ಕವನ । ಎರಡು ಜುಟ್ಟು
ಇಲ್ಲ ನನಗೆ ಅಮ್ಮನಿಟ್ಟ ಮುತ್ತ ನೆನಪುಚಂದ್ರನ ತೋರಿ ಕೊಟ್ಟತುತ್ತ ನೆನಪುಯಾಕೋ ಆಗುತ್ತಲೇ ಇರುತ್ತದೆತಲೆ ತುಂಬಾ ಎಣ್ಣೆ ಹೊಯ್ದು,ಮಧ್ಯೆ ಬೈತಲೆ ನೆಟ್ಟು,ಬಾಚಿ ಹೆಣೆದು ಹಾಕುತ್ತಿದ್ದಚಂದದೆರಡು ಜುಟ್ಟ ನೆನಪು. ಜುಟ್ಟ ಮೇಲಿಟ್ಟ ತಾವರೆಅರೆ ಕಪ್ಪು ಕಪ್ಪು.ದಿನಾ ಕೂರುತ್ತಿದ್ದ ಅದೇಮುರಿದ ಮೆಟ್ಟಿಲುಕಾಯುತ್ತಲೇ ಇದೆ ಮನಮತ್ತೆ ಮೆಟ್ಟಿಲ ಮುಟ್ಟಲುಅಮ್ಮ ಅತ್ತು, ನಾನೂ ಅತ್ತುಬದುಕ ಬೆಳಕಿನ ಕನಸ ಹೊತ್ತುಹೋದದ್ದು ಗೊತ್ತಿದೆಯೆ ಹೊತ್ತು ಗೊತ್ತುಬೇಡವೆಂದರೂ ಪೆಟ್ಟು ಕೊಟ್ಟುಬೇಡವೆಂದರೂ ಜಡೆಯ ಹೆಣೆದುಬೇಡವೆಂದರೂ ಹೂವ ಮುಡಿಸಿಬಯಲು, ಕೆರೆ, ನದಿಯ ದಾಟಿಕೊರಪಲುವಿನಿಂದ, ಕೊರಗಜ್ಜನವರೆಗೆ ಕಥೆಯು ಸಾಗಿಮತ್ತೆ ಬದುಕು, ಮತ್ತೆ ಜುಟ್ಟುಕೊನೆಗೆ …