ಕೊಳಚೆ ನೀರಿಗೆ ವಿಷ ಬೆರೆಸಿದಂತೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಭ್ರಷ್ಟರ ಮಹಾಗುರು ಡಿ ಕೆ ಶಿವಕುಮಾರ್ ?

ಒಂದು ಕಾಲದ ಟಗರು ಕಮ್ ಹೌದ್ ಹುಲಿಯ ಇವತ್ತು ಸಣ್ಣ ಇಲಿಯ ಥರ ಆಗಿದ್ದಾರೆ. ಅವರ ಸಾಲು ಸಾಲು ಸೋಲುಗಳು ಕರ್ನಾಟಕದಲ್ಲಿ ಸಿದ್ದು ಮತ್ತು ಕಾಂಗ್ರೆಸ್ ಅನ್ನು ಕಂಗೆಡಿಸಿವೆ. ಮೊನ್ನೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಖರ್ಚಿಗೆ ಬೇಕೇನೋ ಎಂಬಂತೆ 2 ರೂಪಾಯಿ ಚಿಲ್ಲರೆ ಜೇಬಲ್ಲಿ ಹಾಕ್ಕೊಂಡು ಮೂಲೇಲಿ ಕೂತಿದೆ. ಅದರ ಜವಾಬ್ದಾರಿ ತಗೊಳ್ಳದೆ ವಿಧಿಯಿಲ್ಲದ ಸಿದ್ದಣ್ಣ ಮತ್ತು ಅವರ ಚೇಲ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದಾರೆ. ದಿನೇಶ್ ಗುಂಡುರಾವ್ ಅಂತೂ ತಮ್ಮಪ್ರತಿಷ್ಠಿತ ಅಧ್ಯಕ್ಷ ಸ್ಥಾನ ಕಳಕೊಂಡ ನಂತರವಂತೂ ನಿರಂತರ ಗುಂಡು ಹೊಡೆಯುತ್ತ ತಮ್ಮ ಬಾಲ್ಕನಿಯಲ್ಲಿ ಹಾಡು ಹೇಳುತ್ತಿದ್ದಾರೆ ಅಂತ ನಂಬಲರ್ಹ ಮೂಲಗಳು ತಿಳಿಸಿವೆ.

ಅದಿರಲಿ. ಈಗ ತೆರವಾದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಾಲು ಸಾಲು ಅಭ್ಯರ್ಥಿಗಳು ಕ್ಯೂ ನಲ್ಲಿದ್ದಾರೆ. ಈಗ ಹೈಕಮಾಂಡ್ ಸೋನಿಯಾ ಗಾಂಧಿಯವರು ಡಿ ಕೆ ಶಿವಕುಮಾರ್ ಅವರನ್ನ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೆ ಓವ್ರ ಅಭ್ಯರ್ಥಿಯನ್ನಾಗಿ ಗುರುತಿಸಿದೆ. ಉಳಿದಂತೆ ಮಲ್ಲಿಕಾರ್ಜುನ ಖರ್ಗೆ, ಎಚ್ ಕೆ ಪಾಟೀಲ್, ಡಿ ಕೆ ಶಿ, ಕೆ ಎಚ್ ಮುನಿಯಪ್ಪ, ಎಮ್ ಬಿ ಪಾಟೀಲ, ಜಿ ಪರಮೇಶ್ವರ್, ಬಿ ಕೆ ಹರಿಪ್ರಸಾದ್ ಮುಂತಾದವರಿದ್ದಾರೆ. ತಾವು ಅಲ್ಲದೆ ಹೋದರೆ, ತಮ್ಮ ಶಿಷ್ಯನನ್ನು ಕೂರಿಸುವ ಇರಾದೆ ಅವರೆಲ್ಲರದು.

ಪ್ರತಿಯೊಬ್ಬರೂ ಒಂದಲ್ಲ ಒಂದು ತಮ್ಮದೆ ಗುಂಪು ಕಟ್ಟಿಕೊಂಡಿದ್ದಾರೆ. ಅಥವಾ ಬೇರೆ ಯಾವುದೊ ಗುಂಪುಗಾರನ ಜತೆ ಗುರುತಿಸಿಕೊಂಡಿದ್ದಾರೆ. ಒಬ್ಬರು ಲಿಂಗಾಯತರಾದರೆ, ಇನ್ನೊಂದು ಗುಂಪು ಒಕ್ಕಲಿಗ, ಮತ್ತೊಬ್ಬರು ಹಿಂದುಳಿದ. ಹಿಂದುಳಿದ ಪಂಗಡದಲ್ಲೂ ಎಡ, ಬಲ ಪಂಗಡಗಳು.

ಈಗ ಕೆಪಿಸಿಸಿ ಅಧ್ಯಕ್ಷನ್ನನ್ನು ಆಯ್ಕೆಮಾಡುವುದು ಹೈಕಮಾಂಡ್ ಗೆ ಅತ್ಯಂತ ಕಷ್ಟದ ಕೆಲಸ. ಕೇವಲ ಜಾತಿಯ ಬೆಂಬಲವಿರುವ ವ್ಯಕ್ತಿಯನ್ನು ಇಂತಹ ಪಕ್ಷ ಕಟ್ಟುವ ಕಾರ್ಯಕ್ಕೆ ನೇಮಿಸುವುದು ಯಾವುದೇ ಸನ್ನಿವೇಶದಲ್ಲಿ ಸೂಕ್ತವಲ್ಲ. ಒಂದು ಜಾತಿಯ, ಒಂದು ಪಂಗಡದ, ತಾನು ಹಿಂದುಳಿದ, ನಾನು ಒಕ್ಕಲಿಗ, ನನ್ನದು ಎಡಗೈ- ನಿನ್ನದು ಬಲಗೈಮುಂತಾದ ಹರಕಲು ಕಾನ್ಸೆಪ್ಟ್ ಅನ್ನು ಇಟ್ಟುಕೊಂಡು ಮತ್ತೇನಾದರೂ ಕಾಂಗ್ರೆಸ್ ಹೊರಡಿತೋ, ಮತ್ತೆ ಅದು ಏಟು ತಿನ್ನುವುದು ಖಚಿತ.

ಈ ಸಲ ಯಾವುದೇ ಜಾತಿಗೆ, ಇಸಂ ಗಳಿಗೆ ಅತಿಯಾಗಿ ಅಂಟಿಕೊಳ್ಳದ, ಯಾವುದೇ ಹಗರಣಗಳಿಲ್ಲದ ವ್ಯಕ್ತಿತ್ವಕ್ಕೆ ಮತ್ತು ಸಂಘಂಟಾನಾತ್ಮಕ ಚಾತುರ್ಯವಿರುವ ವ್ಯಕ್ತಿಯನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಬೇಕಿದೆ.
ಡಿಕೆಶಿಯವರು ಸ್ಟ್ರಾಂಗ್ ಕ್ಯಾಂಡಿಡೇಟ್ ಏನೋ ಹೌದು, ಆದರೆ ಅವರೇನ ಐಡಿಯಲ್ ಕ್ಯಾಂಡಿಡೇಟ್ ನ ಅಂದರೆ, ಅದಕ್ಕೆ ತುಂಬಾ ಯೋಚನೆ ಮಾಡಬೇಕಾಗುತ್ತದೆ. ಈಗಾಗಲೇ ಸಾಲು ಸಾಲು ಕೋರ್ಟು ಕೇಸುಗಳಿಂದ ಜರ್ಜರಿತವಾಗಿರುವ ಡಿಕೆಶಿಗೆ ಪಕ್ಷದ ಜವಾಬ್ದಾರಿ ನೀಡಿದರೆ, ಈಗಾಗಲೇ ಬಿಜೆಪಿಯ ಮೇಲೆ ಕುದಿಯುತ್ತಿರುವ ಅವರು ಪಕ್ಷಕಟ್ಟುವ ಕಾರ್ಯವನ್ನೇನೋ ಮಾಡಬಹುದು. ಆದರೆ ಅದು ಕರ್ನಾಟಕಕ್ಕೇ ಮತ್ತು ದೇಶಕ್ಕೆ ಯಾವ ಮೆಸೇಜ್ ರವಾನೆ ಮಾಡುತ್ತದೆ ? ಅದನ್ನು ಜನ ಹೇಗೆ ಸ್ವೀಕರಿಸುತ್ತಾರೆ ? ಹವಾಲಾ ಮತ್ತಿತರ ಕೇಸಿನಲ್ಲಿರುವ ಡಿಕೆಶಿಯ ಕಾನೂನು ಹೋರಾಟಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ತಮ್ಮ ಮೇಲೆ ಅಲ್ಲದೆ, ತಮ್ಮ ಮಗಳು ಐಶ್ವರ್ಯ, ಪತ್ನಿ ಮತ್ತು ತಾಯಿ ಗೌರಮ್ಮನವರ ಮೇಲೆ ಕೂಡಾ ಕೇಸುಗಳಿದ್ದು, ಅದನ್ನು ಕೂಡ ಡಿ ಕೆ ಶಿ ಸಹೋದರರೇ ಮ್ಯಾನೇಜ್ ಮಾಡಬೇಕಾಗುತ್ತದೆ.

ಕೆಪಿಸಿಸಿ ಅಧ್ಯಕ್ಷನಾಗುವವನು, ಪಾರ್ಟಿಯ ಖರ್ಚಿಗೆ ಬೇಕಾಗುವ 15-20 ಲಕ್ಷ ತಿಂಗಳು ತಿಂಗಳು ಕ್ರೋಢೀಕರಿಸುವ ಶಕ್ತಿಯಿರಬೇಕಾಗುತ್ತದೆ. ಶಿವಕುಮಾರ್ ರಿಗೆ ಅದೆಲ್ಲ ಚಾಲೆಂಜ್ ಅಲ್ಲ. ಹಣಕಾಸಿನ ವಿಷಯದಲ್ಲಿ ಅವರು ಅತ್ಯಂತ ಸ್ಟ್ರಾಂಗ್. ಈಗ, ಇಷ್ಟು ದೊಡ್ಡ ಮೊತ್ತವನ್ನು ತಿಂಗಳ ಮೊದಲು ಹೊಂಚಿಡುವ ಜವಾಬ್ದಾರಿಯನ್ನು ಪಕ್ಷದ ಅಧ್ಯಕ್ಷನಿಗೆ ವಹಿಸುವುದು ಕಾಂಗ್ರೆಸ್ ನ ಮತ್ತೊಂದು ಪೂರ್ ಮ್ಯಾನೇಜ್ಮೆಂಟ್ ಗೆ ಸಾಕ್ಷಿ. ಹಣಕಾಸು ನಿರ್ವಹಣೆಯನ್ನು ಬೇರೆ ಯಾರಾದ್ರೂ ನಿರ್ವಹಿಸಿ, ಉಳಿದ ಸಂಘಟನಾತ್ಮಕ ಕಾರ್ಯಕ್ರಮಗಳನ್ನು ಪಕ್ಷಾಧ್ಯಕ್ಷ ಮಾಡಬೇಕು. ಹಣಕಾಸಿನ ಮೇಲುಸ್ತುವಾರಿ ಪಕ್ಷಾಧ್ಯಕ್ಷನ ಕೆಳಗೆ ಬಂದರೂ, ಅದನ್ನು ದಿನನಿತ್ಯ ತೂಗಿಸುವ ಅನಿವಾರ್ಯತೆ ಅವನಿಗಿರುವುದಿಲ್ಲ.

ಈ ಸಲ ಸೋನಿಯಾ ಮತ್ತು ಟೀಮು ಜಾತಿ, ದುಡ್ಡು, ಪಂಗಡ, ಧರ್ಮ ಸೀನಿಯಾರಿಟಿ ಮುಂತಾದ ಯಾವುದನ್ನೂ ನೋಡದೆ, ಯುವ ನಾಯಕರಿಗೆ ಅವಕಾಶ ಮಾಡಿಕೊಡಬೇಕು. ಹಳೆ ಫಾರ್ಮುಲಾ ಬಿಟ್ಟು ಹೊಸ ಫಾರ್ಮುಲಾ ಸೋನಿಯಾ ಗಾಂಧಿ ಟೀಮು ಬರೆಯಬೇಕು. ಬಿಜೆಪಿಯಲ್ಲಿ ಅಂತದ್ದು ಆಗುತ್ತೆ. ಅದಕ್ಕೇ, ಗುಜರಾತಿನ ಮೋದಿ ಸೀದಾ ದೆಹಲಿ ಸಿಂಹಾಸನದಲ್ಲಿ ಕೂರಲು ಸಾಧ್ಯವಾಗಿದ್ದು. ಕಾಂಗ್ರೆಸ್ ಕೂಡ ಇಂತಹುದನ್ನು ಟ್ರೈ ಮಾಡಬೇಕು. ಆಗ ಮಾತ್ರ ಬಿಜೆಪಿಯ ಅಟ್ಟಹಾಸದ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಬಹುದು.

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.