ಪೌರತ್ವ ಕಾಯ್ದೆಲ್ ಙಮಗ್ ಎಂದುಮ್ ತೊಂದರೆಯಿಲ್ಲೈ | പൗരത്വ നിയമത്തിൽ ഞങ്ങൾക്ക് ഒരു പ്രശ്നവുമില്ല

” ಉಗ್ರಗಾಮಿ ಚಟುವಟಿಕೆಗಳಿಗಾಗಿ ಭಾರತಕ್ಕೆ ಬರುವ ಯಾವುದೇ ಧರ್ಮದ ವ್ಯಕ್ತಿಗಳಿಗೆ ಪ್ರವೇಶವಿಲ್ಲ. ಉಗ್ರಗಾಮಿಗಳಿಗೆ ಧರ್ಮ ಬಿಡಿ, ಕನಿಷ್ಠ ಮನುಷ್ಯತ್ವ ಕೂಡ ಇರುವುದಿಲ್ಲ. ದೇಶದಲ್ಲಿ ಬಾಂಬು ಸಿಡಿಸುವುದು, ವಿಧ್ವ೦ಸಕ ಚಟುವಟಿಕೆ ನಡೆದಾಗ ಅದರಲ್ಲಿ ಎಲ್ಲ ಜಾತಿ ಧರ್ಮದ ಜನರೂ ನೋವನ್ನನುಭವಿಸುತ್ತಾರೆ. “

” ಸಿಡಿಯುವ ಬಾಂಬಿಗೆ ಹಿಂದೂನೂ ಒಂದೇ , ಮುಸ್ಲಿಂ- ಕ್ರಿಶ್ಚಿಯನ್ -ಸಿಖ್ಖನೂ ಒಂದೇ ! ಅದು ಜಾತಿ ಧರ್ಮ ನೋಡದೆ ಸಿಡಿಯುತ್ತದೆ : ಬಾಂಬು ಪಕ್ಕಾ ಡೆಮಾಕ್ರಟಿಕ್ – ಸಮಾನವಾಗಿ ಎಲ್ಲರನ್ನೂ ಹರ್ಟ್ ಮಾಡುತ್ತದೆ !”

” ಪೌರತ್ವ ಕಾಯ್ದೆಯಿಂದ ದೇಶದ ಭದ್ರತೆಗೆ ಸಹಾಯವಾಗಲಿದೆ.”

ಹೀಗೆಂದು ಪ್ರಚಾರಕ್ಕೆ ತೊಡಗಿರುವ ವ್ಯಕ್ತಿ, ನಮ್ಮ ಇವತ್ತಿನ ಲೋಕಲ್ ಟೈಗರ್ ಅಬ್ದುಲ್ಲಾ. ಯಾವುದೇ ಪ್ರಚಾರಕ್ಕೆ ಇಷ್ಟವಿಲ್ಲದೆ, ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ನೂಕುನುಗ್ಗಲು ಮಾಡುವ ಜನರ ಮಧ್ಯೆ ಒಂದು ಅಪ್ಪಟ ಗ್ರಾಮೀಣ ವ್ಯಕ್ತಿತ್ವ ನಮ್ಮ ವರದಿಗಾರರ ಸೂಕ್ಷ್ಮ ಕಣ್ಣಿಗೆ ಬಿದ್ದಿದೆ.

ಬೆಳ್ತಂಗಡಿ – ಬಂಟ್ವಾಳ ತಾಲೂಕು ಗಡಿಭಾಗದಲ್ಲಿ ವಾಸವಿರುವ ಈತನ ಜನರಲ್ ನಾಲೆಜ್ ಅಪಾರ. ಹತ್ತನೆಯ ಕ್ಲಾಸು ಓದಿಕೊಂಡಿದ್ದಾರಾ ಇಲ್ಲವಾ -ಗೊತ್ತಿಲ್ಲ. ಯಾವುದೇ ವಿಷಯದ ಬಗ್ಗೆ ಪ್ರಭುದ್ದ ನಿಲುವು ಹೊಂದಿದ್ದಾರೆ. ಇವತ್ತು ಪೌರತ್ವ ಕಾಯ್ದೆಯ ಪರವಾಗಿ ಅತ್ಯಂತ ಖಚಿತ ದನಿಯಲ್ಲಿ ಮಾತಾಡುತ್ತಾರೆ.

ತನ್ನ ಸಣ್ಣವ್ಯಾಪಾರದ ಮಧ್ಯದ ಪುಟಾಣಿ ಬಿಡುವಿನಲ್ಲಿ ‘ ಹೊಸ ಕನ್ನಡ ‘ ದ ಜತೆ ಕ್ಲುಪ್ತ ಸಂಭಾಷಣೆಗೆ ಒಪ್ಪಿದರು : ತಮ್ಮ ಐಡೆಂಟಿಟಿಯನ್ನು ಬಹಿರಂಗಪಡಿಸಬಾರದೆನ್ನುವ ಕಟ್ಟಪ್ಪಣೆಯೊಂದಿಗೆ. ಕೊನೆಗೆ ಹೆಸರನ್ನಾದರೂ ಹಾಕುತ್ತೇವೆಂದು ಒಪ್ಪಿಸಲು ಸಾಕುಬೇಕಾಯಿತು.

” ಪೌರತ್ವ ತಿದ್ದುಪಡಿ ಕಾಯ್ದೆಗೂ, ಈಗಾಗಲೇ ಪೌರತ್ವ ಹೊಂದಿರುವ ಭಾರತದ ಯಾವುದೇ ಜಾತಿ, ಧರ್ಮದ ಪ್ರಜೆಗಳಿಗೂ ಸಂಬಂಧವಿಲ್ಲ. ಕರಾಯ ಕಲ್ಲೇರಿ, ಕುಪ್ಪೆಟ್ಟಿ, ಪುತ್ತೂರು, ಬೆಳ್ತಂಗಡಿ, ಪಣಂಬೂರು, ಸುರತ್ಕಲ್, ಮಂಗಳೂರು, ಭಟ್ಕಳ, ಬೀದರ್, ಕಲ್ಬುರ್ಗಿ, ಮೈಸೂರು, ಬೆಂಗಳೂರು, ಹೈದರಾಬಾದ್, ಲಕ್ನೋ, ಪಶ್ಚಿಮ ಬಂಗಾಳ, ದೆಹಲಿ – ಯಾವುದೇ ರಾಜ್ಯ, ಯಾವುದೇ ಕುಗ್ರಾಮದ, ಯಾವುದೇ ಪಟ್ಟಣ, ಯಾವುದೇ ಮೂಲೆಯ, ಯಾವುದೇ ಗುಡ್ಡಗಾಡಿನ, ಆದಿವಾಸಿಗಳ ಪೌರತ್ವಕ್ಕೂ, ಈಗ ಬಂದಿರುವ ಪೌರತ್ವ ಕಾಯಿದೆಗೂ ಸಂಬಂಧವಿಲ್ಲ.”

” ಈಗಿರುವ ಪ್ರಜೆಗಳ ಹಕ್ಕು ಅಬಾಧಿತ. ಅದನ್ನು ಕಿತ್ತುಕೊಳ್ಳುವ ಹಕ್ಕು ಭಾರತದ ಯಾವುದೇ ಕಾನೂನಿಗೂ ಇಲ್ಲ. ಅಂತಹ ಕಾನೂನು ಯಾರು ಕೂಡ ಮಾಡಲಾಗುವುದಿಲ್ಲ.”

” ಈ ದೇಶದಲ್ಲಿ ಕಾನೂನು ಆದ ಕೂಡಲೇ ಅದೇ ಅಂತಿಮವಲ್ಲ. ರಾಷ್ಟ್ರಪತಿಗಳ ಅಂಕಿತಗೊಂಡ ಕಾನೂನು ಕೂಡ ಸುಪ್ರೀಂ ಕೋರ್ಟಿನ ಪರಾಮರ್ಶೆಗೆ ಅರ್ಹ. ಅದೇ ಕಾರಣಕ್ಕೇ ನಮ್ಮ ದೇಶ ವಿಶಿಷ್ಟವೆನ್ನಿಸುವುದು ” ನಮ್ಮ ಲೋಕಲ್ ಟೈಗರ್ ಅಬ್ದುಲ್ಲಾಕರ ನಿಲುವು !

ಪೌರತ್ವ ಕಾಯ್ದೆಯ ಮತ್ತಷ್ಟು ಮಾಹಿತಿ

  • ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನ್ ನಲ್ಲಿ ಮತೀಯವಾದಿಗಳ ಅಟ್ಟಹಾಸಕ್ಕೆ ವಲಸೆ ಬಂದ ವಲಸಿಗರಿಗೆ ಕಾಯ್ದೆ ಅನ್ವಯ. ಆದ್ದರಿಂದ ಇದು ಮಾನವ ಹಕ್ಕುಗಳ ಎತ್ತಿ ಹಿಡಿಯುವ ಕೆಲಸ.
  • ಕಷ್ಟದಲ್ಲಿರುವ, ನೋವಿನಲ್ಲಿರುವ ಜನರಿಗೆ ಮೂಲತಃ ಕರುಣಾಳು ಮನಸ್ಸತ್ವದ ಭಾರತೀಯರ ಕೊಡುಗೆ ಈ ಕಾಯ್ದೆ.
  • ಹಿಂದೂ ಪರ ಅನ್ನಲಾಗದು. ಯಾಕೆಂದರೆ, ಶ್ರೀಲಂಕಾ ಮತ್ತು ಭೂತಾನ್ ಮತ್ತು ಟಿಬೆಟಿಯನ್ ನಿರಾಶ್ರಿತ ವಲಸಿಗರಿಗೂ ಪೌರತ್ವವಿಲ್ಲ.
  • ಈ ಮಸೂದೆಯ ಪ್ರಕಾರ, ಹಿಂದೂ, ಪಾರ್ಸಿ, ಸಿಖ್, ಬುದ್ಧಿಸ್ಟ್ಸ್, ಜೈನ್ಸ್ ಮತ್ತು ಕ್ರಿಶ್ಚಿಯನ್ಸ್ ರು, ಯಾರೆಲ್ಲ 2014 ರ ಡಿಸೆಂಬರ್ 31 ಒಳಗೆ, ಪಾಕಿಸ್ತಾನ, ಬಾಂಗ್ಲಾ ದೇಶ್ ಮತ್ತು ಆಫ್ಘಾನಿಸ್ತಾನ್ ನಿಂದ ಬಂದಿದ್ದಾರೋ, ಅವರಿಗೆ ಭಾರತದ ಪೌರತ್ವ ಕೊಡುವ ಮಸೂದೆಯಿದು.
  • ಹಳೆಯ 1955 ರ ಪೌರತ್ವ ಮಸೂದೆಯ ಪ್ರಕಾರ ಭಾರತದಲ್ಲಿ ಕನಿಷ್ಠ 11 ವರ್ಷ ವಾಸವಾಗಿದ್ದರೆ, ಆಗ ಭಾರತದ ಪೌರತ್ವಕ್ಕೆ ಆತ/ಆಕೆ ಅರ್ಹಳಾಗುತ್ತಿದ್ದಳು. ಈಗ ಅದೇ ಮಸೂದೆಗೆ ತಿದ್ದುಪಡಿ ತರಲಾಗಿ, ಅದನ್ನು ಸಂಸತ್ತು ಅಂಗೀಕರಿಸಿದೆ.

ಕೃಷ್ಣ ಪ್ರಸಾದ್, ಬೆಳ್ತಂಗಡಿ

Leave A Reply

Your email address will not be published.