ಭೋಪಾಲದ ಕಾಂಗ್ರೆಸ್ ಟ್ರೈನಿಂಗ್ ಸೆಂಟರಿನಲ್ಲಿ ಇತ್ತೀಚಿಗೆ ವೀರ ಸಾವರಕರ್ ಅವರನ್ನು ಅವಮಾನಿಸುವಂತಹ ‘ ಸಾವರ್ಕರ್- ಕಿತ್ನೆ ವೀರ್ ‘ ಎಂಬ ಹೆಸರಿನಲ್ಲಿ ವಿತರಿಸಿದ್ದ ಪುಸ್ತಕದ ಭಾಷೆ ಮತ್ತು ದನಿಯ ಬಗ್ಗೆ ಆಕ್ಷೇಪ ಕೇಳಿಬಂದಿದೆ.
ಈಗ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪುತ್ತೂರು ಸಹಾಯಕ ಕಮಿಶನರ್ ಅವರಿಗೆ ದೂರು ನೀಡಲಾಗಿದೆ
” ಸಾವರ್ಕರ್ ಮಾತ್ರವಲ್ಲ, ರಾಷ್ಟ್ರಪುರುಷರ ಮತ್ತು ಕ್ರಾಂತಿಕಾರಿಗಳ ಅವಹೇಳನವು ಯಾರಿಂದಲೂ ಆಗಬಾರದು. ಕೇಂದ್ರ ಸರ್ಕಾರವು, ಆ ಬಗ್ಗೆ ಸೂಕ್ತ ಕಾನೂನು ಮಾಡಬೇಕು. ಈಗ ಕಾಂಗ್ರೆಸ್ ವಿತರಿಸಿದ ಪುಸ್ತಕದಿ೦ದ ಪರಸ್ಪರ ವೈಷಮ್ಯ ಮತ್ತು ಅಶಾಂತಿ ಮೂಡಿಸುವ ಉದ್ದೇಶ ಇದೆ; ಬೇರೇನಿಲ್ಲ. ಆದುದರಿಂದ ಆ ಪುಸ್ತಕವನ್ನು ಈ ಕೂಡಲೇ ನಿಷೇಧಿಸಬೇಕು ” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿಯನ್ನು ಪುತ್ತೂರ್ ಸಹಾಯಕ ಕಮಿಷನರ್ ಮತ್ತು ಪುತ್ತೂರು ನಗರ ಠಾಣಾಧಿಕಾರಿಗಳಿಗೆ ನೀಡಲಾಗಿದೆ.