ಶಂಕಿತ ಉಗ್ರನ ಛಾಯಾ ಚಿತ್ರ CCTV ಯಲ್ಲಿ ಸೆರೆ । ಈ ಚಹರೆಯ ವ್ಯಕ್ತಿ ಕಂಡರೆ ಕೂಡಲೇ ಪೊಲೀಸರಿಗೆ ತಿಳಿಸಿ

ಇಂದು ಬೆಳಿಗ್ಗೆ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಇಟ್ಟ ದುಷ್ಕೃತ್ಯದ ಹುನ್ನಾರ ನಡೆಸಿದ್ದ ಉಗ್ರನ ಛಾಯಾಚಿತ್ರ ಈಗ ಲಭಿಸಿದೆ.

ಉಗ್ರನ ಚಲನವಲನ, ಆತ ಬಂದು ಹೋದ ರಿಕ್ಷಾ, ಆತ ಬಾಂಬಿಟ್ಟು ಮರಳುವುದು ಎಲ್ಲವೂ ಸಿಸಿಟಿವಿಯಲ್ಲಿ ದಾಖಲಾಗಿದೆ. ಆರೋಪಿಯು ಮಧ್ಯ ವಯಸ್ಕನಾಗಿದ್ದು ನೀಳ ದೇಹವನ್ನು ಹೊಂದಿದ್ದಾನೆ. ಹತ್ತತ್ತಿರ ಆರಡಿ ಎತ್ತರ ಇದ್ದಾನೆ. ಮಂದಗತಿಯಲ್ಲಿ, ಯಾವುದೇ ಅವಸರವಿಲ್ಲದೆ, ಉದ್ದುದ್ದಕ್ಕೆ ಕಾಲು ಚಾಚಿ ನಡೆಯುತ್ತಾನೆ. ತಲೆಗೆ ಟೊಪ್ಪಿ ಧರಿಸಿದ್ದು ತಲೆ ಎತ್ತ, ಗುರುತು ಸಿಗದಂತೆ ನಡೆದಿರುವುದು ಕಾಣಿಸುತ್ತಿದೆ.

ಇವತ್ತಿನ ದುಷ್ಕ್ರತ್ಯದ ಪ್ಲಾನ್ ಸುಮಾರು 15 ದಿನಗಳ ಹಿಂದೇನೆ ನಡೆದಿದ್ದು, ಕಳೆದ ಹಲವು ದಿನಗಳಿಂದ ರಾಮನಗರ , ಬೆಂಗಳೂರು ಮುಂತಾದ ಕಡೆ ಬಂಧಿಸಿರುವ 9 ಜನ ಶಂಕಿತರಿಗೂ, ಇವತ್ತಿನ ಘಟನೆಗೂ ತಾಳೆ ಹಾಕಿ ನೋಡುವ ತನಿಖೆ ಮುಂದುವರೆದಿದೆ.

ವಿಮಾನ ನಿಲ್ದಾಣದಲ್ಲಿಇರಿಸಲಾದ ಬಾಂಬ್ ವು ಕಡಿಮೆ ತೀವ್ರತೆಯುಳ್ಳ IED ( ಇಂಪ್ರೊವೈಸ್ಡ್ ಎಕ್ಸ್ ಪ್ಲೋಸಿವ್ ಡಿವೈಸ್ ) ಬಾಂಬ್ ಎಂದು ತಿಳಿದುಬಂದಿದೆ. ಈ IED ಬಾಂಬ್ ಗಳಲ್ಲಿ ಆಧುನಿಕ ಟೆಕ್ನಾಲಜಿಗಳು ಬಳಕೆಯಾಗುತ್ತಿದ್ದು, ರಿಮೋಟ್ ಕಂಟ್ರೋಲ್ ನಿಂದಲೂ ಇವನ್ನು ಆಪರೇಟ್ ಮಾಡಬಹುದು. ಆದರೆ ಇವತ್ತು ದೊರೆತ ಬಾಂಬ್ ಟೈ೦ ಬಾಂಬ್ ಆಗಿತ್ತು.

ಈಗ ಬಾಂಬನ್ನೇನೋ ಸ್ಪೋಟಿಸಿ ನಾಶಪಡಿಸಲಾಗಿದೆ. ಆಯಾದ್ರೆ ಆರೋಪಿಯ ಪತ್ತೆ ಶೀಘ್ರ ಆಗಬೇಕಾಗಿದೆ.

Leave A Reply

Your email address will not be published.