ಪೌರತ್ವ ಮಸೂದೆಯ ಬಗ್ಗೆತಪ್ಪು ಮಾಹಿತಿ ನೀಗಿಸಲು ಮನೆ ಮನೆಗೆ ಬಿಜೆಪಿ

0 13

ಪೌರತ್ವ ಮಸೂದೆಯ ಬಗ್ಗೆ ಇರುವ ತಪ್ಪು ಅಭಿಪ್ರಾಯವನ್ನು, ಅಪನಂಬಿಕೆಯನ್ನು ಮತ್ತು ಅಪಪ್ರಚಾರವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ದೇಶವ್ಯಾಪಿ ಆಂದೋಲನವನ್ನುಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಪ್ರಾರಂಭಿಸಿದ್ದಾರೆ. ಸಿ ಎ ಎ ಬಗ್ಗೆ ಯಾರೂ ಊಹಿಸದ ರೀತಿಯಲ್ಲಿ ಪ್ರತಿಭಟನೆ ಮತ್ತು ದ್ವೇಷಾಗ್ನಿ ಭುಗಿಲೆದ್ದ ಪರಿಣಾಮವಾಗಿ ಜನರನ್ನುವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಲು ಬಿಜೆಪಿ ನಿರ್ಧರಿಸಿದೆ. ಮತ್ತು ಮುಖ್ಯವಾಗಿ ಅಮಾಯಕ ಮುಸ್ಲಿಮರನ್ನುತಪ್ಪು ದಾರಿಗೆಳೆಯುವದನ್ನು ತಪ್ಪಿಸಲು ಬಿಜೆಪಿ ಈ ಹೆಜ್ಜೆಯಿಟ್ಟಿದೆ.

ಪೌರತ್ವ ತಿದ್ದುಪಡಿ ಕಾಯ್ದೆ-2019 ಜನಜಾಗೃತಿ ಅಭಿಯಾನದ ಅಂಗವಾಗಿ, ಪುತ್ತೂರು ಶಾಸಕರಾದ ಸಂಜೀವ ಮಠಂದೂರು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ಪುತ್ತೂರಿನ ಮಾನ್ಯ ಶಾಸಕರಾದ ಸಂಜೀವ ಮಠ೦ದೂರರವರು ಈ ಸಂದರ್ಭದಲ್ಲಿ ವಿಟ್ಲದ ಬೊಬ್ಬೆಕೇರಿ ಹಸನ್ ಸಾಹೇಬ್ ಮನೆಯಲ್ಲಿ, ಹಸನ್ ದಂಪತಿಗಳಿಗೆ ಪೌರತ್ವ ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು. ಭಾರತದ ಮುಸ್ಲಿಮರಿಗೆ ಮತ್ತು ಉಳಿದ ಯಾರೇ, ಯಾವುದೇ ದೇಶವಾಸಿಗಳಿಗೆ ಈ ಕಾಯ್ದೆಯಿಂದ ಒಂದಷ್ಟೂ ತೊಂದರೆ ಇಲ್ಲ. ಈ ಕಾಯ್ದೆ ಹೊರದೇಶಗಳಿಂದ ಭಾರತಕ್ಕೆ ವಲಸೆ ಬಂದವರಿಗೆ ಸಂಬಧಿಸಿದ್ದೆಂದು ಮನವರಿಕೆ ಮಾಡಿಕೊಟ್ಟರು.

ವಿಟ್ಲ ನಗರ ಭಾಜಪಾ ಅಧ್ಯಕ್ಷರು ಮೋಹನದಾಸ ವಿಟ್ಲ, ಪ್ರಧಾನ ಕಾರ್ಯದರ್ಶಿ ಉದಯಕುಮಾರ್, ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷರು ಅರುಣ್ ವಿಟ್ಲ, ಪಟ್ಟಣ ಪಂಚಾಯತ್ ಉಪಾಧ್ಯಕ್ಷರು ಜಯಂತ್, ಪಟ್ಟಣ ಪಂಚಾಯತ್ ಸದಸ್ಯರು ರಾಮದಾಸ್ ಶೆಣೈ, ಮಂಜುನಾಥ ಕಲ್ಲಕಟ್ಟ, ಭಾಜಾಪ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷರು ಸುರೇಶ್ ಆಳ್ವ ಉಪಸ್ಥಿತರಿದ್ದರು.

ಮತ್ತೊಂದೆಡೆ ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರ ನೇತೃತ್ವದಲ್ಲಿ ಪುತ್ತೂರು ನಗರದ ಚಿಕ್ಕಪುತ್ತೂರಿನಲ್ಲಿ ಜನಜಾಗೃತಿ ಅಭಿಯಾನದ ಸಭಾ ಕಾರ್ಯಕ್ರಮ ಹಾಗೂ ಮನೆ ಮನೆ ಭೇಟಿ ನೀಡಿ ಮಾಹಿತಿಗಳ ಕರಪತ್ರವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಶ್ರೀ ಚನಿಲ ತಿಮ್ಮಪ್ಪ ಶೆಟ್ಟಿ,ನಗರ ಮಂಡಲ ಅಧ್ಯಕ್ಷರಾದ ಶ್ರೀ ಜೀವಂಧರ್ ಜೈನ್, ನಗರ ಮಂಡಲ ನಿಯೋಜಿತ ಅಧ್ಯಕ್ಷರಾದ ಶ್ರೀ ಜಗನ್ನೀವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಮದಾಸ್ ಹಾರಾಡಿ, ಗೌರಿ ಬನ್ನೂರು, ಪಕ್ಷದ ಮುಖಂಡರಾದ ಶ್ರೀ ಅಪ್ಪಯ್ಯ ಮಣಿಯಾಣಿ, ನಗರಸಭೆ ಸದಸ್ಯರು, ಮತ್ತಿತರ ಜನಪ್ರತಿನಿಧಿಗಳು, ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

Leave A Reply