ಮ್ಯಾನೇಜ್ ಮೆಂಟ್ ಸ್ಟೋರಿ । ಮಗನ ಪ್ರಶ್ನೆಗೆ ಒಂಟೆ ಅಮ್ಮನಿರುತ್ತರ !

ಪರಿಣತಿ, ಜ್ಞಾನ, ಶಕ್ತಿ ಮತ್ತು ಅನುಭವ- ಈ ನಾಲ್ಕು ವ್ಯಕ್ತಿಯ ಉನ್ನತಿಗೆ ಬಹುಮುಖ್ಯ ಕಾರಣವಾಗಬಲ್ಲ ಅಂಶಗಳು. ಇವುಗಳಲ್ಲಿ ಪ್ರತಿಯೊಂದೂ ಇನ್ನೊಂದಕ್ಕೆ ಪೂರಕ. ಈ ನಾಲ್ಕೂ ಇದ್ದೂ ಅನುಭವವೊಂದು ಇಲ್ಲದೆ ಹೋದರೆ, ನಮ್ಮಜ್ಞಾನದಿಂದಾಗಲೀ ಅನುಭವಗಳ ಮೂಟೆಯಿಂದಾಗಲೀ ಏನೇನೂ ಪ್ರಯೋಜನವಿಲ್ಲ. ನಮ್ಮ ಶಕ್ತಿ ಸಾಮರ್ಥ್ಯ, ಜ್ಞಾನ ವಿಜ್ಞಾನ, ಪರಿಣತಿ ಮತ್ತು ಅನುಭವಗಳಿಗೆ ಬೆಲೆ ಬರುವುದು ಸರಿಯಾದ ಅವಕಾಶ ದೊರೆತಾಗ ಮಾತ್ರ.

ಕೆಲವರಿಗೆ ಆ ಅವಕಾಶ ತಂತಾನೇ ದೊರೆಯುತ್ತದೆ. ಅವರು ಜೀವನದಲ್ಲಿ ಮುಂದೆ ಬರುತ್ತಾರೆ. ಮತ್ತೆ ಕೆಲವರಿಗೆ ಸರಿಯಾದ ಅವಕಾಶ ದೊರೆಯದೆ ಹೋದರೂ, ಸ್ವಪ್ರಯತ್ನದಿಂದ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಅಂತವರು ಎಲ್ಲರಿಗಿಂತ ಹೆಚ್ಚು ಪ್ರಸಿದ್ಧಿ ಹೊಂದುತ್ತಾರೆ.ಅವಕಾಶಗಳಿಗೆ ಹೊಂಚಿ ಕೂರಲು ತಾಳ್ಮೆಯಿರುವ ಬೇಟೆಗಾರನ ಕೋವಿಗೆ ಮಾತ್ರ ಬಲಿ ಬೀಳುತ್ತದೆ.


Ad Widget

Ad Widget

Ad Widget

ಅವಕಾಶ ತೀರಾ ಅಗತ್ಯವಾದದ್ದು. ಎಲ್ಲ ಇದ್ದೂ ಅವಕಾಶ ಇಲ್ಲದೆ ಹೋದರೆ ಏನಾಗಬಹುದು…..? ಮುಂದಕ್ಕೆ ಕಥೆ ಓದಿ.

ಚಳಿಗಾಲದ ಒಂದು ಬೆಳಗು. ತಾಯಿ ಒಂಟೆ ಮತ್ತು ಮಗ ಸೂರ್ಯಕಿರಣಕ್ಕೆ ಬೆನ್ನೊಡ್ಡಿ ಚಳಿ ಕಾಯಿಸುತ್ತಾ ಮಲಗಿದ್ದರು. ಇದ್ದಕ್ಕಿದ್ದಂತೆ ಒಂಟೆ ಮಗನಿಗೆ ತಲೆಯಲ್ಲಿ ನೂರೆಂಟು ಆಲೋಚನೆ ಮತ್ತು ಪ್ರಶ್ನಿಸುವ ಜ್ಞಾನೋದಯ
” ಅಮ್ಮಅಮ್ಮ, ನಮ್ಮ ಬೆನ್ನ ಮೇಲೆ ಈ ಡುಬ್ಬ ಯಾಕಿದೆ ಅಮ್ಮ? ”
ಆಕೆಗೆ ಮಗ ಪ್ರಶ್ನೆ ಕೇಳುವ ವಯಸ್ಸಿಗೆ ಬಂದ ಬಗ್ಗೆ ಖುಷಿ. ಆ ಖುಷಿಯಲ್ಲಿಯೇ ಕೊರಳ ಮೇಲೆ ಮುತ್ತಿಕ್ಕಿ, ನೆಕ್ಕಿ, ಒಂದಷ್ಟು ಎಂಜಲು ಮಾಡಿ ನಾಲಿಗೆಯಿಂದ ಮೈ ಸವರಿ ಹೇಳುತ್ತಾಳೆ. ” ನೋಡು ಮಗಾ, ನಾವು ಮರುಭೂಮಿಯ ಮನುಷ್ಯರಲ್ಲವೇ ? ಮರುಗಾಡಿನಲ್ಲಿ ನೀರು ಮತ್ತು ಆಹಾರ ಸುಲಭವಾಗಿ ಸಿಗುವುದಿಲ್ಲ. ಒಂದು ಪ್ರಯಾಣ ಹೊರಟರೆ ಮತ್ತೆ ಬರುವುದು ಹಲವು ದಿನಗಳ ನಂತರವೇ. ಮಾರ್ಗ ಮಧ್ಯದಲ್ಲಿನ ಬಳಲಿಕೆಗೆ ನೀರು ಮತ್ತು ಆಹಾರ ಬೇಕು. ಪ್ರಯಾಣದ ಮಧ್ಯೆ ಇರುವ ಸುದೀರ್ಘ ವಿಶ್ರಾಂತಿಯ ಸಮಯದಲ್ಲಿ ಅದನ್ನು ನೀರು ಮತ್ತು ಆಹಾರವನ್ನು ನಾವು ಈ ಡುಬ್ಬದಲ್ಲಿ ಇಟ್ಟುಕೊಂಡಿರುತ್ತೇವೆ. ಮತ್ತು ಪ್ರಯಾಣದ ಸಮಯದಲ್ಲಿ ಅದನ್ನು ಬಳಸುತ್ತೇವೆ ”

ಮಗ ಒಂಟೆ : ” ಆದರೆ ನಮ್ಮ ಈ ಕಾಲುಗಳು ಯಾಕೆ ಇಷ್ಟು ಉದ್ದವಾಗಿವೆ? ಅಲ್ಲದೆ, ನಮ್ಮ ಪಾದಗಳು ಯಾಕೆ ವೃತ್ತಾಕಾರದಲ್ಲಿದೆ ?”
” ಪುಟ್ಟಾ, ನಾವು ಮರುಭೂಮಿಯ ಹೂತು ಹೋಗುವ ಮರಳಿನಲ್ಲಿ ನಡೆದಾಡಬೇಕಾದರೆ ಇಂತಹಾ ಬಲಿಷ್ಠ ಉದ್ದನೆಯ ಕಾಲು ಬೇಕಾಗುತ್ತದೆ. ಇದರ ಸಹಾಯದಿಂದ ಉಳಿದೆಲ್ಲರಿಗಿಂತ ವೇಗವಾಗಿ ಮತ್ತು ಶಕ್ತವಾಗಿ ನಾವು ಗುರಿತಲುಪಬಲ್ಲೆವು ” ಹೆಮ್ಮೆಯಿಂದ ಹೇಳಿದಳು ತಾಯಿ.

” ಮತ್ತೆ ಈ ಕಣ್ರೆಪ್ಪೆಗಳೇಕೆ ಇಷ್ಟು ಉದ್ದಕ್ಕೆ ? ನೋಡು, ಇದು ಕೆಲವೊಮ್ಮೆನನ್ನ ದೃಷ್ಟಿಗೇ ತೊಂದರೆ ಕೊಡುತ್ತಿದೆ.” ಮಗನ ದೂರು.
” ಕಂದಾ, ಈ ಕಣ್ಣ ರೆಪ್ಪೆಗಳು ನಮ್ಮ ಸುರಕ್ಷೆಗೆ ದೇವರು ನೀಡಿದ ವರಗಳು. ಬಿರುಗಾಳಿಯ ಬೀಸು ಮತ್ತು ಮರಳು ನಮ್ಮ ಕಣ್ಣಿಗೆ ಬೀಳದಂತೆ ರಕ್ಷಿಸದಂತೆ ಇವು ರಕ್ಷಿಸುತ್ತದೆ.” ಹೇಳಿದ ತಾಯಿ ಒಂಟೆಯ ಕಣ್ಣುಗಳು ಹೆಮ್ಮೆಯಿಂದ ಮಿಂಚಿದವು.

ಮಗು ಒಂಟೆಯಲ್ಲಿ ಒಂದರೆಕ್ಷಣೆ ಆಲೋಚನೆ. ಮಗನ ಆಲೋಚನಾ ಲಹರಿಗೆ ಭಂಗ ಬರದ ರೀತಿಯಲ್ಲಿ ಆತನ ಮೈಸವರುವ ಕಾಯಕವನ್ನು ಆಕೆ ಮುಂದುವರಿಸಿದಳು.
” ಅದೆಲ್ಲಾ ಸರಿಯಮ್ಮ, ಈ ಡುಬ್ಬ ಇರುವುದು ಕಷ್ಟ ಕಾಲದಲ್ಲಿ ನೀರು ಆಹಾರ ಶೇಖರಣೆಗೆ. ಉದ್ದನೆಯ ಕಾಲಿರುವುದು ನಾವು ಮರುಭೂಮಿಯಲ್ಲಿ ನಡೆದಾಡಲು ಮತ್ತು ಕಣ್ಣರೆಪ್ಪೆಗಳಿರುವುದು ಮರಳಗಾಳಿಯಿಂದ ನಮ್ಮನ್ನು ರಕ್ಷಿಸಲು. ಎಲ್ಲ ಸರಿ, ಆದರೆ ಎಲ್ಲ ಇದ್ದೂ ನಾವಿಲ್ಲಿ ಜೂನಲ್ಲಿ ಹಾಕಿದ್ದೇವೆ ? “

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave a Reply

error: Content is protected !!
Scroll to Top
%d bloggers like this: