ದೆಹಲಿ ನಿರ್ಭಯಾ ಹತ್ಯೆ । ಗಲ್ಲು ಶಿಕ್ಷೆ ಎದುರು ನೋಡುತ್ತಾ ಕೂಡುವುದಕ್ಕಿಂತ ದೊಡ್ಡ ಶಿಕ್ಷೆ ಬೇರೆ ಯಾವುದಿದೆ ?

ದೆಹಲಿಯ ನಿರ್ಭಯಾ ಹತ್ಯೆ ಆರೋಪಿಗಳಿನ್ನೂ ಜೈಲಿನಲ್ಲಿ ಗಲ್ಲು ಶಿಕ್ಷೆಯ ದಾರಿ ನೋಡುತ್ತಿದ್ದಾರೆ. ಇನ್ನೇನು ರಾಷ್ಟ್ರಪತಿಯವರು ಶಿಕ್ಷೆ ಮಾಫಿ ಅರ್ಜಿಯನ್ನು ವಾಪಸ್ ಕಳುಹಿಸಿದ ಕೂಡಲೇ, ಗಲ್ಲು ಶಿಕ್ಷೆ ಜಾರಿಯಾಗಲಿದೆ. ಆದರೆ ಅಷ್ಟರಲ್ಲಿ ಗಲ್ಲು ಶಿಕ್ಷೆ ಆಪಾದಿತರಲ್ಲೊಬ್ಬನಾದ ಅಕ್ಷಯ್ ನ ಪರ ವಕೀಲರು ಅಕ್ಷಯನ ನಿರ್ದೇಶನದಂತೆ ಹೊಸ ವಾದವೊಂದನ್ನು ಹೂಡಿದ್ದಾರೆ.

ದೇಶದ ರಾಜಧಾನಿ ದೆಹಲಿಯಲ್ಲಿ ತೀವ್ರ ತರಹದ ಪರಿಸರ ಸಮಸ್ಯೆಯಿದ್ದು, ಇಡೀ ದೆಹಲಿಯೇ ಒಂದು ಕೊಲ್ಲುವ ಗ್ಯಾಸ್ ಚೇ೦ಬರ್ ಥರ ಇದೆ. ಹಾಗಿರುವಾಗ ಮತ್ತೆ ನಮ್ಮನ್ನು ಸಾಯಿಸುವ ಅಗತ್ಯವೇನಿದೆ?
“ಹಿಂದೆ ಜನರು 80-90 ವರ್ಷ ಬದುಕುತ್ತಿದ್ದರು. ಆದರೆ, ಈಗ ಮನುಷ್ಯನ ಆಯಸ್ಸು 50-60 ಕ್ಕೆ ಇಳಿದಿದೆ. ಹಿಂದೆ ತ್ರೇತಾಯುಗದಲ್ಲಿ ಮನುಷ್ಯ ವರ್ಷ ಆಯಸ್ಸು, ಮನುಷ್ಯ ಸತ್ತಂತೆಯೇ ಆಗಿದ್ದಾನೆ. ಹಾಗಾಗಿ ಆತನನ್ನು ಮತ್ತೊಮ್ಮೆ ಕೊಲ್ಲುವ ಅಗತ್ಯವಾದರೂ ಏನು ? ” ಎಂದು ಅಕ್ಷಯ್ ಪ್ರಶ್ನಿಸಿದ್ದಾನೆ. ಅಲ್ಲದೆ ಬಡವರಿಗೆ ಮಾತ್ರ ಶಿಕ್ಷೆ, ಶ್ರೀಮಂತರು ತಪ್ಪಿಸಿಕೊಳ್ಳುತ್ತಿದ್ದಾರೆ. ಶ್ರೀಮಂತರಿಗೆ ಡಬ್ಬಲ್ ಸ್ಟ್ಯಾಂಡರ್ಡ್ ಹೊಂದಿದೆ ” ಎಂದು ಆತ ಹೇಳಿದ್ದಾನೆ. ಹೇಳಿದ್ದಾನೆ.

ಇದೆಲ್ಲ ಪ್ರಯತ್ನಗಳು ಉಳಿಸಿಕೊಳ್ಳಲು ನಡೆಯುವ ಕೊನೆಯ ಪ್ರಯತ್ನಗಳಷ್ಟೇ ! ಈ ಬಡಪಾಯಿ ಜೀವ ಅನ್ನುವುದು ಪ್ರಪಂಚದ ಎಲ್ಲಾ ಸಂಪತ್ತುಗಳಿಗಿಂತ ಸರ್ವಶ್ರೇಷ್ಠವಾದುದು. ಉಳಿಸಿಕೊಳ್ಳಲು ಏನು ಬೇಕಾದರೂ ನಾವು ಮಾಡಲು ಸಿದ್ಧರಿರುತ್ತೇವೆ. ನಮ್ಮ ಜೀವ ಎಷ್ಟು ಮುಖ್ಯವೋ, ಆವತ್ತು ತೀರಿಕೊಂಡ ನಿರ್ಭಯಾಳ ಜೀವವೂ ಕೂಡ ಮುಖ್ಯವಲ್ಲವೇ ?

ಎಷ್ಟೋ ಸಲ ವಿಷಗಳಿಗೆಯಲ್ಲಿ ಪರಿಸ್ಥಿಯ ‘ ಲಾಭ ಮಾಡಿಕೊಳ್ಳಲು ಮನುಷ್ಯ ಮುಂದಾಗುತ್ತಾನೆ ಮತ್ತದು ಆತನನ್ನು ಗಲ್ಲು ಕಂಬದೆಡೆಗೆ ಎಳೆದು ತರುತ್ತದೆ. ಏನೇ ಆಗಲಿ, ಗಲ್ಲು ಶಿಕ್ಷೆ ಭಾರತದಲ್ಲಿ ರದ್ದಾಗಬೇಕು. ಅದರ ಬದಲು ಸೀರಿಯಲ್ ಕಿಲ್ಲರ್ ಗಳಂತಹ ಜನರಿಗೆ ಮರಣ ದಂಡನೆ ಅನಿವಾರ್ಯವಾಗಿದ್ದರೆ, ಆಗ ಲೇಥಲ್ ಡೋಸ್ ಕೊಟ್ಟು ನೋವಿಲ್ಲದ ಮರಣವನ್ನು ದಯಪಾಲಿಸಬೇಕು. ಅಟ್ ಲೀಸ್ಟ್ ಸಾವಿನ ಆಯ್ಕೆವಿಧಾನದಲ್ಲಾದರೂ ಕರುಣಾಮಯಿಯಾಗೋಣ.

Leave A Reply

Your email address will not be published.