ನಾಳೆಯಿಂದ SDPI ಮತ್ತು PFI ಬ್ಯಾನ್ ? । ಬ್ಯಾನ್ ಗೆ ರಾಜ್ಯದೆಲ್ಲೆಡೆ ಹೆಚ್ಚಿದ ಒತ್ತಡ

ಎಸ್ ಡಿಪಿಐ ಮತ್ತು ಪಿಎಫ್ ಐ ಮುಂತಾದ ಸಂಘಟನೆಗಳು ರಾಷ್ಟ್ರ ವಿದ್ರೋಹಿ ಚಟುವಟಿಗಳನ್ನು ಪ್ರೇರೇಪಿಸುತ್ತಿವೆ. ಈ ಕೂಡಲೇ ಎಸ್ ಡಿಪಿಐ ಅನ್ನು ನಿಷೇಧಿಸಬೇಕೆಂದು ಸಣ್ಣ ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ ಶೆಟ್ಟರ್ ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದರು. ಇನ್ನ್ನೊಂದೆಡೆ ಇಂತಹುದೇ ಆಗ್ರಹವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಅವರು ನಿನ್ನೆ ಮಾಡಿದ್ದರು.

ನಿನ್ನೆ ಪ್ರಾಥಮಿಕ ಮತ್ತು ಶಿಕ್ಷಣ ಸಚಿವರಾದ ಎಸ್ ರಮೇಶ್ ಕುಮಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಸರಕಾರವು ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸಲಿದೆ ಎಂದಿದ್ದಾರೆ. ಇತ್ತ ರಾಜ್ಯದ ಹಲವೆಡೆ ಈ ದೇಶ ವಿರೋಧಿ ಸಂಘಟನೆಗಳನ್ನು ನಿಷೇಧಿಸಲು ಆಗ್ರಹ ಕೇಳಿಬಂದಿದೆ.

ಭಜರಂಗದಳವು ಈ ಸಂಘಟನೆಗಳನ್ನು ನಿಷೇಧಿಸಬೇಕೆಂದು ರಾಜ್ಯದ ಎಲ್ಲ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ತಹಸೀಲ್ದಾರ್ ಮತ್ತು ಆಯಾ ಜಿಲ್ಲಾಧಿಕಾರಿಗಳಿಗೆ 18/01/2020 ರ ಶನಿವಾರದಂದು ಮನವಿ ಮಾಡಲಿವೆ ಎಂದು ಸುನಿಲ್ ಕೆ ಆರ್ ( ಭಜರಂಗದಳ ಪ್ರಾಂತ ಸಂಯೋಜಕ್ ), ಮುರಳೀ ಕೃಷ್ಣಾ ಹಂಸತಡ್ಕ ( ಭಜರಂಗದಳ ಪ್ರಾಂತ ಸಹ ಸಂಯೋಜಕ್ ) ಮತ್ತು ರಘು ಸಕಲೇಶಪುರ ( ಭಜರಂಗದಳ ಪ್ರಾಂತ ಸಹ ಸಂಯೋಜಕ್ ) ಅವರು ಕರೆ ನೀಡಿದ್ದಾರೆ.

ಸರಿ ಸುಮಾರು ತಿಂಗಳ ಹಿಂದೆ ಪಿ ಎಫ್ ಐ ಕಾಯಕರ್ತನೊಬ್ಬ ಮೈಸೂರಿನ ರಾಜಕಾರಣಿ ತಂವೀ ರ್ ಸೇಠ್ ಗೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಆಗ ಕೂಡ ಈ ಸಂಘಟನೆಯನ್ನು ನಿಷೇಧಿಸಬೇಕೆಂದು ಆಗ್ರಹ ಕೇಳಿಬಂದಿತ್ತು.

ಒಂದು ಮಾಹಿತಿಯ ಪ್ರಕಾರ ನಾಳೆಯಿಂದಲೇ ಬ್ಯಾನ್ ಆದೇಶ ಜಾರಿಯಾಗಲಿದೆ ಎಂದು ತಿಳಿದುಬಂದಿದೆ.

ಹಿಂದೂ ನಾಯಕರುಗಳಾದ ಚಕ್ರವರ್ತಿ ಸೂಲಿಬೆಲೆ ಮತ್ತು ತೇಜಸ್ವಿ ಸೂರ್ಯ ಇವರ ಹತ್ಯೆಗೆ ಸಂಚು ರೂಪಿಸಿದ ವ್ಯಕ್ತಿಗಳು ಈ ಸಂಘಟನೆಗಳ ಜತೆ ನಂಟಿರುವ ಮಾಹಿತಿಯ ಆಧಾರದ ಮೇಲೆ ಈ ಸಂಘಟನೆಗಳನ್ನು ತಕ್ಷಣ ನಿಷೇಧಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ವಾರದೊಳಗೆ ಖಚಿತ ನಿರ್ಧಾರ ಹೊರಬೀಳುವುದಂತೂ ಸತ್ಯ.

Leave A Reply

Your email address will not be published.