Cassava Kabab: ಮಕ್ಕಳ ಪಾಲಿನ ವೆಜಿಟೇರಿಯನ್ ಸರ್ಪ್ರೈಸ್ : ಕಸಾವಾ ಕಬಾಬ್ !

food lovers non veg Cassava Kebab Recipe that kids will love

ಮರಗೆಣಸು ಒಂದು ಉತ್ಕೃಷ್ಟ ಆಹಾರ. ಬಡವರ ಆಹಾರವೆನ್ನುವುದಕ್ಕೂ ಅಡ್ಡಿಯಿಲ್ಲ. ಆದರೆ ಪೌಷ್ಟಿಕಾಂಶಗಳಲ್ಲಿ, ಶರ್ಕರ ಪಿಷ್ಠ ಮತ್ತು ಪ್ರೊಟೀನ್ ಅಂಶಗಳಲ್ಲಿ ಅದು ಅತ್ಯಂತ ಶ್ರೀಮಂತ. ಮರಗೆಣಸನ್ನು ಹಾಗೆಯೆ ಸಿಪ್ಪೆ ಸುಲಿದು ತೊಳೆದು, ಉಪ್ಪು ಹಾಕಿ ನೀರಿನಲ್ಲಿ ಬೇಯಿಸಿ ಮಕ್ಕಳಿಗೆ – ದೊಡ್ಡವರಿಗೆ ಊಟದ ಬದಲು ತಿನ್ನಲು ಕೊಡಬಹುದು. ಬೆಳಿಗ್ಗೆ – ಸಂಜೆಯ ತಿಂಡಿಯಾಗಿ ಕೂಡ ಬಳಸಬಹುದು. ಉಪ್ಗರಿ ಮಾಡಬಹುದು. ಮಕ್ಕಳು ಸಪ್ಪೆ ತಿನ್ನಲು ಹಿಂಜರಿದರೆ ಚಿಂತೆ ಇಲ್ಲ, ಮರಗೆಣಸಿನ ಕಬಾಬ್ ಮಾಡಿ ಕೊಡಿ. ನಿಮ್ಮಬೆನ್ನು ಬಿದ್ದು ಕಾಡಿ ಬೇಡಿ ತಿನ್ನುತ್ತವೆ. ಅವರಿಗೆ ರುಚಿ, ನಿಮ್ಮ ಲೆಕ್ಕದಲ್ಲಿ ಪೌಷ್ಠ ಸತ್ವಗಳು- ಎರಡನ್ನೂ ಸಮನಾಗಿ ಬ್ಯಾಲೆನ್ಸ್ ಬಡಬಲ್ಲ ಇವತ್ತಿನ ನಮ್ಮ ಅಡುಗೆಯೇ, ಕಸಾವಾ ಕಬಾಬ್
ಇದರ ತಯಾರಿ ತುಂಬಾ ಸರಳ. ಪೇಟೆಯಿಂದ ಯಾವುದಾದರೊಂದು ಒಳ್ಳೆಯ ಚಿಕನ್ ಕಬಾಬ್ ಪುಡಿ ತಂದಿಟ್ಟುಕೊಳ್ಳಿ. ವೆಜಿಟೇರಿಯನ್ನರು ಚಿಕನ್ ಕಬಾಬ್ ಪುಡಿ ಕೊಳ್ಳಲು ಮುಜುಗುರ ಪಟ್ಟುಕೊಳ್ಳಬೇಡಿ. ಚಿಕನ್ ಕಬಾಬ್ ಪುಡಿಯು ಒಂದು ಪರಿಪೂರ್ಣ ಶಾಖಾಹಾರಿ ಪದಾರ್ಥಗಳಿಂದ ಮಾಡಲ್ಪಟ್ಟಿದೆ.


1. ಚಿಕನ್ ಮಸಾಲಾ ಪುಡಿಯನ್ನು ಸ್ಯಾಚೆಟ್ ನಲ್ಲಿ ಹೇಳಿದಂತೆ ಸೇರಿಸುವ ಅವಕಾಶ ಇದ್ದಾರೆ, ಮೊಟ್ಟೆ ಸಹ್ಯವಾದರೆ ಸೇರಿಸಿ. ಮೊಟ್ಟೆಯ ಬದಲು ಜೋಳದ ಹುಡಿ, ಅಥವಾ ಸ್ವಲ್ಪ ಮೈದಾ ಕೂಡಾ ನಡೆಯುತ್ತದೆ. ಮಿಶ್ರಣಕ್ಕೆ ಉಪ್ಪು ಹೊಂದಿಸಿ.
2. ಮರಗೆಣಸನ್ನು ಕ್ಲೀನ್ ಮಾಡಿ ಬೆರಳ ಗಾತ್ರದ ಉದ್ದಕ್ಕೆ, ಹೆಂಗಾದರ ಹೆಬ್ಬೆರಳ ದಪ್ಪಕೆ ತುಂಡರಿಸಿಡಿ. ಹೆಚ್ಚು ದಪ್ಪ ಆದಲ್ಲಿ, ಮಸಾಲೆ ಮರಗೆಣಸಿನೊಳಕ್ಕೆ ಇಳಿಯುವುದು ನಿಧಾನವಾಗುತ್ತದೆ.
3. ಮರಗೆಣಸಿಗೆ ತಯಾರು ಮಡಿದ ಮಿಶ್ರಣವನ್ನು ಹಚ್ಚಿ, ಕನಿಷ್ಠ 3 ಗಂಟೆ ಮ್ಯಾರಿನಂತೆ ಆಗಲು ಇಟ್ಟುಬಿಡಿ.
4. ನಂತರ, ತವ ಬಿಸಿಮಾಡಿ, ಎಣ್ಣೆಯಲ್ಲಿ ಶಾಲೋ ಫ್ರೈ ಮಾಡಿ. ಉರಿ ಮಂದವಾಗಿರಲಿ.ತೆಂಗಿನೆಣ್ಣೆ ಬಳಸುವವರು ತೆಂಗಿನೆಣ್ಣೆಯಿಂದಲೇ ಮಾಡಿ.
5. ಅವಾಗಾವಾಗ ಅಡಿಮೇಲು ಮಾಡಿ. ತಳ ಹಿಡಿಯದಂತೆ ನೋಡಿಕೊಳ್ಳಿ. ಎಳೆಯ ಮರಗೆಣಸು ಬೇಗ ಬೇಯುತ್ತದೆ. ಬಲಿತ ಗೆಣಸು ಬೇಯಲು ಸ್ವಲ್ಪ ಸಮಯ ತೆಗೆದು ಕೊಳ್ಳುತ್ತದೆ.
ನೀವೀಗ ಮಾಡಿದ್ದು ಒಂದು ಮಾಮೂಲಿ ಕಬಾಬ್ ಆಗಿದ್ದರೂ, ಅದರ ರುಚಿ ಅದ್ಭುತವಿರುತ್ತದೆ. ಕಬಾಬ್ ನ ಬಣ್ಣವಂತೂ, ಒಳ್ಳೆ ಗೋಲ್ಡ್ ಕಲರ್ನಲ್ಲಿರುತ್ತದೆ. ಮಕ್ಕಳು ಅರ್ಧ ಬಣ್ಣಕ್ಕೆ ಫ್ಲಾಟ್ ಆಗುತ್ತಾರೆ. ಆಯ್ತಲ್ಲ, ಬಣ್ಣ, ರುಚಿ, ಶಕ್ತಿ. ಮತ್ತಿನ್ನೇನು ಬೇಕು ?

 

Leave A Reply

Your email address will not be published.