ಪುತ್ತೂರು ಶಾಶಕ ಸಂಜೀವ ಮಠ೦ದೂರರ ಬಡವರ ಕಾಳಜಿ । ಮುಖ್ಯಮಂತ್ರಿ ಪರಿಹಾರ ನಿಧಿ ನೀಡುವಲ್ಲಿ ಮುಂಚೂಣಿಯಲ್ಲಿ

0 9

ಪುತ್ತೂರು ಶಾಶಕ ಸಂಜೀವ ಮಠ೦ದೂರರ ಶಾಶಕರ ಬಡವರ ಕಾಳಜಿ ಮತ್ತು ಮುತುವರ್ಜಿಯಿಂದ ಅನಾರೋಗ್ಯ ಸಮಸ್ಯೆಯಲ್ಲಿರುವ ಹಲವರಿಗೆ ಮುಖ್ಯಮಂತ್ರಿ ಪರಿಹಾರ ಹಣ ಬಿಡುಗಡೆ ಆಗುತ್ತಿದೆ.
ಇಂದು, ಬೆಟ್ಟಂಪಾಡಿ ಗ್ರಾಮದ ಬೀ೦ತಡ್ಕ ಅಬ್ದುಲ್ ನೌಶಾದ್ ಇವರಿಗೆ ಕಿಡ್ನಿ ವೈಫಲ್ಯದ ಕಾರಣಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 97, 000 ರೂಪಾಯಿ ಚೆಕ್ ಅನ್ನು ಪುತ್ತೂರು ಶಾಶಕ ಸಂಜೀವ ಮಠ೦ದೂರರವರು ವಿತರಿಸಿದರು.

ಆ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಲ್ವಾ, ರಫೀಕ್ ಮತ್ತಿತರರಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಕಳೆದ ಕೆಲವು ದಿನಗಳಿಂದ ಪುತ್ತೂರು ಶಾಶಕ ಸಂಜೀವ ಮಠ೦ದೂರರು ಮುಖ್ಯಮಂತ್ರಿ ಪರಿಹಾರನಿಧಿಯನ್ನು ಚೆಕ್ ನ ಮೂಲಕ ವಿತರಿಸಿದ ವಿವರ ಹೀಗಿದೆ.

ಬೆಳ್ಳಿಪ್ಪಾಡಿ ಗ್ರಾಮದ ಶ್ರೀ ನಾರಾಯಣ ಪೂಜಾರಿಯವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ : ರೂ.30,000

ಪುತ್ತೂರು ಕಸಬಾ ಗ್ರಾಮದ ಶ್ರೀ ಆರನ್ ಡಿಸಿಲ್ವಯವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ : ರೂ. 2,00,000

ಬಲ್ನಾಡು ಗ್ರಾಮದ ಶ್ರೀ ಶ್ರೀಧರ ಪೂಜಾರಿಯವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ : ರೂ.74,800

ಶಾಂತಿಗೋಡು ಗ್ರಾಮದ ಶ್ರೀ ವಿಶ್ವನಾಥ ಮುಂಡೋಡಿಯವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ : ರೂ.24,910

ಮಾಡ್ನೂರು ಗ್ರಾಮದ ಶ್ರೀ ಬಾಲಕೃಷ್ಣ ಬಿನ್ ಸಂಜೀವ ಗೌಡರವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ : ರೂ 29,235

Leave A Reply