ಭೂಮಿಗೆ ತನ್ನ ಗೊಬ್ಬರ ತಾನು ತಯಾರಿಸಿಕೊಳ್ಳುವ ಶಕ್ತಿಯಿದೆ । ನಿಮ್ಮ ಜಮೀನು ಒಂದು ಸ್ವತಂತ್ರ ರಾಷ್ಟ್ರ !! ( ಪಾರ್ಟ್- 2 )
ನ್ಯಾಚುರಲ್ ಫಾರ್ಮರ್ ದಿ.ನಾರಾಯಣ ರೆಡ್ಡಿಯವರ ಸಹಜ ಕೃಷಿ ಪಾಠ . “ನಾವೇನು ತಿನ್ನುತ್ತಿದ್ದೇವೆಯೋ ಅದೇ ಪರಿಮಾಣದಲ್ಲಿಯೇ ನಾವು ನಮ್ಮ ತೋಟದಲ್ಲಿ ಬಿತ್ತನೆ ಮಾಡಬೇಕು. ನಮ್ಮ ಊಟದಲ್ಲಿ 60% ಏಕದಳ ಧಾನ್ಯಗಳು, 30% ದ್ವಿದಳ ಧಾನ್ಯಗಳು ಅಂದರೆ ಪಲ್ಸಸ್ ಇರುತ್ತದೆ. ಮತ್ತು ಉಳಿದದ್ದು ಮಸಾಲೆ ಪದಾರ್ಥಗಳು. ಇಷ್ಟೆಲ್ಲವನ್ನೂ ನಾವು ಬೆಳೆಸಿದರೆ ತುಂಬಾ ಒಳ್ಳೆಯದು. ನಮ್ಮ ಊಟ ಮಾಡುವ ಆಹಾರದ ಅನುಪಾತದಲ್ಲೇ ನಮ್ಮ ಬಿತ್ತನೆ ನಡೆಯಬೇಕು.” ” ಈ ತೆಂಗಿನ ನಾರು ಇರುತ್ತಲ್ಲ. ಅದರಲ್ಲಿ 30 ಪರ್ಸೆಂಟ್ ಪೊಟ್ಯಾಷ್ ಇರುತ್ತದೆ. …