೇಶದ ರಕ್ಷಣೆಗೆ ಸಂಬಂದಿಸಿದ ವಿಷಯಗಳನ್ನು ಡೀಲ್ ಮಾಡುವುದರಿಂದ ಸ್ಪೀಡ್ ತುಂಬಾ ಅಗತ್ಯವಾಗಿರುತ್ತದೆ. ಇಲ್ಲದೆ ಹೋದರೆ, ಅಪರಾಧಿ ತಪ್ಪಿಸಿಕೊಳ್ಳಬಹುದು. ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ( NIA ) ಯು ದೇಶದ ಭದ್ರತೆಗೆ ಸಂಬಂಧಿಸಿದ ಮತ್ತು ಟೆರ್ರರಿಸಂ ಗೆ ಸಂಬಂಧಿಸಿದ ಕೇಸ್ ಗಳನ್ನು ಹ್ಯಾಂಡಲ್ ಮಾಡುತ್ತದೆ.

NIA ಅತ್ಯಂತ ಪವರ್ ಫುಲ್ ಸಂಸ್ಥೆಯಾಗಿದ್ದು, ಅದು ರಾಜ್ಯಗಳ ಇತರ ಭದ್ರತಾ ಸಂಸ್ಥೆಗಳನ್ನೂ ಪಕ್ಕಕ್ಕೆ ಸರಿಸಿ ಕೆಲಸ ಮಾಡಬಲ್ಲುದು. ಅಲ್ಲದೆ ಮಾನವ ಹಕ್ಕುಗಳ ಆಯೋಗವೂ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ( NIA ) ಕೆಲಸದ ಮಧ್ಯೆ ಕೈ ಆಡಿಸಲು ಆಗದು.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಇನ್ನೊಂದು ಸಂಸ್ಥೆಯಾದ ಸಿಬಿಐ ಭ್ರಷ್ಟಾಚಾರ, ಕೊಲೆ, ರೇಪ್ ಮುಂತಾದ ಹೈ ಪ್ರೊಫೈಲ್ ಕೇಸ್ ಗಳನ್ನು ಹ್ಯಾಂಡಲ್ ಮಾಡಿದರೂ, NIA ಗೆ ಅದು ಸಮವಾಗಲಾರದು.

ದಕ್ಷಿಣ ಭಾರತದಲ್ಲಿ ಒಂದೇ ಕಡೆ ಅಂದರೆ ಹೈದರಾಬಾದಿನಲ್ಲಿ ಮಾತ್ರ NIA ಆಫೀಸಿರುವುದು. ಬೇರೆಲ್ಲೂ ಹತ್ತಿರದಲ್ಲಿ ಆಫೀಸಿಲ್ಲದ ಕಾರಣ ಕರ್ನಾಟಕವು ಒಂದೋ ಹೈದರಾಬಾದಿನಿಂದ ಅಥವಾ ಸುತ್ತಲ ಯಾವುದಾದರೂ ಪಟ್ಟಣಗಳಿಂದ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಆಫೀಸರ್ಸ್ ನ್ನು ಕರೆಸಿಕೊಳ್ಳಬೇಕಾಗುತ್ತದೆ.

ಮಂಗಳೂರು ಒಂದು ಕಡೆ ಸೂಕ್ಷ್ಮ ಪ್ರದೇಶ. ಮೊನ್ನೆ ಮೊನ್ನೆ ಮಂಗಳೂರಿನಲ್ಲಿ ನಡೆದ ಗಲಭೆಗಳಲ್ಲಿ ದೇಶ ವಿದ್ರೋಹಿ ಸಂಘಟನೆಗಳ ಕೈಯಿರುವುದನ್ನು ಬೆಂಗಳೂರು ಪೊಲೀಸು ಮುಖ್ಯಸ್ಥರೇ ಖಚಿತಪಡಿಸಿದ್ದರು. ಇವತ್ತು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಮೇಲಂತೂ ಮಂಗಳೂರು ಭಯೋತ್ಪಾದಕರ ಟಾರ್ಗೆಟ್ ಇರಬಹುದಾ ಎಂಬ ಅನುಮಾನ ಮೂಡುತ್ತಿದೆ.

ಮತ್ತೊಂದು ಕಡೆ ಗಡಿಯುದ್ದಕ್ಕೂ ಸುವಿಶಾವಾದ ಸಮುದ್ರವಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಒಟ್ಟಾರೆ ದೇಗುಲಗಳ ಸುಂದರ ನಗರಿ. ಇಲ್ಲಿ ಭದ್ರತೆಯ ಅವಶ್ಯಕತೆ ತುಂಬಾ ಇದೆ. ಆದ್ದರಿಂದ ತಕ್ಷಣ ಮಂಗಳೂರಿನಲ್ಲಿ NIA ಕಚೇರಿಯನ್ನುತೆರೆಯುವ ಅಗತ್ಯವಿದೆ. ಅಲ್ಲದೆ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಇರುವುದರಿಂದ, ಇಲ್ಲಿಂದ ಬೇರೆ ನಗರಗಳಿಗೆ ಸುಲಭವಾಗಿ ಕನೆಕ್ಟಿವಿಟಿ ಸಾಧ್ಯ.

ಮಂಗಳೂರಿಗೆ NIA ಆಫೀಸು ಆದರೆ, ಆಗ ಸುತ್ತಲ ಹಲವು ಪಟ್ಟಣಗಳನ್ನು ಸುಲಭವಾಗಿ ಮತ್ತು ತಕ್ಷಣವಾಗಿ ಕವರ್ ಮಾಡಲು ಸಾಧ್ಯ. ರಾಜ್ಯದಲ್ಲಿ ಮತ್ತು ದೇಶದಲ್ಲಿ ಬಿಜೆಪಿ ಸರಕಾರವಿರುವಾಗ, ನಮ್ಮ ಶಾಸಕರುಗಳು ಮತ್ತು ಸಂಸದರುಗಳು ಮುತುವರ್ಜಿವಹಿಸಿ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ( NIA ) ಆಫೀಸು ಮಂಗಳೂರಿನಲ್ಲಿ ಬರುವಂತೆ ನೋಡಿಕೊಳ್ಳಬೇಕಾಗಿದೆ.

Leave a Reply

error: Content is protected !!
Scroll to Top
%d bloggers like this: