ರಾಜ್ಯ ಪತ್ರಕರ್ತರ ಸಮ್ಮೇಳನ ಲಾಂಛನ ಬಿಡುಗಡೆ ವಾಸ್ತವಿಕ ವಿಚಾರ, ಆಸಕ್ತಿ ಮೂಡಿಸುವ ಬರಹ ಇರಬೇಕು : ಡಾ| ಹೆಗ್ಗಡೆ
” ಮಂಗಳೂರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆಯ ಜವಾಬ್ದಾರಿ ದೊಡ್ಡದು. ಸ್ಪರ್ಧಾತ್ಮಕ ಯುಗದಲ್ಲಿ ಪತ್ರಿಕೆ ಇರುವುದು ಉತ್ತಮ ವಿಚಾರ. ಸ್ಪರ್ಧೆಯಿಂದ ಪರಿಸ್ಕಾರ ಆಗುತ್ತದೆ. ಇಂದು ಪತ್ರಿಕೆಗಳಲ್ಲಿ ವಿಷಯವನ್ನು ಕುತೂಹಲ ಆಸಕ್ತಿಯಿಂದ ಓದುವಂತಹ ವಿಷಯಗಳು ಪ್ರಕಟವಾಗುತ್ತದೆ. ಅಂದರೆ ಪತ್ರಕರ್ತರು ಓದುಗರಿಗೆ ಮನದಟ್ಟು ಮಾಡುವಂತಹ ವರದಿಗಳನ್ನು ನೀಡುತ್ತಿದ್ದಾರೆ. ವಾಸ್ತವಿಕ ವಿಚಾರ ಮತ್ತು ಓದುಗರಲ್ಲಿ ಆಸಕ್ತಿ ಮೂಡಿಸುವ ಬರಹವಿದ್ದಾಗ ಓದುಗರ ಸಂಖ್ಯೆ ಹೆಚ್ಚಾಗುತ್ತದೆ ” ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಅವರು ಶನಿವಾರ ಧರ್ಮಸ್ಥಳದ ವಸಂತ ಮಹಲ್ನಲ್ಲಿಮಾತನಾಡುತ್ತ, …