ಕೋಟೆ ಕೋಟೆ ಗೆದ್ದೋರ್ಗೆ ಕೆ ಆರ್ ಪೇಟೆ ಗೆಲ್ಲೋದ್ ಕಷ್ಟಾನ ?
ಬಿಜೆಪಿಯ ತಳಮಟ್ಟದ ಕಾರ್ಯಕರ್ತರು ಮತ್ತು ಆರ್ ಎಸ್ ಎಸ್ ಕಾರ್ಯಕರ್ತರ ಪ್ಲಾನಿಂಗು, ನಿಸ್ವಾರ್ಥತೆ ಮತ್ತು ಹಗಲಿರುಳು ಕೆಲಸಮಾಡುವ ಶ್ರಮ ನೋಡಿ ಕೆ ಆರ್ ಪೇಟೆಯ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಮತ್ತು ಯಶವಂತಪುರದ ಎಸ್ ಟಿ ಸೋಮಶೇಖರ್ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಹೀಗೆಲ್ಲ ಮಾಡುವುದು ಸಾಧ್ಯವಾ ಎಂದು ಅವರು ಅಚ್ಚರಿಪಟ್ಟಿದ್ದಾರೆ.
ಈ ಇಬ್ಬರು ನಾಯಕರೂ ಹುಟ್ಟಿನಿಂದಲೇ ಬಿಜೆಪಿ ಆಗಲಿ, ಸಂಘಪರಿವಾರವೇ ಆಗಲಿ, ಯಾವುದರ ಸಂಪರ್ಕವೇ ಇಲ್ಲದೆ ಬೆಳೆದು ಬಂದವರು. ಅವರಿಬ್ಬರಿಗೂ ತಮ್ಮದೇ ಆದ ವೋಟ್ ಬ್ಯಾಂಕ್ ಇದ್ದವು. ಪ್ರತಿನಿಧಿಸಲು ಪ್ರಬಲ ಜಾತಿ, ಕೈಯಲ್ಲಿ ಸುರಿಯಲು ಹಣ ಎಲ್ಲ ಇತ್ತು. ಹಾಗಾಗಿ ಚುನಾವಣೆಯನ್ನು ಸಲೀಸಾಗಿ ಗೆಲ್ಲುತ್ತ ಬರುತ್ತಿದ್ದರು. ಆದರೆ ಈ ಸಲ ಬದಲಾದ ರಾಜಕೀಯ ವಿದ್ಯಮಾನಗಳ ಭಾಗವಾಗಿ ಅವರುಗಳು ಬಿಜೆಪಿ ಚಿಹ್ನೆಯಡಿ ನಿಂತಿದ್ದಾರೆ. ಹಾಗಾಗಿ ಅವರಿಬ್ಬರಿಗೆ ಬಿಜೆಪಿಯ ನಾಯಕರುಗಳ ತಂತ್ರಗಳು ಮತ್ತು ಬಿಜೆಪಿ ಹುಡುಗರ ಹಠಬಿಡದೆ ಕೆಲಸ ಮಾಡುವ ಕಾರ್ಯವೈಖರಿ ಹೊಸದು.
ಮೊನ್ನೆ ನಡೆದ ಚುನಾವಣೆಯ ಫಲಿತಾಂಶದ ನಂತರ ಎಸ್ ಟಿ ಸೋಮಶೇಖರವರು ಬಹಿರಂಗವಾಗೇ ಇದನ್ನು
ಕೆ ಆರ್ ಪೇಟೆಯ ನಾರಾಯಣಗೌಡರಂತೂ ಪೇಟೆ ಗೆಲ್ಲಲು ತಂತ್ರ ಹೂಡಿದ್ದ ಯಡಿಯೂರಪ್ಪ ಪುತ್ರ ವಿಜಯೇಂದ್ರನನ್ನು ತಬ್ಬಿಕೊಂಡದ್ದೇ ತಬ್ಬಿಕೊಂಡದ್ದು. ಅವರಿಗೆ ಬಿಜೆಪಿ ಟೀಮಿನ ಕಾರ್ಯವೈಖರಿ ಕಂಡು ಕೊರಳುಬ್ಬಿ ಬಂದಿತ್ತು.

ಅಪ್ಪನ ಕೈಯಲ್ಲಿ ಆಗದ ಕೆಲಸವನ್ನು, ಅಪ್ಪನ ಹುಟ್ಟೂರು ಬೂಕನಕೆರೆ ಇರುವ ಕೆ ಆರ್ ಪೇಟೆಯಲ್ಲಿ ಮಗ ವಿಜಯೇಂದ್ರ ಮಾಡಿದ್ದಾರೆ. ವಿಜಯೇಂದ್ರ ಅವರ ಮಾತು, ಬಾಡಿ ಲ್ಯಾಂಗ್ವೆಜ್ , ಮಾತಾಡುವ ರೀತಿ ಜನರಿಗೆ ಇಷ್ಟ ಆಗುತ್ತಿದೆ. ಕರ್ನಾಟಕದಲ್ಲಿ ಮತ್ತೊಬ್ಬ ಬಿಜೆಪಿ ಲೀಡರ್ ಶಿಪ್ ಉದಯಿದ್ದಾನೆ !