ಹೀಗೂ ಇರ್ತಾರೆ ಜನ । ಪ್ಲೇನ್ ಸ್ಟುಪಿಡ್ & ದಿ ಬ್ರೈಟ್ಸ್

ಪ್ಲೇನ್ ಸ್ಟುಪಿಡ್ ಯಾರು ?

ವಿಮಾನ ಯಾನ ಅತ್ಯಂತ ಸುರಕ್ಷಾ ಸಾಗಾಣಿಕಾ ವಿಧಾನ. ಆದ್ದರಿಂದ ಆಧುನಿಕ ಜಗತ್ತು ಹೆಚ್ಚು ಹೆಚ್ಚು ವಿಮಾನ ನಿಲ್ದಾಣಗಳಾಗಬೇಕು, ಇರುವ ವಿಮಾನ ನಿಲ್ದಾನಗಳು ಅಂತಾರಾಷ್ಟೀಯ ಮಟ್ಟಕ್ಕೇರಬೇಕು, ಪ್ರಮುಖ ಪಟ್ಟಣಗಳಲ್ಲಿ ಒಂದು ವಿಮಾನ ನಿಲ್ದಾಣ ಆಗಬೇಕೆಂದುಕೊಂಡು ಕಾಯುತ್ತಿರುವಾಗ, ಇವರು ಬಂದಿದ್ದಾರೆ. ಇವರಿ ‘ ಪ್ಲೇನ್ ಸ್ಟುಪಿಡ್ ‘ ಮಂದಿ. ಅವರು ವಿಮಾನ ಪ್ರಯಾಣವೇ ಬೇಡ ಎಂದು ಬೀದಿಯಲ್ಲಿ ಪ್ರತಿಭಟನೆಗೆ ನಿಂತವರು.
21 ನೆಯ ಶತಮಾನದಲ್ಲಿ, ವಿಮಾನಕ್ಕಿಂತ ಬೇರೆ ಸುರಕ್ಷಿತ ಪ್ರಯಾಣ ಬೇರೆ ಯಾವುದಿದೆ ? ಆದರೂ ಇವರಿಗೆ ವಿಮಾನ ಅಂದರೆ ಅಲರ್ಜಿ.

ಈ ಸಂಘಟನೆಯನ್ನು ಅಸ್ತಿತ್ವಕ್ಕೆ ತಂದವನು ಯುನೈಟೆಡ್ ಕಿಂಗ್ ಡಮ್ ನ ಜೋಸ್ ಗಾರ್ಮನ್ ಎಂಬವನು 2005 ರಲ್ಲಿ.
ಅವರದು ತಕ್ಷಣದ ನಾಲ್ಕು ಡಿಮಾಂಡುಗಳಿವೆ.
ಮೊದಲನೆಯದಾಗಿ, ಕಡಿಮೆ ದೂರದ ಅಂತಾರಾಜ್ಯ ವಿಮಾನಯಾನವನ್ನು ರದ್ದುಪಡಿಸಬೇಕು. ಎರಡನೆಯದಾಗಿ, ವಿಮಾನ ಹಾರಾಟಗಳ ಸಂಖ್ಯೆಯಲ್ಲಿ ಕಡಿತಗೊಳಿಸಿ, ಆ ಮೂಲಕ ವಾತಾವರಣ ಬದಲಾವಣೆ ‘ ಕ್ಲೈಮೇಟ್ ಚೇಂಜ್ ‘ ಆಗುವುದನ್ನು ನಿಯಂತ್ರಿಸಬೇಕು. ಮೂರನೆಯದಾಗಿ, ವಿಮಾನಯಾನದ ಜಾಹೀರಾತನ್ನು ನಿಷೇಧಿಸಬೇಕು. ನಾಲ್ಕನೆಯದಾಗಿ, ಸುಸ್ಥಿರ ಉದ್ಯೋಗಗಳು ಮತ್ತು ಸಾರಿಗೆಯತ್ತ ಪರಿವರ್ತನೆಯಾಗಲು ಒತ್ತಾಯ.

ಇತ್ತೀಚಿಗೆ 2010 ರಲ್ಲಿ ಅಬೇರ್ಡೀನ್ ಏರ್ ಪೋರ್ಟ್ ಗೆ ನುಗ್ಗಿದ ‘ ಪ್ಲೇನ್ ಸ್ಟುಪಿಡ್ಸ್ ‘ ವಿಮಾನದ ಶೆಡ್ಯೂಲ್ ನಲ್ಲಿ ಭಾರೀ ವ್ಯತ್ಯಾಸವನ್ನುಂಟುಮಾಡಿದ್ದರು. ಅಲ್ಲದೆ ಎಮರ್ಜೆನ್ಸಿ ಪ್ಲೈಟ್ ಒಂದರ ಟೇಕ್ ಆಫ್ ಗೂ ತಡೆಯೊಡ್ಡಿ ಸರ್ಕಾರದಿಂದ ಫೈನ್ ಹಾಕಿಸಿಕೊಂಡಿದ್ದರು.
ಅವರ ಹೋರಾಟ ಹಿಂಸೆಯಿಲ್ಲದ ಪ್ರತಿಭಟನೆ. ಆದರೆ ಅವ್ರಿಗೆ ರಾಜತಾಂತ್ರಿಕ ಹೋರಾಟಗಳಲ್ಲಿ ನಂಬಿಕೆಯಿಲ್ಲ. ಯಾಕೆಂದರೆ ರಾಜಕೀಯ ನಾಯಕರುಗಳು ಮತ್ತು ವಿಮಾನಯಾಣ ಸಂಸ್ಥೆಗಳು ಪರಸ್ಪರ ಹೊಂದಾಣಿಕೆಯಲ್ಲಿವೆ, ಆದ್ದರಿಂದ ಬದಲಾವಣೆ ಅಸಾಧ್ಯ ಎಂಬುದು ಅವರ ನಿಲುವು. ಡೈರೆಕ್ಟ್ ಆಕ್ಷನ್ ಮಾತ್ರವೇ, ಜಗತ್ತಿನೆಲ್ಲೆಡೆಯಲ್ಲಿ ಅಮೂಲಾಗ್ರ ಸಾಮಾಜಿಕ ಬದಲಾವಣೆ ಮಾಡಿದ ಟೂಲ್ ಎಂಬುದು ಇವರ ನಂಬಿಕೆ.

ಒಟ್ಟಾರೆಯಾಗಿ ಮೂಲ ಉದ್ದೇಶ ಒಳ್ಳೆಯದೇ. ಪರಿಸರದ ಬಗೆಗಿನ ಅವರ ಕಾಳಜಿಯ ಬಗೆಗೆ ಎರಡು ಮಾತಿಲ್ಲ. ಆದರೆ ವಿಮಾಯಣದಷ್ಟು ಸುರಕ್ಷಿತವಾದ ಪ್ರಯಾಣವನ್ನೇ ಬೇಡ ಅನ್ನುವುದು ಅಷ್ಟು ಪ್ರಾಕ್ಟಿಕಲ್ ಅಪ್ರೋಚ್ ಅನ್ನಿಸಲ್ವಲ್ಲ..
ಹೆಚ್ಚಿನ ವಿವರಗಳಿಗೆ https://planestupid.com.archived.website

ದಿ ಬ್ರೈಟ್ಸ್:

ಬ್ರೈಟ್ಸ್ ಜನರು ತಮ್ಮನ್ನು ತಾವು ರೈಟ್ ಅಂದುಕೊಂಡು ಬದುಕುವವರು. ‘ ದಿ ಬ್ರೈಟ್ಸ್’ ಅವರದ್ದೊಂದು ಆನ್ ಲೈನ್ ಕಮ್ಮ್ಯುನಿಟಿ ಇದೆ. ಅವರು ಪಕ್ಕ ಪ್ರಾಕ್ಟಿಕಲ್ ವಾದಿಗಳು. ನ್ಯಾಚುರಲಿಸ್ಟರು.
ಇಂತಹ ಸಂಸ್ಥೆಯು 2003 ರಲ್ಲಿ ಪ್ರಾರಂಭವಾಯಿತು. ಈ ಸಂಸ್ಥೆಯಲ್ಲಿ ಇರುವವರು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಮಾತ್ರ ನಿರ್ಧಾರಕ್ಕೆ ಬರುವವರು. ಇವತ್ತಿನ ಸೈನ್ಟಿಫಿಕ್ ಅಡ್ವಾನ್ಸ್ ಮೆಂಟಿನ ಮತ್ತು ಇನ್ಫರ್ಮೇಷನ್ ಯುಗದಲ್ಲಿ ಬಹಳಷ್ಟು ಮೌಡ್ಯತೆ ನಮ್ಮಲ್ಲಿದೆ. ಆದ್ದರಿಂದ ವೈಜ್ಞಾನಿಕ ನೆಲೆಗಟ್ಟಿನಿಂದ ಮಾತ್ರ ಬದುಕಬೇಕು. ಈ ಪ್ರಪಂಚದಲ್ಲಿ ಅತೀಂದ್ರಿಯ ಮತ್ತು ಅತಿಮಾನುಷ ಶಕ್ತಿಗಳು ಇಲ್ಲವೇ ಇಲ್ಲ ಎಂದು ಬಲವಾಗಿ ಪ್ರತಿಪಾದಿಸುತ್ತಿರುವವರಿವರು.
ಇಲ್ಲಿಯತನಕ ಎಷ್ಟೋ ಸಮಾಜಗಳಲ್ಲಿ ಸಹಜತೆಯ ಮೇಲೆ ಸಮಾಜದ ಸಾಮಾಜಿಕ ಪ್ರಜ್ಞೆ ಮೂಡಿಲ್ಲ. ಎಷ್ಟೋ ಕಡೆ ಈ ವೈಜ್ಞಾನಿಕ ದೃಷ್ಟಿಕೋನವನ್ನು ಸಾಮಾಜಿಕ ಮತ್ತು ರಾಜಕೀಯ ಕಾರಣಗಳಿಗಾಗಿ ತಡೆಹಿಡಿಯಲಾಗಿದೆ. ಅದಕ್ಕಾಗಿ ‘ ದಿ ಬ್ರೈಟ್ಸ್ ‘ ಶ್ರಮಿಸುತ್ತಿದ್ದಾರೆ. ಇವರನ್ನು ನಾಸ್ತಿಕರೆಂದೂ, ಮೆಟೀರಿಯಲಿಸ್ಟಿಕ್, ರೇಷನಲಿಸ್ಟ್, ಸೆಕ್ಯುಲರ್, ಹ್ಯುಮನಿಸ್ಟ್, ಸ್ಕೆಪ್ಟಿಸ್ಟ್, ಅಗ್ನೋಸ್ಟಿಕ್ಸ್ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಈಗ 138 ರಾಷ್ಟ್ರಗಳಲ್ಲಿ ಅವರ ಅಸ್ತಿತ್ವವಿದೆ. ಸೆಮಿನಾರುಗಳು, ಸಭೆಗಳು, ಮೀಟಿಂಗುಗಳ ಮೂಲಕ ಸೈಂಟಿಫಿಕ್ ಅಪ್ರೋಚ್ ಅನ್ನು ಜನರಲ್ಲಿ ಮೂಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ.
ಬ್ರೈಟ್ಸ್ ಆರ್ ಆಲ್ವೇಸ್ ರೈಟ್ !

ಸುದರ್ಶನ್ ಬಿ.ಪ್ರವೀಣ್, ಬೆಳಾಲು

Leave A Reply