ಹಲವರಿಗೆ ನೆರಳು ನೀಡಿದ ದೊಡ್ಡಾಲದ ಮರ ನೆಲಕ್ಕೆ ಬಿದ್ದಿದೆ । ವಿಶ್ವೇಶತೀರ್ಥ ಸ್ವಾಮೀಜಿ ಶ್ರೀ ಕೃಷ್ಣನಲ್ಲಿ ಲೀನ !
ಆಗಿನ್ನೂ ಎಲ್ಲ ಬಾಲಕರಂತೆ ಆಟವಾಡುತ್ತಿದ್ದ 7 ವರ್ಷದ ಪುಟಾಣಿ ಮಗುವದು. ಅಂತ ಮುದ್ದು ಮಗು ಅವತ್ತು ಸನ್ಯಾಸ ದೀಕ್ಷೆ ತೆಗೆದುಕೊಳ್ಳುತ್ತದೆ. ಅದು 1938 ರ ಸಮಯ. ಹಾಗೆ ಅವತ್ತು ಸನ್ಯಾಸ ಪಡೆದ ಹುಡುಗ ಮುಂದೆ ಬೆಳೆದು ಉಡುಪಿಯ ಅಷ್ಟಮಠದ ಪರ್ಯಾಯ ಸ್ವಾಮಿಜಿಯಾಗುತ್ತಾರೆ. ದೇಶಾದ್ಯಂತ ಪೇಜಾವರದ ವಿಶ್ವೇಶ್ವರ ತೀರ್ಥ ಸ್ವಾಮೀಜಿಯಾಗಿ ಹೆಸರು ಗಳಿಸುತ್ತಾರೆ. ಪುತ್ತೂರು ತಾಲೂಕಿನ ರಾಮಕುಂಜದ ಮಾಧ್ವ ಬ್ರಾಹ್ಮಣ ಮಧ್ಯಮ ವರ್ಗದ ಕುಟುಂಬದಲ್ಲಿ ಜನನ. ಪೂರ್ವಾವಸ್ಥೆಯ ಹೆಸರು, ವೆಂಕಟರಮಣ. ಚಿಕ್ಕವಯಸ್ಸಿನಿಂದಲೇ ನಾಯಕತ್ವದ ಲಕ್ಷಣವನ್ನು ಪೇಜಾವರದ ವಿಶ್ವೇಶ್ವರ ತೀರ್ಥ …