Day: January 13, 2020

‘ಪುರುಷರ’ಕಟ್ಟೆಯಲ್ಲಿ ಹುಡುಗಿಯರೂ ಇದ್ದಾರೆ, ಕಬಡ್ಡಿನೂ ಆಡ್ತಾರೆ | ಗೆದ್ದೂ ಬೀಗ್ತಾರೆ !!

ನರಿಮೊಗರು : ಇಲ್ಲಿನ ಪುರುಷರಕಟ್ಟೆಯ ಸರಸ್ವತಿ ವಿದ್ಯಾಮಂದಿರ ಹಿರಿಯ ಪ್ರಾಥಮಿಕ ಶಾಲೆಯ ಕಬಡ್ಡಿ ತಂಡ ಗುತ್ತಿಗಾರಿನಲ್ಲಿ ನಡೆದ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ರನ್ನರ್ ಅಪ್ ಮತ್ತು ಬಾಲಕರ ವಿಭಾಗದಲ್ಲಿ ಪ್ರಥಮ ರನ್ನರ್ ಅಪ್ ಸ್ಥಾನ ಪಡೆದು ಪ್ರಶಸ್ತಿ ಗಳಿಸಿರುತ್ತಾರೆ. ಪುರುಷರಕಟ್ಟೆಯಲ್ಲಿ ಪುರುಷರು ಮಾತ್ರ ಅಲ್ಲ ಇರುವುದು, ಮಹಿಳೆಯರೂ ಇದ್ದಾರೆ ಎಂದು ನಮಗೆ ದಕ್ಷಿಣ ಕನ್ನಡದವರಿಗೆ ಗೊತ್ತಿತ್ತು. ಇವತ್ತು ಬಾಲಕಿಯರು ಕಬಡ್ಡಿಯಲ್ಲಿ ಪ್ರೈಸ್ ತಂದದ್ದು ನೋಡಿ, ಫುಲ್ ಕರ್ನಾಟಕಕ್ಕೇ ಗೊತ್ತಾಗಿದೆ !! ಶಾಲಾ ಸಂಚಾಲಕರಾದ …

‘ಪುರುಷರ’ಕಟ್ಟೆಯಲ್ಲಿ ಹುಡುಗಿಯರೂ ಇದ್ದಾರೆ, ಕಬಡ್ಡಿನೂ ಆಡ್ತಾರೆ | ಗೆದ್ದೂ ಬೀಗ್ತಾರೆ !! Read More »

ಉಜಿರೆಯಲ್ಲಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ನುಡಿ ನಮನ | ತುಳು ಶಿವಳ್ಳಿ ಸಂಘದಿಂದ

ಉಜಿರೆ : ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಯಾವುದೇ ವರ್ಗವನ್ನು ಮಾತ್ರ ಬೆಂಬಲಿಸಿದವರಲ್ಲ. ಎಲ್ಲ ವರ್ಗದವರೂ ಮುಂದುವರೆಯಬೇಕೆಂದು ಬಯಸಿ ಧರ್ಮ ಮಾರ್ಗದಲ್ಲಿನಡೆಸಿದವರು. ಅವರು ಯಾರಿಗೂ, ಯಾವತ್ತೂ ಮನಸ್ಸಿಗೆ ಬೇಸರವಾಗದಂತೆ ನೋಡಿಕೊಳ್ಳುತ್ತಿದ್ದರು. ಪ್ರಥಮ ಬಾರಿ ಅಸ್ಪ್ರಶ್ಯತೆ ಹೋಗಲಾಡಿಸಲು ಕಾರ್ಯಕ್ರಮ ರೂಪಿಸಿ ಅನುಷ್ಠಾನಕ್ಕೆ ತಂದವರವರು. ಎಲ್ಲ ಧರ್ಮವನ್ನೂ ಒಗ್ಗೂಡಿಸಿ, ಒಂದೇ ಪಥದಲ್ಲಿ ಕೊಂಡೊಯ್ದುಆದರ್ಶಪ್ರಾಯರಾದವರು, ಎಂದು ಪೇಜಾವರ ಶ್ರೀಗಳ ಶಿಷ್ಯ ಹರಿಪ್ರಸಾದ್ ಆರ್ಮುಡೆತ್ತಾಯರವರು ನುಡಿದರು. ಅವರು ಇಂದು ಉಜಿರೆಯ ಜನಾರ್ಧನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಂಗಣದಲ್ಲಿ, ಊರ ನಾಗರಿಕರ ವತಿಯಿಂದ. ತಾಲೂಕು ತುಳು …

ಉಜಿರೆಯಲ್ಲಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ನುಡಿ ನಮನ | ತುಳು ಶಿವಳ್ಳಿ ಸಂಘದಿಂದ Read More »

ಸವಣೂರು ಯುವಕ ಮಂಡಲದಿಂದ ವಿವೇಕಾನಂದ ಜಯಂತಿ ಆಚರಣೆ

ಸವಣೂರು : ಸವಣೂರು ಯುವಕ ಮಂಡಲದ ವತಿಯಿಂದ ಸ್ವಾಮಿ ವಿವೇಕಾನಂದ  157 ನೇ ಜನ್ಮದಿನಾಚರಣೆ ರಾಷ್ಟ್ರೀಯ ಯುವ ದಿನಾಚರಣೆ  ಆಚರಿಸಲಾಯಿತು. ಕಾರ್ಯಕ್ರಮ ವನ್ನು ಉದ್ಘಾಟಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಇಂದಿರಾ ಬಿ.ಕೆ ಇವರು ಮಾತನಾಡಿ ಸ್ವಾಮಿ ವಿವೇಕಾನಂದರ ಆದರ್ಶ ಇಂದಿಗೂ ಯುವಕರಿಗೆ ಸ್ಪೂರ್ತಿದಾಯಕ. ಯುವಶಕ್ತಿ ದೇಶದ ಸಂಪತ್ತು ಎಂದರು. ಸಭಾಧ್ಯಕ್ಷತೆ ವಹಿಸಿದ್ದ ಸವಣೂರು ಯುವಕ ಮಂಡಲದ ಅಧ್ಯಕ್ಷ ತಾರಾನಾಥ ಸವಣೂರು ಮಾತನಾಡಿ, ಕಾಲದ ಜೊತೆಗೆ ದಾಖಲೆಯಾಗುತ್ತಾ ಹೋಗುವುದು ಅನಿವಾರ್ಯವಾಗಿದೆ. ಸ್ವಾಮಿ ವಿವೇಕಾನಂದರು ತಮ್ಮ ಅಲ್ಪಕಾಲದ ಅವಧಿಯಲ್ಲಿಯು …

ಸವಣೂರು ಯುವಕ ಮಂಡಲದಿಂದ ವಿವೇಕಾನಂದ ಜಯಂತಿ ಆಚರಣೆ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ವಸ್ತ್ರ ಸಂಹಿತೆ ಕಡ್ಡಾಯಗೊಳಿಸಿ । ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷತ್-ಭಜರಂಗದಳ ಒತ್ತಾಯ

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಇದರ ಸುಬ್ರಹ್ಮಣ್ಯ ಘಟಕದ ವತಿಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಕಡ್ಡಾಯ ಮಾಡಬೇಕೆಂಬ ಮನವಿಯನ್ನುಕುಕ್ಕೆ ಶ್ರೀ ಸುಬ್ರಹ್ಮಣ್ಯದ ದೇಗುಲದ ಕಾರ್ಯನಿರ್ವಾಹಣ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಸುಬ್ರಹ್ಮಣ್ಯ ಘಟಕದ ಅಧ್ಯಕ್ಷರಾಗಿರುವ ಶ್ರೀ ಅಶೋಕ್ ಅರ್ಚಾಯ, ಬಜರಂಗದಳದ ಸಂಚಾಲಕ ಶ್ರೀ ದಿವನ್ ಭಟ್, ಪ್ರಮುಖರಾದ ಶ್ರೀ ಕಿರಣ್ ಪೈಲಾಜೇ, ಶ್ರೀ ಮಣಿಕಂಠ ಆದಿಸುಬ್ರಹ್ಮಣ್ಯ, ಶ್ರೀ …

ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ವಸ್ತ್ರ ಸಂಹಿತೆ ಕಡ್ಡಾಯಗೊಳಿಸಿ । ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷತ್-ಭಜರಂಗದಳ ಒತ್ತಾಯ Read More »

ನಿರ್ಗಮಿತ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠ೦ದೂರರ ರಿಪೋರ್ಟ್ ಕಾರ್ಡ್

ಹೆಚ್ಚು ವಿವರಣೆಗಳು ಬೇಕಾಗಿಲ್ಲ: ಅಂಕಿ ಅಂಶಗಳು ಮಾತಾಡುತ್ತವೆ ! 2016 ರಲ್ಲಿಸಂಜೀವ ಮಠ೦ದೂರರು ಜಿಲ್ಲಾ ಬಿಜೆಪಿಯ ಸಾರಥ್ಯ ವಹಿಸಿಕೊಂಡಾಗ ಜಿಲ್ಲೆಯಲ್ಲಿ ಬಿಜೆಪಿಯ ಪರಿಸ್ಥಿಯು ಪ್ಯಾಥೆಟಿಕ್ ಆಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಟ್ಟು 8 ವಿಧಾನಸಭಾ ಸ್ಥಾನಗಳ ಪೈಕಿ ಆಗ ಬಿಜೆಪಿ ಕೈಯಲ್ಲಿ ಇದ್ದದ್ದು ಕೇವಲ ಒಂದು. ಅದೂ ಸುಳ್ಯದ ಸೋಲನ್ನರಿಯದ ಕ್ಷೇತ್ರದಲ್ಲಿ. ಸುಳ್ಯದಲ್ಲಿ ಕಳೆದ 6 ಬಾರಿ ಎಸ್ ಅಂಗಾರ ಅವರನ್ನು ಆಯ್ಕೆ ಮಾಡುತ್ತಲೇ ಬರುತ್ತಿದೆ ಬಿಜೆಪಿ ! ಸುಳ್ಯವನ್ನುಹೊರತುಪಡಿಸಿ, ಜಿಲ್ಲೆಯಲ್ಲಿ ಬೇರೆ ಯಾವುದೇ ಪುರಸಭೆಯಲ್ಲೂ ಬಿಜೆಪಿಯ …

ನಿರ್ಗಮಿತ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠ೦ದೂರರ ರಿಪೋರ್ಟ್ ಕಾರ್ಡ್ Read More »

ಏನಾಗಲಿದೆ ಶಬರಿಮಲೆ ? : ಮಹಿಳೆಯರಿಗೆ ಪ್ರವೇಶ ನಿಷೇಧದ ಕುರಿತ ವಿಚಾರಣೆ ಇಂದು

ಶಬರಿಮಲೆ: ದಕ್ಷಿಣ ಭಾರತದ ಪುರಾಣ ಪ್ರಸಿದ್ದ ಕ್ಷೇತ್ರ ಶಬರಿಮಲೆಗೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತಾಗಿ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನ ಒಂಬತ್ತು ಸದಸ್ಯರ ಪೀಠದ ಮುಂದೆ ಬರಲಿದೆ. ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಮರು ಪರಿಶೀಲಿಸುವಂತೆ ಸುಮಾರು 60 ಅರ್ಜಿಗಳು ಸಲ್ಲಿಕೆಯಾಗಿವೆ. 2019 ರ ನವೆಂಬರ್ 14ರಂದು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಆಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಐದು ಸದಸ್ಯರ ಪೀಠ, ಇದನ್ನು ಒಂಬತ್ತು …

ಏನಾಗಲಿದೆ ಶಬರಿಮಲೆ ? : ಮಹಿಳೆಯರಿಗೆ ಪ್ರವೇಶ ನಿಷೇಧದ ಕುರಿತ ವಿಚಾರಣೆ ಇಂದು Read More »

ಹಸುಳೆಯನ್ನು ನೆಲಕ್ಕೆ ಒಗೆದ ಕಿರಾತಕ ತಂದೆ । ಪುತ್ತೂರು ಬಸ್ ಸ್ಟ್ಯಾಂಡಿನಲ್ಲಿ ನಡೆದ ಘಟನೆ

ತನ್ನ ಒಂದು ವರ್ಷದ ಹಸುಗೂಸನ್ನುತನ್ನ ತಂದೆಯೇ ನೆಲಕ್ಕೆ ಎತ್ತಿ ಒಗೆದು ಕ್ರೌರ್ಯ ಮೆರೆದಿದ್ದಾನೆ. ಉತ್ತರ ಕರ್ನಾಟಕ ಮೂಲದ ದಂಪತಿಯರಿಬ್ಬರು ಬಸ್ ಸ್ಟ್ಯಾಂಡಿನಲ್ಲಿ ಪರಸ್ಪರ ಕಚ್ಚಾಟ ನಡೆಸುತ್ತಿದ್ದರು. ಆ ಸಮಯದಲ್ಲಿ ಕುಡಿದ ಮತ್ತಿನಲ್ಲಿದ್ದ ಮಗುವಿನ ಸ್ವಂತ ತಂದೆಯೇ, ತನ್ನ ಗಂಡು ಮಗುವನ್ನು ನೆಲಕ್ಕೆ ಒಗೆದಿದ್ದಾನೆ. ಮಗುವಿನ ಅದೃಷ್ಟ ದೊಡ್ಡದಿತ್ತು. ಮಗು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದೆ. ಘಟನೆ ಕಂಡ ಜನರು ಗುಂಪು ಸೇರಿಕೊಂಡು ಆತನ ಬಗ್ಗೆ ವ್ಯಾಪಕ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರು. ಪ್ರಜ್ಞಾವಂತ ಮಹಿಳೆಯೊಬ್ಬರು, ಸ್ವತಃ ಪೊಲೀಸ್ ಸ್ಟೇಷನ್ ಗೆ …

ಹಸುಳೆಯನ್ನು ನೆಲಕ್ಕೆ ಒಗೆದ ಕಿರಾತಕ ತಂದೆ । ಪುತ್ತೂರು ಬಸ್ ಸ್ಟ್ಯಾಂಡಿನಲ್ಲಿ ನಡೆದ ಘಟನೆ Read More »

ಅಮೇರಿಕ ವಾಯು ನೆಲೆ ಮೇಲೆ ಇರಾನ್ ಮತ್ತೆ ದಾಳಿ । ಟ್ರ೦ಪ್ ನ ಅಸಹ್ಯ ಮೌನದ ಹಿಂದಿನ ಮರ್ಮವೇನು ?

ಇಂದು ಮುಂಜಾನೆ ಅಮೇರಿಕಾದ ವಾಯು ನೆಲೆಯ ಮೇಲೆ ಇರಾನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ 4 ಜನರು ಗಾಯಗೊಂಡಿದ್ದಾರೆ. ನಿಮಗೆ ಗೊತ್ತಿರಲಿ : ಇಬ್ಬರು ವಿರೋಧಿಗಳು ಪರಸ್ಪರ ವಾಗ್ದಾಳಿ ನಡೆಸುತ್ತ ಬಂದರೆ, ಆಗ ಅವರು ಯಾವುದೇ ಕಾರ್ಯಾಚರಣೆಗೆ ಇಳಿಯುವುದಿಲ್ಲ. ಒಂದು ವೇಳೆ, ವಿರೋಧಿಗಳಲ್ಲಿ ಒಬ್ಬಾತ ಸಡನ್ ಆಗಿ ಮೌನವಾಗಿ ಬಿಟ್ಟರೆ, ಅದು ವಿನಾಶಕ್ಕೆ ಮುಂಚಿನ ಮೌನದ ಸಂಕೇತ! ಈಗ ಆಗಿರೋದೇ ಅದು. ಯಾವತ್ತೂ ವ್ಯಗ್ರವಾಗಿರುವ ಡೊನಾಲ್ಡ್ ಟ್ರ೦ಪ್ ಸೈಲೆಂಟಾಗಿದ್ದಾರೆ : ಅಸಹ್ಯ ಮೌನಕ್ಕೆ ಶರಣಾಗಿದ್ದಾರೆ. ಶಾಂತಿ ಮಂತ್ರ …

ಅಮೇರಿಕ ವಾಯು ನೆಲೆ ಮೇಲೆ ಇರಾನ್ ಮತ್ತೆ ದಾಳಿ । ಟ್ರ೦ಪ್ ನ ಅಸಹ್ಯ ಮೌನದ ಹಿಂದಿನ ಮರ್ಮವೇನು ? Read More »

error: Content is protected !!
Scroll to Top