ಸೇವಾಧಾಮ ಸ್ವಾವಲಂಬನ್ ಯೋಜನೆಗೆ ಚಾಲನೆ | ನೂತನ ಕೈಪಿಡಿ ಬಿಡುಗಡೆ

ಉಜಿರೆ : ಬೆನ್ನುಮೂಳೆ ಮುರಿತಕ್ಕೊಳಗಾದವರ ಪುನಶ್ಚೇತನ ಕೇಂದ್ರ ‘ ಸೇವಾ ಧಾಮ ‘ ದಲ್ಲಿ ದಿವ್ಯಾಂಗರ ಸ್ವ ಉದ್ಯೋಗ ಕ್ಕಾಗಿ ಸ್ವಾವಲಂಬಂ ಯೋಜನೆಯಡಿ ಪ್ರಥಮ ಹಂತವಾಗಿ ಜೇನು ಪೆಟ್ಟಿಗೆಯನ್ನು ಸೇವಾಧಾಮದ ಸಂಚಾಲಕರಾದ ಪುರಂದರ ರಾವ್ ಅವರು ಫಲಾನುಭವಿಗಳಲ್ಲೊಬ್ಬರಾದ ವಿನಾಯಕ ರಾವ್ ಅವರಿಗೆ ಹಸ್ತಾ೦ತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು.

ಇದೆ ಸಂಧರ್ಭದಲ್ಲಿ ಸಮಾರಂಭದ ಮುಖ್ಯ ಅತಿಥಿಯಾದ ಯಶವಂತ್ ಪಟವರ್ಧನ್ ಅವರು ತಮ್ಮ ಹುಟ್ಟುಹಬ್ಬವನ್ನು ದಿವ್ಯಾಂಗ ಮತ್ತವರ ಕುಟುಂಬ ಸದಸ್ಯರೊಂದಿಗೆ ಆಚರಿಸಿಕೊಂಡರು.

ಆ ಸಂಧರ್ಭದಲ್ಲಿ ಪಟವರ್ಧನ್ ಅವರು ದಿವ್ಯಾಂಗರ ಶ್ರೇಯೋಭಿವೃದ್ಧಿಗಾಗಿ 10000 ರೂ.ಗಳನ್ನೂನೀಡಿ ಶುಭ ಹಾರೈಸಿದರು.

ಯೋಜನೆಯ ಮೊದಲ ಹಂತವಾಗಿ ಮೂವರು ಫಲಾನುಭವಿಗಳಿಗೆ ಜೇನು ಪೆಟ್ಟಿಗೆಯನ್ನುವಿತರಿಸಲಾಯಿತು.

ಈ ಸಂಧರ್ಭದಲ್ಲಿ ಸೇವಾಭಾರತಿ (ರಿ) ಅಧ್ಯಕ್ಷ ವಿನಾಯಕ್ ರಾವ್, ಶ್ರೀಮತಿ ರಶ್ಮಿ ಪಟವರ್ಧನ್, ಸೋಮನಾಥ್ ಭಟ್, ಲಕ್ಷ್ಮಿಬಾಯಿ, ಸೇವಾಭಾರತಿ ಟ್ರಸ್ಟಿ ಕುಸುಮಾಕರ್, ಪ್ರಭಂದಕ ಮೋಹನ್ ನಿಡ್ಲೆ, ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಸೇವಾಧಾಮದ ನೂತನ ಕೈಪಿಡಿ ಬಿಡುಗಡೆ.

ಸೇವಾಭಾರತಿ (ರಿ ) ಕನ್ಯಾಡಿ, ಇದರ ಅಂಗಸಂಸ್ಥೆಯಾದ ಕೊಕ್ಕಡ ಗ್ರಾಮದ ಸೌತಡ್ಕದಲ್ಲಿರುವ ಬೆನ್ನು ಮೂಲೆ ಮುರಿತಕ್ಕೊಳಗಾದವರ ಪುನಶ್ಚೇತನ ಕೇಂದ್ರ ಸೇವಾಧಾಮದ ನೂತನ ಕೈಪಿಡಿಯನ್ನು, ಬೆಳ್ತಂಗಡಿಯ ಉದ್ಯಮಿ ಮತ್ತು ರೋಟರಿ ಸದಸ್ಯ, ಹಿತೈಷಿ ಯಶವಂತ ಪಟವರ್ಧನ್ ಅವರು ಜ. 2 ರಂದು ಬಿಡುಗಡೆ ಗೊಳಿಸಿದರು.

Leave A Reply